Karnataka Budget Session: ನೀನು ಏನೋ ಅಂದ್ರೆ ನಾನು ಯಾಕೋ ಅಂತೀನಿ; ಸದನದಲ್ಲಿ ಬಸನಗೌಡ ಪಾಟೀಲ್-ಡಿಕೆ ಶಿವಕುಮಾರ್ ನಡುವೆ ಚಕಮಕಿ  

|

Updated on: Feb 19, 2024 | 7:22 PM

ಯತ್ನಾಳ್ ಮಾತಾಡುವಾಗ ಸರಕಾರದ ವಿರುದ್ಧ ಕಮೀಶನ್ ಪಡೆಯುವ ಆರೋಪಗಳನ್ನು ಮಾಡುತ್ತಾ, ಗುತ್ತಿಗೆದಾರರ ಬಿಲ್ ಗಳನ್ನು ಸರ್ಕಾರ ಕ್ಲೀಯರ್ ಮಾಡಿಲ್ಲ, ತಮ್ಮ ಸರ್ಕಾರದ ಪೇಸಿಎಮ್ ಆಭಿಯಾನ ನಡೆಸಿ ಈಗ ಇವರೇ ಅದನ್ನು ಮಾಡುತ್ತಿದ್ದಾರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40 ಪರ್ಸೆಂಟ್ ಸರ್ಕಾರ ಅಂತ ಪದೇಪದೆ ಆರೋಪ ಮಾಡುತ್ತಾ ಇದ್ದಾರೆ, ಮೊನ್ನೆ ಅವರಿಗೆ ಜೇನುತುಪ್ಪವೋ ಲಾಲಿಪಾಪೋ ತಿನ್ನಿಸಿದ್ದಾರೆ ಅಂತ ಹೇಳಿದಾಗ ಶಿವಕುಮಾರ್ ಕೆರಳುತ್ತಾರೆ.

ಬೆಂಗಳೂರು: ಸದನದಲ್ಲಿ ಮದಗಜಗಳ ಕಾದಾಟ ಅಂತ ನಾವು ಆಗಾಗ ಹೇಳುತ್ತಿರುತ್ತೇವೆ. ಅಂಥದೊಂದು ತುಣುಕನ್ನು ನಿಮಗಿಲ್ಲಿ ತೋರಿಸುತ್ತಿದ್ದೇವೆ. ಡಿಕೆ ಶಿವಕುಮಾರ್ (DK Shivakumar) ಮತ್ತು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ರಾಜ್ಯದ ಪ್ರಮುಖ ನಾಯಕರು ಮತ್ತು ತಮ್ಮ ತಮ್ಮ ಸಮುದಾಯಗಳಿಗೂ ಅನಿವಾರ್ಯ ರಾಜಕಾರಣಿಗಳು. ಇವರ ನಡುವೆ ಸದನದಲ್ಲಿ ಆಗಾಗ ಕಾದಾಟ  ನಡೆಯುತ್ತಿರುತ್ತದೆ. ಇವತ್ತು ಯತ್ನಾಳ್ ಮಾತಾಡುವಾಗ ಸರಕಾರದ ವಿರುದ್ಧ ಕಮೀಶನ್ (commission) ಪಡೆಯುವ ಆರೋಪಗಳನ್ನು ಮಾಡುತ್ತಾ, ಗುತ್ತಿಗೆದಾರರ ಬಿಲ್ ಗಳನ್ನು ಸರ್ಕಾರ ಕ್ಲೀಯರ್ ಮಾಡಿಲ್ಲ, ತಮ್ಮ ಸರ್ಕಾರದ ಪೇಸಿಎಮ್ ಆಭಿಯಾನ ನಡೆಸಿ ಈಗ ಇವರೇ ಅದನ್ನು ಮಾಡುತ್ತಿದ್ದಾರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40 ಪರ್ಸೆಂಟ್ ಸರ್ಕಾರ ಅಂತ ಪದೇಪದೆ ಆರೋಪ ಮಾಡುತ್ತಾ ಇದ್ದಾರೆ, ಮೊನ್ನೆ ಅವರಿಗೆ ಜೇನುತುಪ್ಪನೋ ಲಾಲಿಪಾಪೋ ತಿನ್ನಿಸಿದ್ದಾರೆ ಅಂತ ಹೇಳಿದಾಗ ಕೆರಳಿದ ಶಿವಕುಮಾರ್ ಕೋವಿಡ್ ಸಮಯದಲ್ಲಿ ವಿಜಯೇಂದ್ರ ಕೋಟಿಗಟ್ಟಲೆ ಲೂಟಿ ಮಾಡಿದರು ಅಂತ ಹೇಳಿದ್ದೆಯಲ್ಲಪ್ಪ, ಅದನ್ನೂ ಹೇಳು ಅಂತ ಏಕವಚನದಲ್ಲಿ ಸಂಬೋಧಿಸಿತ್ತಾರೆ.

ಅವರ ಮಾತಿನ ವರಸೆಯಿಂದ ಯತ್ನಾಳ್ ಗೂ ಕೋಪ ಬರುತ್ತದೆ. ಅದ್ನೂ ಹೇಳ್ತೀನಪ್ಪ ಮೊದಲು ನಿಂದು ಹೇಳ್ತೀನಿ, ನೀನು ಏಕವಚನದಲ್ಲಿ ಮಾತಾಡಿದ್ರೆ ನಾನೂ ಹಾಗೆಯೇ ಮಾತಾಡ್ತೀನಿ, ನೀನು ಯಾಕೋ ಅಂದರೆ ನಾನೂ ಯಾಕೋ ಅಂತೀನಿ, ನಾನೇನೂ ನಿನ್ನ ಮುಲಾಜಿಲ್ಲ ಮತ್ತು ನಿನ್ನ ಪಕ್ಷಕ್ಕೆ ಬರೋನಲ್ಲ ಅನ್ನುತ್ತಾರೆ. ಅದಕ್ಕೆ ಶಿವಕುಮಾರ್ ನೀನು ಬರೋದು ಬೇಕಿಲ್ಲ ಅನ್ನುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ