ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಕ್ಷೇತ್ರದ ಮೇಲೆ ಡಿಕೆ ಶಿವಕುಮಾರ್​ಗೆ ಹೆಚ್ಚಾದ ಪ್ರೀತಿ, ಇದು ಬೈ ಎಲೆಕ್ಷನ್​ ತಯಾರಿಯೇ?

Updated on: Aug 27, 2023 | 11:40 AM

ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಎಸ್‌ಟಿಎಸ್ ಅವರ ಆಪ್ತರು, ಅನೇಕ ಬೆಂಬಲಿಗರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಯಾವಾಗ ಬೇಕಾದ್ರೂ ಎಸ್‌ಟಿ.ಸೋಮಶೇಖರ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಇದ್ರ ಬೆನ್ನಲ್ಲೇ ಎಸ್‌ಟಿ ಸೋಮಶೇಖರ್ ಕ್ಷೇತ್ರದ ಮೇಲೆ ಡಿಸಿಎಂ ಡಿಕೆಶಿವಕುಮಾರ್‌ಗೂ ಪ್ರೀತಿ ಹೆಚ್ಚಾಗಿದೆ.

ಬೆಂಗಳೂರು, (ಆಗಸ್ಟ್ 27): ಕಾಂಗ್ರೆಸ್​ನ(Congress) ಆಪರೇಷನ್ ಹಸ್ತದ ಚಟುವಟಿಕೆ ಗುಟ್ಟಾಗಿಯೂ ಉಳಿದಿಲ್ಲ. ಎಸ್.ಟಿ ಸೋಮಶೇಖರ್(ST Somashekhar) ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ(Siddaramaiah) ಭೇಟಿ ಮಾಡಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಬಿಜೆಪಿ(BJP) ಬಿಟ್ಟು ವಾಪಸ್‌ ಕಾಂಗ್ರೆಸ್‌ಗೆ ತೆರಳುವ ಸುದ್ದಿಗೆ ಮತ್ತಷ್ಟು ಜೀವ ಬರುವಂತೆ ಮಾಡಿತ್ತು. ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಎಸ್‌ಟಿಎಸ್ ಅವರ ಆಪ್ತರು, ಅನೇಕ ಬೆಂಬಲಿಗರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಯಾವಾಗ ಬೇಕಾದ್ರೂ ಎಸ್‌ಟಿ.ಸೋಮಶೇಖರ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಇದ್ರ ಬೆನ್ನಲ್ಲೇ ಎಸ್‌ಟಿ ಸೋಮಶೇಖರ್ ಕ್ಷೇತ್ರದ ಮೇಲೆ ಡಿಸಿಎಂ ಡಿಕೆಶಿವಕುಮಾರ್‌ಗೂ ಪ್ರೀತಿ ಹೆಚ್ಚಾಗಿದೆ. ಹೌದು…ಮೂರನೇ ಬಾರಿಗೆ ಎಸ್.ಟಿ ಸೋಮಶೇಖರ್ ಜೊತೆಗೆ ಖುದ್ದು ಡಿಕೆ ಶಿವಕುಮಾರ್ ಕನಕಪುರ ರಸ್ತೆಯ ಅಪಾರ್ಟ್ಮೆಂಟ್ ನಿವಾಸಿಗಳ ಅಹವಾಲು ಆಲಿಸಿಸುವ ಮೂಲಕ ಯಶವಂತಪುರ ಕ್ಷೇತ್ರದ ಮೇಲೆ ವಿಶೇಷ ಕಾಳಜಿ ತೋರಿಸಿದ್ದು, ಇದು ಉಪಚುನಾವಣೆಗೆ ತಯಾರಿ ಎನ್ನುವ ಮಾತುಗಳು ಕೇಳಿಬರುತ್ತಿವೆ.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More