Karnataka Assembly Polls: ಕಬ್ಬಾಳಮ್ಮ ದೇವಸ್ಥಾನದ ಹುಂಡಿಗೆ ಡಿಕೆ ಶಿವಕುಮಾರ್ ಕೈಗೆ ಸಿಕ್ಕಷ್ಟು ನೋಟುಗಳನ್ನು ಹಾಕಿದ್ದಷ್ಟೇ ಗೊತ್ತು, ಎಷ್ಟೂಂತ ಗೊತ್ತಿಲ್ಲ!
ಹುಂಡಿಗೆ ಹಣ ಹಾಕಿದ ಬಳಿಕವೂ ಅವರಲ್ಲಿ ನೋಟುಗಳ ಕಂತೆ ಉಳಿಯುತ್ತದೆ. ಅವುಗಳನ್ನು ನೀಟಾಗಿ ಜೋಡಿಸಿಕೊಂಡು, ರಬ್ಬರ್ ಬ್ಯಾಂಡ್ ಹಾಕಿ ಜೇಬಲ್ಲಿ ಇಟ್ಟುಕೊಳ್ಳುತ್ತಾ ಪ್ರಸಾದವನ್ನು ಬಾಯಿಗೆ ಹಾಕ್ಕೊಂಡು ಅಲ್ಲಿಂದ ತೆರಳುತ್ತಾರೆ.
ರಾಮನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕನಕಪುರ ಕ್ಷೇತ್ರದ ಕಬ್ಬಾಲುನಲ್ಲಿರುವ ಕಬ್ಬಾಳಮ್ಮನ (Kabbalamma) ಪರಮ ಭಕ್ತರು ಅಂತ ಕನ್ನಡಿಗರಿಗೆಲ್ಲ ಗೊತ್ತಿರುವ ಸಂಗತಿಯೇ. ಸಂತಸದಲ್ಲಿರಲಿ, ಆಥವಾ ಕಷ್ಟ ಶಿವಕುಮಾರ್ ಕಬ್ಬಾಳಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ಇಂದು ಕನಕಪುರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮನಗರದಲ್ಲಿ ನಾಮಪತ್ರ ಸಲ್ಲಿಸುವ ಮೊದಲು ಶಿವಕುಮಾರ ಕುಟುಂಬ ಸಮೇತರಾಗಿ ಕನಕಪುರದ ಕೆಂಕೇರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಬ್ಬಾಳಮ್ಮನ ಸನ್ನಿಧಿಗೆ ಹೋದರು. ಪೂಜೆ ಸಲ್ಲಿಸಿದ ಮೇಲೆ ಅವರು ದೇವಸ್ಥಾನದ ಹುಂಡಿಗೆ ಹಣ ಹಾಕಿದ ಪರಿಯನ್ನೊಮ್ಮೆ ನೋಡಿ. ಕೈಗೆ ಸಿಕ್ಕಷ್ಟು ರೂ. 500 ಮುಖಬೆಲೆಯ ಗರಿಗರಿ ನೋಟುಗಳನ್ನು ಹುಂಡಿಯಲ್ಲಿ ತುರುಕುತ್ತಾರೆ. ಎಷ್ಟ ಹಾಕಿದ್ದು ಅಂತ ಅವರಿಗೂ ಗೊತ್ತಿರಲಾರದು. ಹುಂಡಿಗೆ ಹಣ ಹಾಕಿದ ಬಳಿಕವೂ ಅವರಲ್ಲಿ ನೋಟುಗಳ ಕಂತೆ ಉಳಿಯುತ್ತದೆ. ಅವುಗಳನ್ನು ನೀಟಾಗಿ ಜೋಡಿಸಿಕೊಂಡು, ರಬ್ಬರ್ ಬ್ಯಾಂಡ್ ಹಾಕಿ ಜೇಬಲ್ಲಿ ಇಟ್ಟುಕೊಳ್ಳುತ್ತಾ ಪ್ರಸಾದವನ್ನು ಬಾಯಿಗೆ ಹಾಕ್ಕೊಂಡು ಅಲ್ಲಿಂದ ತೆರಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ