DKS Vs HDK; ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಕುಮಾರಸ್ವಾಮಿಯಲ್ಲಿ ದಾಖಲೆಯಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿ: ಡಿಕೆ ಶಿವಕುಮಾರ್

|

Updated on: Jul 04, 2023 | 1:13 PM

ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರ, ಲಂಚುಗಳಿತನದಿಂದ ತಮ್ಮ ಸರ್ಕಾರ ಬಹಳ ದೂರ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ವ್ಯವಹಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಗ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ನೋಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಒಂದೇ ಸಮನೆ ಆರೋಪಿಸಿತ್ತಿರುವುದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ವಿಧಾನ ಸೌಧ ಆವರಣದಲ್ಲಿ ಪ್ರತಿಕ್ರಿಯೆ ನೀಡಿದರು. ಚುನಾವಣೆಯಲ್ಲಿ ಕಡಿಮೆ ಸ್ಥಾನ ಗೆದ್ದಿದ್ದಕ್ಕೆ ಕುಮಾರಸ್ವಾಮಿ ಹತಾಷರಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರ, ಲಂಚುಗಳಿತನದಿಂದ ತಮ್ಮ ಸರ್ಕಾರ ಬಹಳ ದೂರ ಎಂದು ಶಿವಕುಮಾರ್ ಹೇಳಿದರು. ಮುಂದುವರೆದು ಮಾತಾಡಿದ ಉಪ ಮುಖ್ಯಮಂತ್ರಿ, ಭ್ರಷ್ಟಾದಾರ ನಡೆದಿರುವ ಬಗ್ಗೆ ಕುಮಾರಸ್ವಾಮಿಯವರಲ್ಲಿ ದಾಖಲೆ, ಪುರಾವೆಗಳಿದ್ದರೆ ಸರ್ಕಾರವೇ ರಚಿಸಿದ ಲೋಕಾಯುಕ್ತ ಇದೆ, ಅಲ್ಲಿಗೆ ಹೋಗಿ ದೂರು ಸಲ್ಲಿಸಲಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on