ನೀರು ಕಳುವಾಗದ ಹಾಗೆ ನೋಡಿಕೊಳ್ಳುವ ಜಬಾಬ್ದಾರಿಯನ್ನು ರೈತರ ಹೆಗಲಿಗೇರಿಸಿದ ಡಿಕೆ ಶಿವಕುಮಾರ್

|

Updated on: Oct 19, 2023 | 10:46 AM

ರೈತಾಪಿ ಸಮುದಾಯ ಅಕ್ಷರಶಃ ಕಂಗಾಲಾಗಿದೆ, ಈ ವರ್ಷ ಬದುಕು ಹೇಗೆ ಅಂತ ರೈತರು ಆತಂಕದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಿವಕುಮಾರ್ ರೈತರಿಗೆ ನೀರಿನ ಜವಾಬ್ದಾರಿ ಹೊತ್ತುಕೊಳ್ಳುವಂತೆ ಹೇಳುತ್ತಿರುವುದು ಕನ್ನಡಿಗರಿಗೆ ಅಘಾತವನ್ನುಂಟು ಮಾಡಿದೆ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್​ಮೆಂಟ್

ಬೆಳಗಾವಿ: ನವರಾತ್ರಿ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ (Hukkeri Hiremath) ಅಯೋಜಿಸಲಾಗಿದ್ದ ಚಂಡಿಕಾಯಾಗಲ್ಲಿ ಪೂರ್ಣಾಹುತಿ ಸಮರ್ಪಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೃಷಿ ಚಟಿವಟಿಕೆಗಳಿಗೆ ನೀರಿನ ವಿಷಯ ಬಂದಾಗ ಆಘಾತಕಾರಿ ಹೇಳಿಕೆಯನ್ನು ನೀಡಿದರು. ತಮ್ಮ ನೀರು ಕಳ್ಳತನವಾಗದ ಹಾಗೆ ರೈತರೇ (farmers) ಜವಾಬ್ದಾರಿವಹಿಸಿಕೊಳ್ಳಬೇಕು ಅಂತ ಯಾವ ಅರ್ಥದಲ್ಲಿ ಶಿವಕುಮಾರ್ ಹೇಳಿದರು ಅನ್ನೋದು ಗೊತ್ತಾಗಲಿಲ್ಲ. ನೀರಿನ ಹೊಣೆಗಾರಿಕೆಯನ್ನೂ ರೈತರ ಹೆಗಲ ಮೇಲೆ ಹಾಕುವುದು ಶಿವಕುಮಾರ್ ಮಾತಿನ ತಾತ್ಪರ್ಯವೇ? ಹಾಗಾದರೆ ಸರ್ಕಾರದ ಜವಾಬ್ದಾರಿ ಏನು ಎಂಬ ಪ್ರಶ್ನೆ ಮತ್ತು ಸಂದೇಹ ನಿಸ್ಸಂದೇಹವಾಗಿ ರೈತರ ಮನಸ್ಸಿನಲ್ಲಿ ಹುಟ್ಟುತ್ತದೆ. ಮಳೆಯ ಅಭಾವದಿಂದಾಗಿ ಬೆಳೆಗಳೆಲ್ಲ ನಾಶವಾಗಿವೆ ಮತ್ತು ಸರ್ಕಾರವೂ ಬರದ ಘೋಷಣೆ ಮಾಡಿ ಕೇಂದ್ರ ಸರ್ಕಾರ ನೆರವು ಯಾಚಿಸುತ್ತಿದೆ. ರೈತಾಪಿ ಸಮುದಾಯ ಅಕ್ಷರಶಃ ಕಂಗಾಲಾಗಿದೆ, ಈ ವರ್ಷ ಬದುಕು ಹೇಗೆ ಅಂತ ರೈತರು ಆತಂಕದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಿವಕುಮಾರ್ ರೈತರಿಗೆ ನೀರಿನ ಜವಾಬ್ದಾರಿ ಹೊತ್ತುಕೊಳ್ಳುವಂತೆ ಹೇಳುತ್ತಿರುವುದು ಕನ್ನಡಿಗರಿಗೆ ಅಘಾತವನ್ನುಂಟು ಮಾಡಿದೆ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್​ಮೆಂಟ್

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ