ಸಚಿವ ಚಲುವರಾಯಸ್ವಾಮಿ ಸಮ್ಮುಖದಲ್ಲಿ ರೌಡಿ ಶೀಟರ್ನನ್ನು ಸನ್ಮಾನ ಮಾಡಿಸಿದ ಕಾಂಗ್ರೆಸ್ ಶಾಸಕ ಬಂಡಿ ಸಿದ್ದೇಗೌಡ!
ಆಹ್ವಾನ ಪತ್ರಿಕೆಯಲ್ಲಿ ಬುಲ್ಲಿಯ ಹೆಸರಿರದಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬುಲ್ಲಿಯನ್ನು ವೇದಿಕೆಗೆ ಕರೆದು ಸತ್ಕರಿಸಿದ್ದಾರೆ. ಆರೋಪಗಳಿದ್ದ ಮಾತ್ರಕ್ಕೆ ಅಪರಾಧಿಯಲ್ಲ ಎಂಬ ಸಮರ್ಥನೆಯನ್ನು ಬಂಡಿಸಿದ್ದೇಗೌಡ ನೀಡಿದ್ದು ಶಾಸಕನ ವಿರುದ್ಧವೂ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣವೊಂದನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಮಂಡ್ಯ: ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಕೆಲ ಬಿಜೆಪಿ ನಾಯಕರ ಜೊತೆ ರೌಡಿಶೀಟರ್ ಗಳು ಕಾಣಿಸಿಕೊಂಡಾಗ ಆಕಾಶ ಪಾತಾಳ ಒಂದಾಗುವ ಹಾಗೆ ಚೀರಾಡಿದ್ದ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದ ಮೇಲೆ ಗೂಂಡಾಗಳನ್ನು ಸನ್ಮಾನ ಮಾಡಿ ಕೃತಾರ್ಥರಾಗುತ್ತಿದ್ದಾರೆ. ಕಳೆದ ರಾತ್ರಿ, ಕೆಆರ್ ಎಸ್ ನೃತ್ಯ ಕಾರಂಜಿ ಉದ್ಘಾಟನೆ ಮಾಡುವ ವೇಳೆ ಶ್ರೀರಂಗಟ್ಟಣದ ಕಾಂಗ್ರೆಸ್ ಶಾಸಕ ಬಂಡಿ ಸಿದ್ದೇಗೌಡ (Bandi Siddegowda), ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಮತ್ತು ಈ ಭಾಗದ ಕುಖ್ಯಾತ ರೌಡಿ (notorious rowdy) ಎನಿಸಿಕೊಂಡಿರುವ ದೇವರಾಜು ಅಲಿಯಾಸ್ ಬುಲ್ಲಿಗೆ (Devaraj@bulli) ಸನ್ಮಾನ ಮಾಡಿಸಿದ್ದಾರೆ. ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಸಮ್ಮುಖ ಮತ್ತು ಮಂಡ್ಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯ ಉಪಸ್ಥಿತಿಯಲ್ಲಿ ‘ಗಣ್ಯವಕ್ತಿ’ಗೆ ಸನ್ಮಾನ ಮಾಡಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಬುಲ್ಲಿಯ ಹೆಸರಿರದಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬುಲ್ಲಿಯನ್ನು ವೇದಿಕೆಗೆ ಕರೆದು ಸತ್ಕರಿಸಿದ್ದಾರೆ. ಆರೋಪಗಳಿದ್ದ ಮಾತ್ರಕ್ಕೆ ಅಪರಾಧಿಯಲ್ಲ ಎಂಬ ಸಮರ್ಥನೆಯನ್ನು ಬಂಡಿಸಿದ್ದೇಗೌಡ ನೀಡಿದ್ದು ಶಾಸಕನ ವಿರುದ್ಧವೂ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣವೊಂದನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ