ತಪ್ಪು ಮಾಡಿರದಿದ್ದರೆ ಡಿಕೆ ಶಿವಕುಮಾರ್ರನ್ನು ಟಾರ್ಗೆಟ್ ಯಾಕೆ ಮಾಡುತ್ತಾರೆ? ಹೆಚ್ ಡಿ ಕುಮಾರಸ್ವಾಮಿ
ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿ ಹಲವಾರು ಸಂಸ್ಥೆಗಳಿವೆ ಮತ್ತು ಅವು ತಮ್ಮ ಕೆಲಸಗಳನ್ನು ಸಮರ್ಪಕ ಮತ್ತು ನಿಯಮಿತವಾಗಿ ಮಾಡುತ್ತಿರುತ್ತವೆ ಎಂದ ಕುಮಾರಸ್ವಾಮಿ, ಪದೇಪದೇ ತನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಶಿವಕುಮಾರ್ ಹೇಳೋದ್ಯಾಕೆ? ತಪ್ಪು ಮಾಡಿಲ್ಲದವರನ್ನು ಟಾರ್ಗೆಟ್ ಮಾಡುತ್ತಾರೆಯೇ? ಎಂದರು.
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ನಡೆಸದಂತೆ ನಿರ್ದೇಶನ ಕೋರಿ ಹೈಕೋರ್ಟ್ ಮೆಟ್ಟಲೇರಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಿನ್ನಡೆಯಾಗಿದ್ದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಸಂತಸವುಂಟಾಗಿದೆಯಾದರೂ ಮಾಧ್ಯಮಗಳ ಮುಂದೆ ಅದನ್ನು ತೋರ್ಪಡಿಸಿಕೊಳ್ಳುತ್ತಿಲ್ಲ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ, ಹೈಕೋರ್ಟ್ ತೀರ್ಪನ್ನು (high court verdict) ಸ್ವಾಗತಿಸುವುದು ಅಥವಾ ಸ್ವಾಗತಿಸದಿರೋದು ಇಲ್ಲಿ ಪ್ರಶ್ನೆಯಲ್ಲ. ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿ ಹಲವಾರು ಸಂಸ್ಥೆಗಳಿವೆ ಮತ್ತು ಅವು ತಮ್ಮ ಕೆಲಸಗಳನ್ನು ಸಮರ್ಪಕ ಮತ್ತು ನಿಯಮಿತವಾಗಿ ಮಾಡುತ್ತಿರುತ್ತವೆ ಎಂದ ಕುಮಾರಸ್ವಾಮಿ, ಪದೇಪದೇ ತನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಶಿವಕುಮಾರ್ ಹೇಳೋದ್ಯಾಕೆ? ತಪ್ಪು ಮಾಡಿಲ್ಲದವರನ್ನು ಟಾರ್ಗೆಟ್ ಮಾಡುತ್ತಾರೆಯೇ? ಎಂದರು. ಈ ವಿಷಯಕ್ಕೆ ತಾನು ಮಹತ್ವ ನೀಡೋದಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ದೇಶದಲ್ಲಿ ದರೋಡೆಕೋರರು ಸಹ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ ಹಾಗಾಗಿ ತಾನದಕ್ಕೆ ಬಲಿಯಾಗಲಾರೆ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ