ದೇವರ ಬೊಂಬೆಗಳೊಂದಿಗೆ ನವರಾತ್ರಿ ಸಂಭ್ರಮ: ಸನಾತನ ಬಗ್ಗೆ ತಿಳಿಸುವ ವಿಶೇಷ ಆಚರಣೆ
ದಸರಾ ನವರಾತ್ರಿ ಹಬ್ಬದ ಪ್ರಯುಕ್ತ ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ದೇವರ ಬೊಂಬೆಗಳನ್ನು ಕುರಿಸಿ ಪೂಜೆ ಮಾಡಲಾಗುತ್ತದೆ. ಶೆಟ್ಟಿಹಳ್ಳಿ ಗ್ರಾಮದ ಸೀಮಾ ಎನ್ನುವರು ಪ್ರತಿವರ್ಷವೂ ಈ ಆಚರಣೆ ಮಾಡಿಕೊಂಡು ಬಂದಿದ್ದು, ಈ ಬಾರಿಯೂ ಬಹಳ ಅದ್ದೂರಿಯಾಗಿ ಮನೆಯಲ್ಲಿ ಕುರಿಸಿದ್ದಾರೆ. ಒಂದು ಸಂಪೂರ್ಣ ಕೊಠಡಿಯಲ್ಲಿ ವಿವಿಧ ರೀತಿಯ ದೇವರ ಬೊಂಬೆಗಳನ್ನು ಕುರಿಸಿದ್ದು ನೋಡಲು ಅತ್ಯಕರ್ಷಣೆಯಾಗಿದೆ.
ತುಮಕೂರು, ಅಕ್ಟೋಬರ್ 19: ದಸರಾ ನವರಾತ್ರಿ (Navratri) ಹಬ್ಬದ ಪ್ರಯುಕ್ತ ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ದೇವರ ಬೊಂಬೆಗಳನ್ನು ಕುರಿಸಿ ಪೂಜೆ ಮಾಡಲಾಗುತ್ತದೆ. ಶೆಟ್ಟಿಹಳ್ಳಿ ಗ್ರಾಮದ ಸೀಮಾ ಎನ್ನುವರು ಪ್ರತಿವರ್ಷವೂ ಈ ಆಚರಣೆ ಮಾಡಿಕೊಂಡು ಬಂದಿದ್ದು, ಈ ಬಾರಿಯೂ ಬಹಳ ಅದ್ದೂರಿಯಾಗಿ ಮನೆಯಲ್ಲಿ ಕುರಿಸಿದ್ದಾರೆ. ಮನೆಯ ದೇವರ ಕೋಣೆ ಹಾಲ್ ಹಾಗೂ ಒಂದು ಸಂಪೂರ್ಣ ಕೊಠಡಿಯಲ್ಲಿ ವಿವಿಧ ರೀತಿಯ ದೇವರ ಬೊಂಬೆಗಳನ್ನು ಕುರಿಸಿದ್ದು ನೋಡಲು ಅತ್ಯಕರ್ಷಣೆಯಾಗಿದೆ. ಕರ್ನಾಟಕದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ, ಮೈಸೂರು ನಗರ ಅರಮನೆ, ಆಂದ್ರದ ತಿರುಪತಿ, ತಮಿಳುನಾಡಿನ ಅಂಡಾಳ್ ದೇವಿ, ವೈಕುಂಠ ವಾಸ, ಶ್ರೀ ಯೋಗ ಲಕ್ಷ್ಮೀ ನರಸಿಂಹ, ಭೂದೇವಿ ಶ್ರೀ ದೇವಿ ನೀಲಾದೇವಿ, ಲಕ್ಷ್ಮಿ ಪದ್ಮಾವತಿ ಶ್ರೀ ಕೃಷ್ಣ ರುಕ್ಮಿಣಿ ಸತ್ಯಾಭಾಮ ಜೊತೆಗೆ ಐತಿಹಾಸಿಕ ಪೌರಾಣಿಕವುಳ್ಳ ದೇವಾಲಯಗಳನ್ನ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದಾರೆ. ನವರಾತ್ರಿ ಪ್ರಯುಕ್ತ ಬೊಂಬೆಗಳನ್ನು ಕುರಿಸಿದ್ದು ಇತಿಹಾಸ ಸಾರಿ ಹೇಳುವ ಸನಾತನ ಬಗ್ಗೆ ತಿಳಿಸಲು ಆಚರಣೆ ಮಾಡುತ್ತಿರುವಾಗಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.