ಆದೇಶ ವಾಪಸ್ಸು ತಗೊಳ್ಳದಿದ್ದರೆ ಅಂತ ದೇವೇಗೌಡರನ್ನು ಬೆದರಿಸುವ ಸಿಎಂ ಇಬ್ರಾಹಿಂ ಮಾತು ಅರಣ್ಯರೋದನದಂತೆ ಭಾಸವಾಗುತ್ತದೆ!

ಆದೇಶ ವಾಪಸ್ಸು ತಗೊಳ್ಳದಿದ್ದರೆ ಅಂತ ದೇವೇಗೌಡರನ್ನು ಬೆದರಿಸುವ ಸಿಎಂ ಇಬ್ರಾಹಿಂ ಮಾತು ಅರಣ್ಯರೋದನದಂತೆ ಭಾಸವಾಗುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 19, 2023 | 5:25 PM

ಪಕ್ಷದ ಕೆಲ ಆಂತರಿಕ ವಿದ್ಯಮಾನಗಳ ಹೊರಹಾಕುವ ಅವರು ವಿಧಾನ ಪರಿಷತ್ ಸದಸ್ಯನಾಗಿ ನೇಮಕ ಮಾಡಿದ ಟಿ ಎ ಸರವಣಗೆ ದೇವೇಗೌಡರು ನೀಡಿದ್ದೇನು ಅಂತ ಪ್ರಶ್ನಿಸಿ ಕುಪೇಂದ್ರ ರೆಡ್ಡಿಯನ್ನು ರಾಜ್ಯಸಭಾ ಸದಸ್ಯನಾಗಿ ಯಾಕೆ ನೇಮಕ ಮಾಡಿದ್ದು ಅಂತ ತನಗೆ ಚೆನ್ನಾಗಿ ಗೊತ್ತಿದೆ ಅನ್ನುತ್ತಾರೆ. ತಮ್ಮ ವಿರುದ್ಧ ಜಾರಿಗೊಳಿಸಿರುವ ಆದೇಶವನ್ನು ಕೂಡಲೇ ವಾಪಸ್ಸು ತೆಗೆದುಕೊಳ್ಳದಿದ್ದರೆ ಎಲ್ಲವನ್ನೂ ಬಹಿರಂಗಪಡಿಸುವ ಬೆದರಿಕೆಯನ್ನ ದೇವೇಗೌಡರಿಗೆ ಅವರು ಹಾಕುತ್ತಾರೆ.

ಬೆಂಗಳೂರು: ಜೆಡಿಎಸ್ ಪಕ್ಷದ ಧುರೀಣ ಸಿಎಂ ಇಬ್ರಾಹಿಂ (CM Ibrahim) ಹತಾಶರಾಗಿದ್ದಾರೆ. ಅದೇ ಹತಾಶೆಯಲ್ಲಿ ಹೆಚ್ ಡಿ ದೇವೇಗೌಡರ ವಿರುದ್ಧ ಬೆದರಿಕೆ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ತವಕ್ಕಲ್ ಮಸ್ತಾನ್ ದರ್ಗಾಗೆ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಇಬ್ರಾಹಿಂ, ಪಕ್ಷದಿಂದ ತನ್ನನ್ನು ಉಚ್ಚಾಟನೆ (expel) ಮಾಡಲು ಬರಲ್ಲ ಮತ್ತು ಪಕ್ಷವನ್ನು ವಿಸರ್ಜಿಸಲೂ ಬರಲ್ಲ, ಆದರೆ ದೇವೇಗೌಡರ ಕ್ರಮದ ವಿರುದ್ಧ ಕಾನೂನು ಹೋರಾಟ (legal battle) ಮಾಡುವುದಾಗಿ ಹೇಳಿದರು. ತನ್ನನ್ನು ದೇವರು ಮತ್ತು ಜನ ಕೈ ಬಿಡಲ್ಲ ಎಂದು ಹೇಳುವ ಇಬ್ರಾಹಿಂ ತಾನೆಂದೂ ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ ಎಂದು ಹೇಳುತ್ತಾರೆ. ಪಕ್ಷದ ಕೆಲ ಆಂತರಿಕ ವಿದ್ಯಮಾನಗಳ ಹೊರಹಾಕುವ ಅವರು ವಿಧಾನ ಪರಿಷತ್ ಸದಸ್ಯನಾಗಿ ನೇಮಕ ಮಾಡಿದ ಟಿ ಎ ಸರವಣಗೆ ದೇವೇಗೌಡರು ನೀಡಿದ್ದೇನು ಅಂತ ಪ್ರಶ್ನಿಸಿ ಕುಪೇಂದ್ರ ರೆಡ್ಡಿಯನ್ನು ರಾಜ್ಯಸಭಾ ಸದಸ್ಯನಾಗಿ ಯಾಕೆ ನೇಮಕ ಮಾಡಿದ್ದು ಅಂತ ತನಗೆ ಚೆನ್ನಾಗಿ ಗೊತ್ತಿದೆ ಅನ್ನುತ್ತಾರೆ. ತಮ್ಮ ವಿರುದ್ಧ ಜಾರಿಗೊಳಿಸಿರುವ ಆದೇಶವನ್ನು ಕೂಡಲೇ ವಾಪಸ್ಸು ತೆಗೆದುಕೊಳ್ಳದಿದ್ದರೆ ಎಲ್ಲವನ್ನೂ ಬಹಿರಂಗಪಡಿಸುವ ಬೆದರಿಕೆಯನ್ನ ದೇವೇಗೌಡರಿಗೆ ಅವರು ಹಾಕುತ್ತಾರೆ. ಇಬ್ರಾಹಿಂ ಮಾತು ಅರಣ್ಯರೋದನದ ಹಾಗೆ ಭಾಸವಾಗುತ್ತಿದೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ