ಸುಖಾಸುಮ್ಮನೆ ಮುನಿರತ್ನ ಮೇಲೆ ರೇಗಿದ ಡಿಕೆ ಸುರೇಶ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು!
ಮುನಿರತ್ನ ಬಗ್ಗೆ ಈ ಪಾಟಿ ಅಸಮಾಧಾನ ಯಾಕೆ ಸರ್ ಪತ್ರಕರ್ತರು ಕೇಳಿದಾಗ ರಾಜ್ಯ ಕಾಂಗ್ರೆಸ್ ನಾಯಕರಿಗೆ ಯಾವ ಅಸಮಾಧಾನವೂ ಇಲ್ಲ ಅದಿರೋದು ಮುನಿರತ್ನ ಮತ್ತು ಬಿಜೆಪಿಯವರಿಗೆ, ಹಾಗಾಗೇ ಪದೇಪದೆ ಮಾಧ್ಯಮದವರನ್ನು ಕರೆದು ತಮ್ಮ ಅಸಮಾಧಾನ ಹೇಳಿಕೊಳ್ಳುತ್ತಾರೆ ಅಂತ ಹೇಳಿದರು.
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಆದಾಯ ಮೀರಿದ ಅಸ್ತಿ ಪ್ರಕರಣದಲ್ಲಿ ಇಂದು ಬೆಳಗ್ಗೆ ಹೈಕೋರ್ಟ್ ನೀಡರುವ ತೀರ್ಪು ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ (DK Suresh) ಇಬ್ಬರನ್ನೂ ವಿಚಲಿತಗೊಳಿಸಿರುವುದು ಸುಳ್ಳಲ್ಲ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅವರು ಬೇಗ ತಾಳ್ಮೆ ಕಳೆದುಕೊಳ್ಳಿತ್ತಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿ ಸುರೇಶ್, ಆರ್ ಆರ್ ನಗರ ಬಿಜೆಪಿ ಶಾ ಶಾಸಕ ಮುನಿರತ್ನ (Munirathna Naidu) ಬಗ್ಗೆ ಕೇಳಿದ ಪ್ರಶ್ನೆಗೆ ಏಕ್ದಂ ಸಿಡುಕಿದರು. ಏಕವಚನದಲ್ಲೇ ಮುನಿರತ್ನ ಮೇಲೆ ಹರಿಹಾಯ್ದ ಸುರೇಶ್, ಅವನಿದ್ದಾನಲ್ಲ ಆರ್ ಆರ್ ನಗರ ಶಾಸಕ, ಹೋಗಿ ಮೊದಲು ಅವನನ್ನ ಕೇಳಿ, ಇವತ್ತು ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿ ಏನೋನೋ ಹೇಳಿದ್ದಾನೆ, ಪ್ರೊಡ್ಯೂಸರ್ ಅವನು, ಪ್ರೊಡ್ಯೂಸ್ ಮಾಡಿದ್ದಕ್ಕೆ ಡೈರೆಕ್ಷನ್ ಯಾವಾಗ ಮಾಡ್ತಾನೆ ಅಂತ ಕೇಳಿ ಅಂತ ಏನೇನೋ ಹೇಳಿದರು. ಅವರ ಬಗ್ಗೆ ಈ ಪಾಟಿ ಅಸಮಾಧಾನ ಯಾಕೆ ಸರ್ ಪತ್ರಕರ್ತರು ಕೇಳಿದಾಗ ರಾಜ್ಯ ಕಾಂಗ್ರೆಸ್ ನಾಯಕರಿಗೆ ಯಾವ ಅಸಮಾಧಾನವೂ ಇಲ್ಲ ಅದಿರೋದು ಮುನಿರತ್ನ ಮತ್ತು ಬಿಜೆಪಿಯವರಿಗೆ, ಹಾಗಾಗೇ ಪದೇಪದೆ ಮಾಧ್ಯಮದವರನ್ನು ಕರೆದು ತಮ್ಮ ಅಸಮಾಧಾನ ಹೇಳಿಕೊಳ್ಳುತ್ತಾರೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ