ಕುಮಾರಸ್ವಾಮಿಗೆ ನಾಲಗೆ ಮೇಲೆ ಸ್ವಾಧೀನ ತಪ್ಪಿದೆ: ಎನ್ ಚಲುವರಾಯಸ್ವಾಮಿ, ಕೃಷಿ ಸಚಿವ

ಕುಮಾರಸ್ವಾಮಿಗೆ ನಾಲಗೆ ಮೇಲೆ ಸ್ವಾಧೀನ ತಪ್ಪಿದೆ: ಎನ್ ಚಲುವರಾಯಸ್ವಾಮಿ, ಕೃಷಿ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 10, 2023 | 2:19 PM

ಸಮ್ಮಿಶ್ರ ಸರ್ಕಾರದ ಪತನಕ್ಕೆ ಡಿಕೆ ಶಿವಕುಮಾರ್ ಕಾರಣ ಅಂತ ಕುಮಾರಸ್ವಾಮಿ ಹೇಳೋದು ಮಹಾಪರಾಧ, ಸರ್ಕಾರ ಉಳಿಸಲು ಶಿವಕುಮಾರ್ ಎಷ್ಟು ಕಷ್ಟಪಟ್ಟರು ಅಂತ ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿಯ ಜಾಯಮಾನವೇ ಹಾಗೆ, ಹಿಟ್ ಅಂಡ್ ರನ್ ಥರ, 2019 ರಲ್ಲಿ ಮಂಡ್ಯ ಲೋಕ ಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಶಿವಕುಮಾರ್ ಶ್ರಮಪಟ್ಟಿದ್ದನ್ನು ಕುಮಾರಸ್ವಾಮಿ ಮರೆತಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು

ಮಂಡ್ಯ: 2024ರ ಲೋಕಸಭಾ ಚುನಾವಣೆಗೆ ಮೊದಲು ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ ಅಂತ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿರುವುದನ್ನು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (M Cheluvarayaswamy) ಗೇಲಿ ಮಾಡಿದರು. ನಗರದಲ್ಲಿಂದು ಟಿವಿ9 ಕನ್ನಡ ವರದಿಗಾರನೊಂದಿಗೆ ಮಾತಾಡಿದ ಸಚಿವ, ಕುಮಾರಸ್ವಾಮಿಗೆ ನಾಲಗೆ ಮೇಲೆ ಹಿಡಿತ ತಪ್ಪಿದೆಯೋ, ತಲೆ ಮತ್ತು ನಾಲಗೆ ನಡುವಿನ ಸಂಪರ್ಕ ಕಟ್ ಆಗಿದೆಯೋ ಅಥವಾ ಹಾಗೆ ಹೇಳಿ ಪಕ್ಷ ತೊರೆಯಲು ರೆಡಿಯಾಗಿರುವ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ, 136 ಶಾಸಕರನ್ನು ಹೊಂದಿರುವ ಸರ್ಕಾರ ಇನ್ನಾರು ತಿಂಗಳಲ್ಲಿ ಉರುಳುತ್ತೆ ಅಂತ ಹೇಳುವ ಇವರ ಬುದ್ಧಿಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ, ಅವರು 6 ತಿಂಗಳು ಅಂತ ಹೇಳಿದ್ದಾರಲ್ವಾ? ಕಾದು ನೋಡೋಣ ಬಿಡಿ ಎಂದು ಹೇಳಿದರು. ಸಮ್ಮಿಶ್ರ ಸರ್ಕಾರದ ಪತನಕ್ಕೆ ಡಿಕೆ ಶಿವಕುಮಾರ್ (DK Shivakumar) ಕಾರಣ ಅಂತ ಕುಮಾರಸ್ವಾಮಿ ಹೇಳೋದು ಮಹಾಪರಾಧ, ಸರ್ಕಾರ ಉಳಿಸಲು ಶಿವಕುಮಾರ್ ಎಷ್ಟು ಕಷ್ಟಪಟ್ಟರು ಅಂತ ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿಯ ಜಾಯಮಾನವೇ ಹಾಗೆ, ಹಿಟ್ ಅಂಡ್ ರನ್ ಥರ, 2019 ರಲ್ಲಿ ಮಂಡ್ಯ ಲೋಕ ಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಶಿವಕುಮಾರ್ ಶ್ರಮಪಟ್ಟಿದ್ದನ್ನು ಕುಮಾರಸ್ವಾಮಿ ಮರೆತಿದ್ದಾರೆ ಎಂದು ಚೆಲುವರಾಯಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ