ನೀರು ಕಳುವಾಗದ ಹಾಗೆ ನೋಡಿಕೊಳ್ಳುವ ಜಬಾಬ್ದಾರಿಯನ್ನು ರೈತರ ಹೆಗಲಿಗೇರಿಸಿದ ಡಿಕೆ ಶಿವಕುಮಾರ್
ರೈತಾಪಿ ಸಮುದಾಯ ಅಕ್ಷರಶಃ ಕಂಗಾಲಾಗಿದೆ, ಈ ವರ್ಷ ಬದುಕು ಹೇಗೆ ಅಂತ ರೈತರು ಆತಂಕದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಿವಕುಮಾರ್ ರೈತರಿಗೆ ನೀರಿನ ಜವಾಬ್ದಾರಿ ಹೊತ್ತುಕೊಳ್ಳುವಂತೆ ಹೇಳುತ್ತಿರುವುದು ಕನ್ನಡಿಗರಿಗೆ ಅಘಾತವನ್ನುಂಟು ಮಾಡಿದೆ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್ಮೆಂಟ್
ಬೆಳಗಾವಿ: ನವರಾತ್ರಿ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ (Hukkeri Hiremath) ಅಯೋಜಿಸಲಾಗಿದ್ದ ಚಂಡಿಕಾಯಾಗಲ್ಲಿ ಪೂರ್ಣಾಹುತಿ ಸಮರ್ಪಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೃಷಿ ಚಟಿವಟಿಕೆಗಳಿಗೆ ನೀರಿನ ವಿಷಯ ಬಂದಾಗ ಆಘಾತಕಾರಿ ಹೇಳಿಕೆಯನ್ನು ನೀಡಿದರು. ತಮ್ಮ ನೀರು ಕಳ್ಳತನವಾಗದ ಹಾಗೆ ರೈತರೇ (farmers) ಜವಾಬ್ದಾರಿವಹಿಸಿಕೊಳ್ಳಬೇಕು ಅಂತ ಯಾವ ಅರ್ಥದಲ್ಲಿ ಶಿವಕುಮಾರ್ ಹೇಳಿದರು ಅನ್ನೋದು ಗೊತ್ತಾಗಲಿಲ್ಲ. ನೀರಿನ ಹೊಣೆಗಾರಿಕೆಯನ್ನೂ ರೈತರ ಹೆಗಲ ಮೇಲೆ ಹಾಕುವುದು ಶಿವಕುಮಾರ್ ಮಾತಿನ ತಾತ್ಪರ್ಯವೇ? ಹಾಗಾದರೆ ಸರ್ಕಾರದ ಜವಾಬ್ದಾರಿ ಏನು ಎಂಬ ಪ್ರಶ್ನೆ ಮತ್ತು ಸಂದೇಹ ನಿಸ್ಸಂದೇಹವಾಗಿ ರೈತರ ಮನಸ್ಸಿನಲ್ಲಿ ಹುಟ್ಟುತ್ತದೆ. ಮಳೆಯ ಅಭಾವದಿಂದಾಗಿ ಬೆಳೆಗಳೆಲ್ಲ ನಾಶವಾಗಿವೆ ಮತ್ತು ಸರ್ಕಾರವೂ ಬರದ ಘೋಷಣೆ ಮಾಡಿ ಕೇಂದ್ರ ಸರ್ಕಾರ ನೆರವು ಯಾಚಿಸುತ್ತಿದೆ. ರೈತಾಪಿ ಸಮುದಾಯ ಅಕ್ಷರಶಃ ಕಂಗಾಲಾಗಿದೆ, ಈ ವರ್ಷ ಬದುಕು ಹೇಗೆ ಅಂತ ರೈತರು ಆತಂಕದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಿವಕುಮಾರ್ ರೈತರಿಗೆ ನೀರಿನ ಜವಾಬ್ದಾರಿ ಹೊತ್ತುಕೊಳ್ಳುವಂತೆ ಹೇಳುತ್ತಿರುವುದು ಕನ್ನಡಿಗರಿಗೆ ಅಘಾತವನ್ನುಂಟು ಮಾಡಿದೆ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್ಮೆಂಟ್
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

