DK Shivakumar: ಈಗಲೂ ಡಿಕೆ ಶಿವಕುಮಾರ್ ಗೆಲುವಾಗಿಲ್ಲ, ಮಾಧ್ಯಮದರೊಂದಿಗೆ ಮಾತಾಡಲು ಅವರಿಗೆ ಮನಸ್ಸಿಲ್ಲ!

ಅರುಣ್​ ಕುಮಾರ್​ ಬೆಳ್ಳಿ

Updated on: May 18, 2023 | 12:39 PM

ಅವರು ಹೇಳಿದ್ದು ಒಂದು ಲೈನ್ ಮಾತ್ರ, ‘ಈವತ್ತು ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.’

ದೆಹಲಿ: ರಾಜ್ಯದ ಮುಂದಿಮ ಮುಖ್ಯಮಂತ್ರಿ ಕುರಿತಾದ ಬಿಕ್ಕಟ್ಟು ಬಗೆಹರಿದಿದ್ದರೂ ಡಿಕೆ ಶಿವಕುಮಾರ್ (DK Shivakumar) ಮುಖದಲ್ಲಿ ಎಂದಿನ ಕಳೆ, ಗೆಲುವು ಕಾಣುತ್ತಿಲ್ಲ. ಇಂದು ಬೆಳಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (KC Venugopal) ಅವರ ಮನೆಯಲ್ಲಿ ಉಪಹಾರ ಸೇವಿಸಿ ಹೊರಬಿದ್ದ ಬಳಿಕ ಮಾಧ್ಯಮ ಪ್ರತಿನಿಧಿಗಳು (media persons) ಅವರನ್ನು ಸುತ್ತುವರಿದರು. ಆದರೆ ಶಿವಕುಮಾರ್ ಉತ್ತರಿಸುವ ಗೋಜಿಗೆ ಹೋಗಲಿಲ್ಲ, ತಮ್ಮ ಪಾಡಿಗೆ ತಾವು ಕಾರು ಹತ್ತಿ ಹೊರಡಲುನುವಾದಾಗ ಪತ್ರಕರ್ತರು ಅವರ ಬೆನ್ನಟ್ಟಿದ್ದರು. ಅಂತಿಮವಾಗಿ ಶಿವಕುಮಾರ್ ಬಾಯಿ ಬಿಡಲೇ ಬೇಕಾಯಿತು. ಅವರು ಹೇಳಿದ್ದು ಒಂದು ಲೈನ್ ಮಾತ್ರ, ‘ಈವತ್ತು ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.’

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.