Prajadhvani Yatre: ದೀಪ ಬೆಳಗಿಸಲು ಉಗ್ರಪ್ಪನವರಿಗೆ ಡಿಕೆ ಶಿವಕುಮಾರ್ ಮೋಂಬತ್ತಿ ನೀಡದಿರುವುದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ?

ಅರುಣ್​ ಕುಮಾರ್​ ಬೆಳ್ಳಿ

Updated on: Feb 06, 2023 | 4:51 PM

ಉಗ್ರಪ್ಪನವರಿಗೆ ಅವಮಾನವಾದರೂ ತೋರಿಸಿಕೊಳ್ಳುವುದಿಲ್ಲ. ಮಾಜಿ ಸಂಸದರು ಸಿದ್ದರಾಮಯ್ಯ ಬಣಕ್ಕೆ ಸೇರಿದವರು ಅಂತ ನಮ್ಮಂಥವರಿಗೆ ಗೊತ್ತಿರುವಾಗ ಡಿಕೆಶಿಗೆ ಗೊತ್ತಿರದಿರುತ್ತದೆಯೇ?

ಚಿತ್ರದುರ್ಗ:  ಕಾಂಗ್ರೆಸ್ ನಾಯಕರ ನಡುವಿವ ಒಳಜಗಳ, ವೈಮನಸ್ಸು, ಮುನಿಸು, ಕೋಪತಾಪಗಳ ಮುಗಿಯುವ ಹಾಗೆ ಕಾಣುತ್ತಿಲ್ಲ ಮಾರಾಯ್ರೇ. ಪ್ರಜಾಧ್ವನಿ ಯಾತ್ರೆ (Prajadhavni Yatre) ಚಿತ್ರದುರ್ಗದ ತಲುಪಿ ಹಿರಿಯೂರಲ್ಲಿ ಸಮಾವೇಶ ಆರಂಭಕ್ಕೆ ಮೊದಲು ದೀಪ ಬೆಳಗುವ ಮೊದಲು ಅಂಥದೊಂದು ಪ್ರಸಂಗ ನಡೆಯಿತು. ವಿಡಿಯೋವನ್ನು ಚೆನ್ನಾಗಿ ಗಮನಿಸಿ. ಡಿಕೆ ಶಿವಕುಮಾರ (DK Shivakumar) ತಾವು ದೀಪ ಬೆಳಗಿಸಿದ ಬಳಿಕ ಅವರಿಂದ ಮೋಂಬತ್ತಿ ತೆಗೆದುಕೊಂಡು ದೀಪ ಹೊತ್ತಿಸಲು ಮುಂದಾದ ಪಕ್ಷದ ಹಿರಿಯ ನಾಯಕ ವಿ ಎಸ್ ಉಗ್ರಪ್ಪನವರನ್ನು (VS Ugrappa) ಹಿಂದೆ ತಳ್ಳಿ ಒಬ್ಬ ಮಹಿಳೆಗೆ ಮುಂದೆ ಕರೆದು ದೀಪ ಬೆಳಗಲು ಶಿವಕುಮಾರ್ ಹೇಳುತ್ತಾರೆ. ಉಗ್ರಪ್ಪನವರಿಗೆ ಅವಮಾನವಾದರೂ ತೋರಿಸಿಕೊಳ್ಳುವುದಿಲ್ಲ. ಮಾಜಿ ಸಂಸದರು ಸಿದ್ದರಾಮಯ್ಯ ಬಣಕ್ಕೆ ಸೇರಿದವರು ಅಂತ ನಮ್ಮಂಥವರಿಗೆ ಗೊತ್ತಿರುವಾಗ ಡಿಕೆಶಿಗೆ ಗೊತ್ತಿರದಿರುತ್ತದೆಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.