‘ಕೇಸ್ ಆದ್ಮೇಲೆ ರಾಜಿಗೆ ಬಂದ ವಿನಯ್ ಗೌಡ’: ಖಡಕ್ ತಿರುಗೇಟು ಕೊಟ್ಟ ಡಾಗ್ ಸತೀಶ್

Edited By:

Updated on: Mar 08, 2026 | 2:17 PM

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋಗೆ ‘ಮಾರ್ಕ್’ ಸಿನಿಮಾದ ಹಾಡು ಬಳಸಿದ್ದಕ್ಕೆ ಡಾಗ್ ಸತೀಶ್ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವಿನಯ್ ಗೌಡ, ರಜತ್ ಮುಂತಾದವರು ಸತೀಶ್ ಮೇಲೆ ಗರಂ ಆಗಿದ್ದರು. ಈ ಪ್ರಕರಣ ಇಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆ ಬಗ್ಗೆ ಸತೀಶ್ ಮಾತಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋಗೆ ‘ಮಾರ್ಕ್’ ಸಿನಿಮಾದ ಹಾಡು ಬಳಸಿದ್ದಕ್ಕೆ ಡಾಗ್ ಸತೀಶ್ (Dog Satish) ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವಿನಯ್ ಗೌಡ, ರಜತ್ ಮುಂತಾದವರು ಸತೀಶ್ ಮೇಲೆ ಗರಂ ಆಗಿದ್ದರು. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆ ಬಗ್ಗೆ ಸತೀಶ್ ಮಾತಾಡಿದ್ದಾರೆ. ‘ಸತ್ರೂ ನಾನು ವಿಡಿಯೋ ಡಿಲೀಟ್ ಮಾಡಲ್ಲ. ನಾನು ಇರುವುದೇ ಹೀಗೆ. ತಪ್ಪು ಮಾಡಲ್ಲ. ತಪ್ಪು ಮಾಡಿದ್ದರೆ ನಾನು ಕ್ಷಮೆ ಕೇಳೋಕೆ ರೆಡಿ. ತಪ್ಪು ಮಾಡಿಲ್ಲ ಎಂದರೆ ಅದನ್ನು ಎಲ್ಲಿಯವರೆಗೆ ತೆಗೆದುಕೊಂಡು ಹೋಗಲು ನಾನು ಸಿದ್ಧ. ಎಫ್​ಐಆರ್ ಆಗುತ್ತಿದ್ದಂತೆಯೇ ವಿನಯ್ ಗೌಡ (Vinay Gowda) ರಾಜಿ ಅಂತ ಮೆಸೇಜ್ ಮಾಡಿದ್ದಾರೆ. ನನ್ನನ್ನು ಕೆಣಕುವಾಗ ಅವರು ಯೋಚನೆ ಮಾಡಬೇಕಿತ್ತು’ ಎಂದು ಡಾಗ್ ಸತೀಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 08, 2026 11:56 AM
Follow Us