Video: ಅಮೆರಿಕ ರಾಜಕೀಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ ಜೆಫ್ರಿ ಲೈಂಗಿಕ ಹಗರಣ
ಡೊನಾಲ್ಡ್ ಟ್ರಂಪ್ ಜೆಫ್ರಿ ಎಪ್‌ಸ್ಟೀನ್ ಪ್ರಕರಣದ 20,000 ಪುಟಗಳ ವರದಿ ಬಿಡುಗಡೆಗೆ ಸಹಿ ಹಾಕಿದ್ದಾರೆ. ಈ ಫೈಲ್‌ಗಳಲ್ಲಿ ರಾಜಕೀಯ ನಾಯಕರು, ಪ್ರಭಾವಿಗಳು, ಉದ್ಯಮಿಗಳು ಸೇರಿದಂತೆ ಘಟಾನುಘಟಿಗಳ ಹೆಸರುಗಳಿದ್ದು, ಅಮೆರಿಕದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸ್ವಪಕ್ಷೀಯರ ಒತ್ತಡದಿಂದ ಟ್ರಂಪ್ ಈ ಆದೇಶಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದ್ದು, ಇದು ಅವರಿಗೆ ಸಂಕಷ್ಟ ತಂದೊಡ್ಡಬಹುದು.
ವಾಷಿಂಗ್ಟನ್, ನವೆಂಬರ್ 20: ಅಮೆರಿಕದ ರಾಜಕೀಯದಲ್ಲಿ ಜೆಫ್ರಿ ಎಪ್‌ಸ್ಟೀನ್ ಲೈಂಗಿಕ ಹಗರಣ ಮತ್ತೆ ಸದ್ದು ಮಾಡಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆಫ್ರಿ ಎಪ್‌ಸ್ಟೀನ್ ಪ್ರಕರಣದ ದಾಖಲೆಗಳನ್ನು ಬಿಡುಗಡೆ ಮಾಡುವ ಮಸೂದೆಗೆ ಸಹಿ ಹಾಕಿದ್ದಾರೆ. ಈ ಪ್ರಕರಣವು ಟ್ರಂಪ್‌ಗೆ ಸಂಕಷ್ಟ ತಂದೊಡ್ಡಲಿದೆ ಎಂದು ನಿರೀಕ್ಷಿಸಲಾಗಿದೆ. ಸುಮಾರು 20 ಸಾವಿರ ಪುಟಗಳ ಈ ವರದಿಯಲ್ಲಿ ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಇತರ ಪ್ರಭಾವಿ ವ್ಯಕ್ತಿಗಳ ಲೈಂಗಿಕ ಕರ್ಮಕಾಂಡದ ಸ್ಫೋಟಕ ಮಾಹಿತಿ ಇದೆ ಎಂದು ಹೇಳಲಾಗಿದೆ. ಅಮೆರಿಕದ ನ್ಯಾಯಾಂಗ ಇಲಾಖೆ ಈ ಹಿಂದೆ ಈ ವರದಿಯ ಬಿಡುಗಡೆಯನ್ನು ತಡೆಹಿಡಿದಿತ್ತು.
ಆದರೆ ಸ್ವಪಕ್ಷದವರ ಒತ್ತಡಕ್ಕೆ ಮಣಿದು ಡೊನಾಲ್ಡ್ ಟ್ರಂಪ್ ಈಗ ಬಿಡುಗಡೆ ಆದೇಶಕ್ಕೆ ಸಹಿ ಹಾಕಿದ್ದಾರೆ.ಈ ಫೈಲ್‌ಗಳಲ್ಲಿ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್, ಪಾಪ್ ಗಾಯಕ ಮೈಕಲ್ ಜಾಕ್ಸನ್, ಬಿಲ್ ಕ್ಲಿಂಟನ್, ರಾಜಮನೆತನದವರು, ಲೇಖಕರು ಮತ್ತು ಉದ್ಯಮಿಗಳು ಸೇರಿದಂತೆ ಹಲವು ಘಟಾನುಘಟಿಗಳ ಹೆಸರುಗಳಿವೆ ಎಂದು ಮಾಹಿತಿ ಲಭ್ಯವಾಗಿದೆ. ಅಪ್ರಾಪ್ತ ವಯಸ್ಸಿನವರ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದ ಮೇಲೆ ಜೆಫ್ರಿ ಎಪ್‌ಸ್ಟೀನ್ ಜೈಲು ಶಿಕ್ಷೆಗೆ ಒಳಗಾಗಿ ಜೈಲಿನಲ್ಲೇ ಮೃತಪಟ್ಟಿದ್ದರು.
ಅಮೆರಿಕದ ಕೋಟ್ಯಾಧಿಪತಿಯಾಗಿದ್ದ ಎಪ್‌ಸ್ಟೀನ್‌ನ ಗ್ರಾಹಕರಲ್ಲಿ ಗಣ್ಯ ವ್ಯಕ್ತಿಗಳು ಇದ್ದರು ಎಂದು ಈ ಫೈಲ್‌ಗಳು ಬಹಿರಂಗಪಡಿಸಲಿವೆ. ಈ ಸೆಕ್ಸ್ ಹಗರಣದ ಸದ್ದು ಅಮೆರಿಕದ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ. ಟ್ರಂಪ್ ಜೊತೆ ಜೆಫ್ರಿ ಇರುವ ಹಳೆಯ ಫೋಟೋಗಳು ಸಹ ಚುನಾವಣಾ ಸಮಯದಲ್ಲಿ ಸಾಕಷ್ಟು ಸದ್ದು ಮಾಡಿದ್ದವು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
