AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಪಾಕ್ ಆಟಗಾರನೊಂದಿಗೆ ಶೇಕ್ ಹ್ಯಾಂಡ್ ಮಾಡಿದ ಭಾರತೀಯ ಕ್ರಿಕೆಟಿಗ

VIDEO: ಪಾಕ್ ಆಟಗಾರನೊಂದಿಗೆ ಶೇಕ್ ಹ್ಯಾಂಡ್ ಮಾಡಿದ ಭಾರತೀಯ ಕ್ರಿಕೆಟಿಗ

ಝಾಹಿರ್ ಯೂಸುಫ್
|

Updated on:Nov 20, 2025 | 1:55 PM

Share

Harbhajan Singh - Shahnawaz Dahani: ಅಬುಧಾಬಿ ಟಿ10 ಲೀಗ್​ನಲ್ಲಿ ಆಸ್ಪಿನ್ ಸ್ಟಾಲಿಯನ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಹರ್ಭಜನ್ ಸಿಂಗ್ ನಾದರ್ನ್ ವಾರಿಯರ್ಸ್ ತಂಡದಲ್ಲಿದ್ದ ಪಾಕ್ ಆಟಗಾರ ಶಹನವಾಝ್ ದಹನಿಗೆ ಹಸ್ತಲಾಘವ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್​ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಪಾಕಿಸ್ತಾನ್ ಆಟಗಾರ ಶಹನವಾಝ್ ದಹಾನಿಗೆ ಶೇಕ್ ಹ್ಯಾಂಡ್ ನೀಡಿ ಸುದ್ದಿಯಾಗಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಈ ಹಿಂದೆ ಹರ್ಭಜನ್ ಸಿಂಗ್ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕಿದ್ದರು.

ಜುಲೈ 19 ರಂದು ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ವರ್ಲ್ಡ್ ಚಾಂಪಿಯನ್ಸ್​ ಟೂರ್ನಿಯಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ಹಿಂದೇಟು ಹಾಕಿದ್ದರು. ಹೀಗಾಗಿ ಈ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ಇದೀಗ ಅಬುಧಾಬಿ ಟಿ10 ಲೀಗ್​ನಲ್ಲಿ ಆಸ್ಪಿನ್ ಸ್ಟಾಲಿಯನ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಹರ್ಭಜನ್ ಸಿಂಗ್ ನಾದರ್ನ್ ವಾರಿಯರ್ಸ್ ತಂಡದಲ್ಲಿದ್ದ ಪಾಕ್ ಆಟಗಾರ ಶಹನವಾಝ್ ದಹನಿಗೆ ಹಸ್ತಲಾಘವ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಹಿಂದೆ “ರಕ್ತ ಮತ್ತು ಬೆವರು ಒಟ್ಟಿಗೆ ಇರಲು ಸಾಧ್ಯವಿಲ್ಲ” ಎಂದು ಪಾಕ್ ವಿರುದ್ಧ ಕಣಕ್ಕಿಳಿಯಲು ನಿರಾಕರಿಸಿರುವ ಹರ್ಭಜನ್ ಸಿಂಗ್ ಅವರು ಈಗ ಹೇಗೆ ಪಾಕ್​ ಆಟಗಾರನಿಗೆ ಶೇಕ್ ಹ್ಯಾಂಡ್ ನೀಡುತ್ತಿದ್ದಾರೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

Published on: Nov 20, 2025 01:51 PM