ನಿಮ್ಮನ್ನು ವಿಪಕ್ಷ ನಾಯಕ ಮಾಡ್ತಾರೆ ಅಂತಾ ಅಂದುಕೊಂಡಿದ್ದೀರಾ? ಬಸನಗೌಡ ಪಾಟೀಲ್ ಯತ್ನಾಳ್ಗೆ ಕಲಾಪದಲ್ಲೇ ಟಗರು ಸಿದ್ದಣ್ಣ ಸಖತ್ ಗುದ್ದು
ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ಗೆ ವಿಧಾನ ಸಭೆ ಕಲಾಪದಲ್ಲೇ ಟಗರು ಸಿದ್ದಣ್ಣ ಸಖತ್ ಗುದ್ದು
ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ನಿಲುವಳಿ ಪ್ರಸ್ತಾವ ಮಂಡನೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯತ್ನಾಳ್ ಅವರೇ ನೀವು ಸ್ವಲ್ಪ ತಾಳ್ಮೆಯಿಂದಿರಿ ಎಂದರು. ನಿಮ್ಮನ್ನು ವಿಪಕ್ಷ ನಾಯಕರಾಗಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ, ಇಲ್ಲಿ ಎದ್ದೆದ್ದು ನಿಂತು ಮಾತಾಡಿದ್ರೆ ನಿಮ್ಮನ್ನು ವಿಪಕ್ಷ ನಾಯಕ ಮಾಡ್ತಾರೆ ಅಂತಾ ಅಂದುಕೊಂಡಿದ್ದೀರಾ? ಸದನ ಶುರುವಾಗಿ 3 ದಿನ ಆದರೂ ವಿಪಕ್ಷ ನಾಯಕ ಆಯ್ಕೆಯಾಗಿಲ್ಲ. ಇಲ್ಲಿ ಬಂದು ಬುರುಡೆ ಹೊಡೆಯುತ್ತಿದ್ದೀರಿ ಎಂದು ಶಾಸಕ ಯತ್ನಾಳ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಚಾಯಿಸಿದರು.
Published on: Jul 05, 2023 03:01 PM