Udupi Washroom Video Case; ಇದು ಮಹಿಳೆಯರನ್ನೊಳಗೊಂಡ ಪ್ರಕರಣ, ಬ್ರೇಕಿಂಗ್ ನ್ಯೂಸ್ ಅಲ್ಲ: ಖುಷ್ಬೂ ಸುಂದರ್, ಮಹಿಳಾ ಆಯೋಗ ಸದಸ್ಯೆ

ಅರುಣ್​ ಕುಮಾರ್​ ಬೆಳ್ಳಿ

Updated on: Jul 27, 2023 | 6:30 PM

ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಳ್ಳಲು ತಯಾರಿಲ್ಲವೆಂಬ ಸುದ್ದಿಗಳೆಲ್ಲ ಸುಳ್ಳು, ಆಯೋಗದ ಸದಸ್ಯೆಯಾಗಿರುವ ತಾನು ಇಲ್ಲಿಗೆ ಬಂದಿರುವಾಗ ಅಂಥ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಖುಷ್ಬೂ ಸುಂದರ್ ಹೇಳಿದರು.

ಉಡುಪಿ: ನಗರದ ಕಾಲೇಜೊಂದರ ಟಾಯ್ಲೆಟ್ ನಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತನಿಖೆ ಶುರುವಾಗಿದೆ, ಫೋರೆನ್ಸಿಕ್ ಲ್ಯಾಬ್ ಸಾಕ್ಷ್ಯವನ್ನು (evidence) ಕ್ರೋಢೀಕರಿಸುವ ಕೆಲಸ ಮಾಡುತ್ತಿದೆ, ಮಹಿಳಾ ಅಯೋಗಕ್ಕೂ ಕೆಲಸ ಮಾಡುವ ಅವಕಾಶ ನೀಡಿ ಏನೇನೆಲ್ಲ ಊಹಿಸಿಕೊಂಡು ಪ್ರಶ್ನೆಗಳನ್ನು ಕೇಳಬೇಡಿ ಎಂದು ಮಹಿಳಾ ಅಯೋಗದ ಸದಸ್ಯೆ ಖುಷ್ಬೂ ಸುಂದರ್ (Khushboo Sundar) ಹೇಳಿದರು. ಚರ್ಚೆಯಲ್ಲಿರುವ ಕಾಲೇಜಿನ ವ್ಯವಸ್ಥಾಪಕ ಮಂಡಳಿ ಮತ್ತು ಸಂತ್ರಸ್ತೆಯ ಪೋಷಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಕಾಲೇಜು ಅವರಣದಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಖುಷ್ಬೂ, ದಯವಿಟ್ಟು ಇದನ್ನು ಬ್ರೇಕಿಂಗ್ ನ್ಯೂಸ್ (Breaking News) ಅಂತ ಟ್ರೀಟ್ ಮಾಡಬೇಡಿ, ಯಾಕೆಂದರೆ ಪ್ರಕರಣವು ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದರು. ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಳ್ಳಲು ತಯಾರಿಲ್ಲವೆಂಬ ಸುದ್ದಿಗಳೆಲ್ಲ ಸುಳ್ಳು, ಆಯೋಗದ ಸದಸ್ಯೆಯಾಗಿರುವ ತಾನು ಇಲ್ಲಿಗೆ ಬಂದಿರುವಾಗ ಅಂಥ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಖುಷ್ಬೂ ಸುಂದರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.