Video: ವರದಕ್ಷಿಣೆ ಕಿರುಕುಳ, ಮಕ್ಕಳ ಎದುರೇ ಮನೆಯ ತಾರಿಸಿಯಿಂದ ಜಿಗಿದ ಮಹಿಳೆ, ಗಾಯಗೊಂಡಾಕೆಯ ಥಳಿಸಿದ ಕುಟುಂಬಸ್ಥರು

Updated on: Sep 04, 2025 | 9:11 AM

ವರದಕ್ಷಿಣೆ ಕಿರುಕುಳ ತಾಳಲಾರದೆ ಸಾಯಬೇಕೆಂದು ಆಲೋಚಿಸಿ ಮಹಿಳೆಯೊಬ್ಬಳು ಎರಡು ಅಂತಸ್ತಿನ ಮನೆಯ ತಾರಸಿಯಿಂದ ಕೆಳಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಕುಟುಂಬದವರು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲಿಗಢ ಜಿಲ್ಲೆಯ ಇಗ್ಲಾಸ್ ತೆಹಸಿಲ್ ವ್ಯಾಪ್ತಿಯ ದಮ್ಕೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲಿಗಢ, ಸೆಪ್ಟೆಂಬರ್ 04: ವರದಕ್ಷಿಣೆ ಕಿರುಕುಳ ತಾಳಲಾರದೆ ಸಾಯಬೇಕೆಂದು ಆಲೋಚಿಸಿ ಮಹಿಳೆಯೊಬ್ಬಳು ಎರಡು ಅಂತಸ್ತಿನ ಮನೆಯ ತಾರಸಿಯಿಂದ ಕೆಳಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಕುಟುಂಬದವರು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲಿಗಢ ಜಿಲ್ಲೆಯ ಇಗ್ಲಾಸ್ ತೆಹಸಿಲ್ ವ್ಯಾಪ್ತಿಯ ದಮ್ಕೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೋನ್ ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆಯಲ್ಲಿ, ಮಹಿಳೆಯೊಬ್ಬರು ಛಾವಣಿಯ ಅಂಚಿನಲ್ಲಿ ನಿಂತಿರುವುದನ್ನು ತೋರಿಸಲಾಗಿದೆ, ಆದರೆ ಆಕೆಯ ಅತ್ತೆ-ಮಾವಂದಿರು ಪದೇ ಪದೇ ಕೆಳಗೆ ಹಾರುವಂತೆ ಒತ್ತಾಯಿಸುತ್ತಿದ್ದಾರೆ. ಅರ್ಚನಾ ಎಂದು ಗುರುತಿಸಲಾದ ಮಹಿಳೆ, ವರದಕ್ಷಿಣೆಗಾಗಿ ತನ್ನ ಅತ್ತೆ-ಮಾವಂದಿರಿಂದ ಕಿರುಕುಳ ಅನುಭವಿಸುತ್ತಿದ್ದಳು ಎಂದು ವರದಿಯಾಗಿದೆ. ಮಕ್ಕಳ ಎದುರೇ ತಾಯಿ ಮೇಲಿಂದ ಕೆಳಗೆ ಹಾರಿದ್ದಾಳೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ