Video: ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಚಾಲಕ
ಯಾವುದೋ ಸಣ್ಣ ವಿವಾದದ ಬಳಿಕ ಕೋಪಗೊಂಡ ಕಾರು ಚಾಲಕ ಬೈಕ್ ಸವಾರನನ್ನು ಬಾನೆಟ್ ಮೇಲೆ ಮೂರು ಕಿ.ಮೀ ಎಳೆದೊಯ್ದಿರುವ ಘಟನೆ ಪುಣೆಯ ಪಿಂಪ್ರಿ-ಚಿಂಚ್ವಾಡ್ ಟೌನ್ಶಿಪ್ನಲ್ಲಿ ನಡೆದಿದೆ.
ಯಾವುದೋ ಸಣ್ಣ ವಿವಾದದ ಬಳಿಕ ಕೋಪಗೊಂಡ ಕಾರು ಚಾಲಕ ಬೈಕ್ ಸವಾರನನ್ನು ಬಾನೆಟ್ ಮೇಲೆ ಮೂರು ಕಿ.ಮೀ ಎಳೆದೊಯ್ದಿರುವ ಘಟನೆ ಪುಣೆಯ ಪಿಂಪ್ರಿ-ಚಿಂಚ್ವಾಡ್ ಟೌನ್ಶಿಪ್ನಲ್ಲಿ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾರು ಚಾಲಕ ಕಮಲೇಶ್ ಪಾಟೀಲ್ (23) ಮತ್ತು ಆತನ ಇಬ್ಬರು ಸಹಚರರಾದ ಹೇಮಂತ್ ಮ್ಹಾಲಾಸ್ಕರ್ (26) ಮತ್ತು ಪ್ರಥಮೇಶ್ ದಾರಾಡೆ (22) ಅವರನ್ನು ಬಂಧಿಸಿದ್ದಾರೆ.
ಬೈಕ್ನಲ್ಲಿ ಹೋಗುತ್ತಿದ್ದ ಮ್ಯಾಥ್ಯೂಗೆ ಅಡ್ಡಾದಿಡ್ಡಿಯಾಗಿ ಓಡುತ್ತಿದ್ದ ಆಡಿ ಕಾರು ಡಿಕ್ಕಿ ಹೊಡೆದಿತ್ತು. ಕೂಡಲೇ ಬೈಕ್ ಸವಾರ ತನ್ನ ಬೈಕ್ ನಿಲ್ಲಿಸಿ ವಿವರಣೆ ಕೇಳಲೆಂದು ಬಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆಗೆ ಮುಂದಾಗಿದ್ದರು.
ಬಳಿಕ ಕಾರು ಚಾಲಕ ಮ್ಯಾಥ್ಯೂನನ್ನು ಕಾರಿನ ಬಾನೆಟ್ ಮೇಲೆ 3 ಕಿ.ಮೀ ಎಳೆದೊಯ್ದಿದ್ದಾನೆ. ಚಾಲಕ ಸೇರಿದಂತೆ ಮೂವರು ಕಾರಿನಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಆರೋಪಿ ಕುಡಿದಿದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಆತನ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಆಗಸ್ಟ್ನಲ್ಲಿ ವೇಗದ ಪಿಕಪ್ ಟ್ರಕ್ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದರು.
ಮತ್ತಷ್ಟು ಓದಿ: Video: ಕಾರಿನ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸರನ್ನು ಎಳೆದೊಯ್ದ ಅಪ್ರಾಪ್ತರು
ವರ್ಷದ ಹಿಂದೆ ಮುಂಬೈನ ವರ್ಲಿ ಪ್ರದೇಶದಲ್ಲಿ ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಬೈಕ್‌ಗೆ ಐಷಾರಾಮಿ ಕಾರೊಂದು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಅಪಘಾತದಲ್ಲಿ ಮೃತ ಮಹಿಳೆಯ ಪತಿಗೂ ಗಾಯಗಳಾಗಿತ್ತು. ಮೇ 19 ರಂದು, ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಬಾಲಕನೊಬ್ಬ ಕುಡಿದು ಪೋರ್ಷೆ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ