‘ನೀರಿನ ಶಬ್ದ ಇಲ್ಲ, ಬಟ್ಟೆ ಒಗೆದ ಶಬ್ದವೂ ಇಲ್ಲ’; ಬಾತ್ ರೂಮ್ಗೆ ಹೋದ ಪ್ರತಾಪ್ ಮೇಲೆ ಸಂಗೀತಾ ಅನುಮಾನ
ಸಂಗೀತಾ ಶೃಂಗೇರಿ ಹೇಳಿದ ಮಾತು ಕೇಳಿ ಡ್ರೋನ್ ಪ್ರತಾಪ್ ಅವರಿಗೆ ಕೋಪ ಬಂದಿದೆ. ತಮ್ಮ ಮೇಲಿನ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ. ತಾವು ತಮಾಷೆ ಮಾಡಿದ್ದು ಎಂದು ಸಂಗೀತಾ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಅದನ್ನು ಪ್ರತಾಪ್ ಅವರು ತಮಾಷೆಯಾಗಿ ಸ್ವೀಕರಿಸಿಲ್ಲ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಿಗ್ ಬಾಸ್ ಮನೆಯೊಳಗೆ ಹಗಲು ಹೊತ್ತಿನಲ್ಲಿ ಯಾರೂ ನಿದ್ದೆ ಮಾಡುವಂತಿಲ್ಲ. ಒಂದುವೇಳೆ ಮಲಗಿದರೆ ಶಿಕ್ಷೆ ನೀಡಲಾಗುತ್ತದೆ. ಡ್ರೋನ್ ಪ್ರತಾಪ್ (Drone Prathap) ಅವರು ಬಾತ್ ರೂಮ್ನಲ್ಲಿ ಮಲಗಿರಬಹುದು ಎಂಬುದು ಕೆಲವರ ಅನುಮಾನ. ಆ ಬಗ್ಗೆ ಬಿಗ್ ಬಾಸ್ ಮನೆಯೊಳಗೆ ಮಾತುಕಥೆ ನಡೆದಿದೆ. ಅದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ‘ಪ್ರತಾಪ್ ಆವಾಗಿನಿಂದ ಮಲಗಿದ್ದಾನೆ’ ಎಂದು ಸಂಗೀತಾ ಶೃಂಗೇರಿ (Sangeetha Sringeri) ಹೇಳಿದ್ದಾರೆ. ‘ಬಾತ್ ರೂಮ್ನಲ್ಲಿ ಮಲಗಿದ್ದಾನಾ’ ಎಂದು ವಿನಯ್ ಪ್ರಶ್ನೆ ಮಾಡಿದ್ದಾರೆ. ‘ನೀರು ಹಾಕಿಕೊಳ್ಳುವ ಶಬ್ದವೂ ಕೇಳುತ್ತಿಲ್ಲ. ಬಟ್ಟೆ ಒಗೆಯುವ ಶಬ್ದವೂ ಕೇಳುತ್ತಿಲ್ಲ’ ಎಂದಿದ್ದಾರೆ ಸಂಗೀತಾ. ಆ ಮಾತು ಕೇಳಿ ಡ್ರೋನ್ ಪ್ರತಾಪ್ ಅವರಿಗೆ ಕೋಪ ಬಂದಿದೆ. ‘ನಾನು ಸ್ನಾನ ಮಾಡೋಕೆ ಹೋದರೆ ಸ್ನಾನ ಮಾಡೋಕೇ ಹೋಗ್ತೀನಿ’ ಎನ್ನುವ ಮೂಲಕ ತಮ್ಮ ಮೇಲಿನ ಆರೋಪವನ್ನು ಪ್ರತಾಪ್ ಅಲ್ಲಗಳೆದಿದ್ದಾರೆ. ತಾವು ತಮಾಷೆ ಮಾಡಿದ್ದು ಎಂದು ಸಂಗೀತಾ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಅದನ್ನು ಪ್ರತಾಪ್ ಅವರು ತಮಾಷೆಯಾಗಿ ಸ್ವೀಕರಿಸಿಲ್ಲ. ಈ ಸಂಚಿಕೆ ಜನವರಿ 3ರಂದು ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.