ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ಡ್ರೋನ್ ಪ್ರತಾಪ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು ‘ಬಿಗ್ ಬಾಸ್’ ಮೂಲಕ. ಅವರ ಬಗ್ಗೆ ಇದ್ದ ನೆಗೆಟಿವ್ ಟಾಕ್ ಪಾಸಿಟಿವ್ ಆಗಿ ಬದಲಾಯಿತು. ಅವರ ಆಟ ಎಲ್ಲರೂ ಮೆಚ್ಚಿಕೊಂಡರು. ಈಗ ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಮಿಂಚುತ್ತಿದ್ದಾರೆ.
ಡ್ರೋನ್ ಪ್ರತಾಪ್ (Drone Prathap) ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಕಾಣಿಸಿಕೊಂಡು ಮಿಂಚಿದ್ದಾರೆ. ಬಿಗ್ ಬಾಸ್ನಲ್ಲಿ ಗೆದ್ದ ಹಣವನ್ನು ಅವರು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಂಡಿದ್ದರು. ಈಗ ಈ ಬಗ್ಗೆ ಅವರ ತಂದೆ ಮಾತನಾಡಿದ್ದಾರೆ. ‘ಶೋನಿಂದ ಬಂದ ಹಣವನ್ನು ಬಡವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತೇನೆ ಎಂದ. ನೀನು ಗಳಿಸಿದ ಹಣ, ಹೇಗೇ ಬೇಕಿದ್ದರೂ ಬಳಸಿಕೋ ಎಂದೆ. ಜೇಬಲ್ಲಿ ಹಣ ಇಲ್ಲದೆ ಇದ್ದರೂ ಬೇರೆಯವರಿಗೆ ಸಹಾಯ ಮಾಡುವ ಮನೋಭವಾ ಅವನದ್ದು’ ಎಂದು ಪ್ರತಾಪ್ ತಂದೆ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us