ಕೊನೆಯ ಟಾಸ್ಕ್​ನಲ್ಲಿ ಸಂಗೀತಾನೇ ಹೊರಗಿಟ್ಟ ಪ್ರತಾಪ್

Updated on: Jan 12, 2024 | 8:48 AM

ಡ್ರೋನ್ ಪ್ರತಾಪ್ ಆಟಕ್ಕೆ ಕೆಲವರು ಮೆಚ್ಚಿಗೆ ಸೂಚಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಗೀತಾಗೆ ಅಸಮಾಧಾನದ ಬುಗ್ಗೆ ಎದ್ದಿದೆ.

ಬಿಗ್ ಬಾಸ್ ಫಿನಾಲೆ ಟಿಕೆಟ್​ ಯಾರಿಗೆ ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ. ಪ್ರತಾಪ್​ ಅವರದ್ದು 280 ಅಂಕ ಹಾಗೂ ಸಂಗೀತಾ ಅವರಿಗೆ 260 ಅಂಕ ಇತ್ತು. ಈ ಸಂದರ್ಭದಲ್ಲಿ ಅವರು ಸಂಗೀತಾನ ಆಟದಿಂದ ಹೊರಗೆ ಇಟ್ಟಿದ್ದಾರೆ. ಇದು ಕೊನೆಯ ಟಾಸ್ಕ್​. ಇದರಲ್ಲಿ ಪ್ರತಾಪ್ ಗೆದ್ದಿದ್ದಾರೆ ಎನ್ನಲಾಗಿದೆ. ಸಂಗೀತಾನ ಹೊರಗಿಟ್ಟ ನಿರ್ಧಾರದಿಂದ ಪ್ರತಾಪ್ (Prathap) ಹಾಗೂ ಸಂಗೀತಾ ಮಧ್ಯೆ ಇರುವ ಗೆಳೆತನ ಕೊನೆಯಾಗುವ ಸೂಚನೆ ಸಿಕ್ಕಿದೆ. ಡ್ರೋನ್ ಪ್ರತಾಪ್ ಆಟಕ್ಕೆ ಕೆಲವರು ಮೆಚ್ಚಿಗೆ ಸೂಚಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಗೀತಾಗೆ ಅಸಮಾಧಾನದ ಬುಗ್ಗೆ ಎದ್ದಿದೆ. ಕಲರ್ಸ್ ಕನ್ನಡ ಪ್ರೋಮೋ ಹಂಚಿಕೊಂಡಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಹಾಗೂ 24 ಗಂಟೆ ಲೈವ್ ನೋಡೋ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 12, 2024 08:29 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More