‘ನನಗೇನಾಗಿತ್ತು ಗೊತ್ತಲ್ಲ, ಮಾತು ಕರೆಕ್ಟ್ ಆಗಿರಲಿ’; ಸಂಗೀತಾಗೆ ‘ವುಮನ್ ಕಾರ್ಡ್’ ಎಂದ ಕಾರ್ತಿಕ್​ನ ತಿದ್ದಿದ ವಿನಯ್

ಸಂಗೀತಾಗೆ ಕಾರ್ತಿಕ್ ಅವರು ವುಮನ್ ಕಾರ್ಡ್ ಎಂದರು. ಸಂಗೀತಾ ಅವರು ವುಮನ್ ಕಾರ್ಡ್​ ಎಂಬುದೆಲ್ಲಿದೆ ಎಂದು ಪ್ರಶ್ನೆ ಮಾಡಿದರು. ನಮ್ರತಾ ಕೂಡ ಅದರಲ್ಲಿ ವುಮನ್ ಕಾರ್ಡ್ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.

‘ನನಗೇನಾಗಿತ್ತು ಗೊತ್ತಲ್ಲ, ಮಾತು ಕರೆಕ್ಟ್ ಆಗಿರಲಿ’; ಸಂಗೀತಾಗೆ ‘ವುಮನ್ ಕಾರ್ಡ್’ ಎಂದ ಕಾರ್ತಿಕ್​ನ ತಿದ್ದಿದ ವಿನಯ್
ಕಾರ್ತಿಕ್-ಸಂಗೀತಾ-ವಿನಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 12, 2024 | 8:07 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ‘ಟಿಕೆಟ್​ ಟು ಫಿನಾಲೆ’ ಟಾಸ್ಕ್ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಾಪ್ ಮೊದಲಾದವರು ಹೆಚ್ಚಿನ ಅಂಕ ಪಡೆದು ಟಾಪ್​ನಲ್ಲಿದ್ದಾರೆ. ಈ ಮಧ್ಯೆ ಕಾರ್ತಿಕ್ ಅವರನ್ನು ಎಲ್ಲರೂ ಆಟದಿಂದ ಹೊರಕ್ಕೆ ಇಡುತ್ತಿದ್ದಾರೆ. ಇದರಿಂದ ಅವರು ಫ್ರಸ್ಟ್ರೇಟ್ ಆದಂತೆ ಕಾಣುತ್ತಿದೆ. ಈ ಕಾರಣದಿಂದ ಕಾರ್ತಿಕ್ ಅವರು ಸಿಟ್ಟಾಗಿ ರೇಗಾಡುತ್ತಿದ್ದಾರೆ. ಸಂಗೀತಾ ವಿರುದ್ಧ ಅವರು ‘ವುಮನ್ ಕಾರ್ಡ್’ ಎಂಬ ಪದ ಬಳಕೆ ಮಾಡಿದ್ದಾರೆ. ಕಾರ್ತಿಕ್ ಹಳಿ ತಪ್ಪುತ್ತಿದ್ದಾರೆ ಎಂಬುದನ್ನು ಅರಿತ ವಿನಯ್ ಅವರು ಬುದ್ಧಿವಾದ ಹೇಳಿದ್ದಾರೆ. ಈ ಎಪಿಸೋಡ್ ಗಮನ ಸೆಳೆದಿದೆ.

ವಿನಯ್ ಗೌಡ ಬಳೆಯ ವಿಚಾರ

ವಿನಯ್ ಗೌಡ ಅವರ ಬಳೆಯ ವಿಚಾರ ಸಾಕಷ್ಟು ಹೈಲೈಟ್ ಆಗಿತ್ತು. ಬಳೆ ತೊಟ್ಟವರು ಬಲ ಹೀನರು ಎಂಬರ್ಥದಲ್ಲಿ ಮಾತನಾಡಿದ್ದರು. ವೀಕೆಂಡ್ ಎಪಿಸೋಡ್​ನಲ್ಲಿ ಅವರು ಇದಕ್ಕೆ ಪಾಠ ಹೇಳಿಸಿಕೊಂಡರು. ಆ ಎಪಿಸೋಡ್ ಸಾಕಷ್ಟು ಚರ್ಚೆ ಆಗಿತ್ತು. ವಿನಯ್ ಗೌಡ ಅವರು ಈ ವಿಚಾರದಲ್ಲಿ ಟ್ರೋಲ್ ಆದರು. ಫಿನಾಲೆ ಸಮೀಪಿಸುತ್ತಿದ್ದಂತೆ ವಿನಯ್ ಗೌಡ ಅವರು ಈ ವಿಚಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿದೆ.

ಹಳಿ ತಪ್ಪಿದ ಕಾರ್ತಿಕ್?

ತಮಗೆ ಸಿಕ್ಕ ಅಧಿಕಾರದಿಂದ ಟಾಸ್ಕ್​ನಲ್ಲಿ ಕಾರ್ತಿಕ್​ನ ಸಂಗೀತಾ ಹೊರಗಿಟ್ಟರು ಹಾಗೂ ತಾವೇ ಆಡಿದರು. ಆಟ ಆಡುವಾಗ ಅವರ ಹಣೆಗೆ ಬಾಲ್ ಬಿದ್ದು ಗಾಯ ಆಗಿದೆ. ಚಿಕಿತ್ಸೆ ನೀಡಲು ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಂಗೆ ಕರೆದರು. ನಮ್ರತಾ ಅವರು ಯಾರಿಗೆ ಏನಾಯಿತು ಎಂದು ಕೇಳಿದರು. ಆಗ ‘ಐ ಆ್ಯಮ್​ ದಿ ಗರ್ಲ್ ಹು ಗೆಟ್ಸ್ ಇಂಜೂರ್ಡ್ ಇನ್​ ಎವರಿಥಿಂಗ್’ ಎಂದು ಹೇಳಿ ಹೊರಟರು. ಇದಕ್ಕೆ ಕಾರ್ತಿಕ್ ಅವರು ವುಮನ್ ಕಾರ್ಡ್ ಎಂದರು. ಸಂಗೀತಾ ಅವರು ವುಮನ್ ಕಾರ್ಡ್​ ಎಂಬುದೆಲ್ಲಿದೆ ಎಂದು ಪ್ರಶ್ನೆ ಮಾಡಿದರು. ನಮ್ರತಾ ಕೂಡ ಅದರಲ್ಲಿ ವುಮನ್ ಕಾರ್ಡ್ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.

ವಿನಯ್ ಕಿವಿಮಾತು

ವಿನಯ್ ಗೌಡ ಅವರು ಕಾರ್ತಿಕ್​ನ ತಿದ್ದುವ ಪ್ರಯತ್ನ ಮಾಡಿದರು. ‘ಬೇಡ. ನನಗೆ ಏನಾಗಿತ್ತು ಅನ್ನೋದು ಗೊತ್ತಲ್ಲ. ಈ ರೀತಿ ಮಾತನಾಡಬೇಡ. ಜನರು ನೋಡ್ತಾ ಇರ್ತಾರೆ. ನನ್ನನ್ನು ತಿದ್ದುವ ನೀವೇ ಈ ರೀತಿ ಮಾತನಾಡುತ್ತೀರಲ್ಲ’ ಎಂದು ಬೇಸರ ಮಾಡಿಕೊಂಡರು ವಿನಯ್. ಕಾರ್ತಿಕ್ ಅವರು ಪದೇ ಪದೇ ಸಂಗೀತಾ ಅವರ ತಪ್ಪು ಎನ್ನುತ್ತಾ ಬಂದಿದ್ದಾರೆ. ವೀಕೆಂಡ್ ಎಪಿಸೋಡ್​ನಲ್ಲಿ ಈ ಬಗ್ಗೆ ಅವರು ಪಾಠ ಹೇಳಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾರ್ತಿಕ್ ಜೊತೆ ಜಗಳ ಮಾಡಿ, ವಿನಯ್​, ನಮ್ರತಾಗೆ ಮೊಟ್ಟೆ ಕೊಟ್ಟ ಸಂಗೀತಾ

ಕಾರ್ತಿಕ್ ಗೌಡ ಅವರು ಇತ್ತೀಚೆಗೆ ಡಲ್ ಆಗಿದ್ದಾರಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಅವರು ಆಟದ ಬಗ್ಗೆ ಹೆಚ್ಚು ಫೋಕಸ್ ಮಾಡುತ್ತಿಲ್ಲ ಎಂದು ವೀಕ್ಷಕರಿಗೆ ಫೀಲ್ ಆಗುತ್ತಿದೆ. ಅವರು ಸದಾ ಫ್ಲರ್ಟ್ ಮಾಡುತ್ತಾ ಇರುತ್ತಾರೆ ಎನ್ನುವ ಅಭಿಪ್ರಾಯವನ್ನು ಅನೇಕರು ಹೊರ ಹಾಕಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿದೆ. 24 ಗಂಟೆ ಲೈವ್​ನ ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ