AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪ್ತ ಗೆಳೆಯ ವರ್ತೂರು ಸಂತು ಬೆನ್ನಿಗೆ ಚೂರಿ ಹಾಕಿದರೇ ತುಕಾಲಿ ಸಂತೋಷ್?

Santhu-Panthu: ಬಿಗ್​ಬಾಸ್​ನಲ್ಲಿ ವರ್ತೂರು ಸಂತು ಹಾಗೂ ತುಕಾಲಿ ಸಂತು ಅವರ ಗೆಳೆತನ ಜೋರಾಗಿದೆ. ಆದರೆ ಟಾಸ್ಕ್​ ಒಂದರಲ್ಲಿ ಆತ್ಮೀಯ ಗೆಳೆಯ ವರ್ತೂರು ಬೆನ್ನಿಗೆ ಚೂರಿ ಹಾಕುವ ಕಾರ್ಯವನ್ನು ತುಕಾಲಿ ಮಾಡಿದ್ದಾರೆ.

ಆಪ್ತ ಗೆಳೆಯ ವರ್ತೂರು ಸಂತು ಬೆನ್ನಿಗೆ ಚೂರಿ ಹಾಕಿದರೇ ತುಕಾಲಿ ಸಂತೋಷ್?
Follow us
ಮಂಜುನಾಥ ಸಿ.
|

Updated on:Jan 11, 2024 | 11:48 PM

ತುಕಾಲಿ ಸಂತೋಷ್ (Tukali Santhosh) ಹಾಗೂ ವರ್ತೂರು ಸಂತೋಷ್ (Varthur Santhosh) ಬಿಗ್​ಬಾಸ್ ಮನೆಯ ಆತ್ಮೀಯ ಸ್ನೇಹಿತರು. ಇಬ್ಬರ ಗೆಳೆತನ ಕಂಡು ‘ಸಂತು-ಪಂತು’ ಎಂದು ಮನೆಯವರು ಮುದ್ದಾಗಿ ಹೆಸರು ಸಹ ಇಟ್ಟಿದ್ದಾರೆ. ಇಬ್ಬರೂ ಸಹ ಬೀನ್​ ಬ್ಯಾಗ್ ಮೇಲೆ ಕೂತು, ಬಿಗ್​ಬಾಸ್ ಮನೆಯ ಇತರೆ ಸ್ಪರ್ಧಿಗಳ ಬಗ್ಗೆ ಮಾತ್ರವೇ ಅಲ್ಲದೆ ಇನ್ನೂ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಸುದೀಪ್ ಸಹ ಹಲವು ಬಾರಿ ಈ ಇಬ್ಬರ ಗೆಳೆತನದ ಬಗ್ಗೆ ವೀಕೆಂಡ್ ಎಪಿಸೋಡ್​ನಲ್ಲಿ ಮಾತನಾಡಿದ್ದಾರೆ. ಆದರೆ ಈಗ ತುಕಾಲಿ ಸಂತು ಆತ್ಮೀಯ ಗೆಳೆಯ ವರ್ತೂರು ಸಂತು ಬೆನ್ನಿಗೆ ಚೂರಿ ಹಾಕಿದರಾ ಎಂಬ ಅನುಮಾನ ಮೂಡುತ್ತಿದೆ.

ಪ್ರತಿಯೊಬ್ಬ ಮನೆಯ ಸದಸ್ಯರಿಗೂ ಪ್ರತ್ಯೇಕ ಟಾಸ್ಕ್​ಗಳ ನಾಯಕತ್ವವನ್ನು ಬಿಗ್​ಬಾಸ್ ನೀಡುತ್ತಿದ್ದಾರೆ. ನಾಯಕರಾದವರು ತಮ್ಮ ಎದುರಾಳಿಗಳನ್ನು ಆರಿಸಿಕೊಳ್ಳುವ ಅವಕಾಶವೂ ಇದೆ. ಪ್ರತಿ ಬಾರಿ ನಾಯಕತ್ವ ಘೋಷಣೆಯಾದಾಗ ಅವರ ಬಳಿ ಹೋಗಿ ಇತರೆ ಸದಸ್ಯರು ತಮಗೆ ಆಟ ಆಡಲು ಅವಕಾಶ ಕೊಡುವಂತೆ ಮನವಿ ಮಾಡುತ್ತಿದ್ದಾರೆ.

ಅಂತೆಯೇ ಗುರುವಾರದ ಎಪಿಸೋಡ್​ನಲ್ಲಿ ವಿನಯ್​ಗೆ ನಾಯಕತ್ವ ಸಿಕ್ಕಿತ್ತು. ಹಲಗೆಯಲ್ಲಿ ಮನೆಯ ಆಕೃತಿ ಕಟ್ಟುತ್ತಾ ಎದುರಾಳಿಗಳ ಆಕೃತಿಯನ್ನು ಚೆಂಡು ಉರುಳಿಸುವ ಮೂಲಕ ಬೀಳಿಸುವ ಟಾಸ್ಕ್ ನೀಡಲಾಗಿತ್ತು. ತನಿಷಾ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಒಬ್ಬೊಬ್ಬರಾಗಿ ಹೋಗಿ ವಿನಯ್ ಬಳಿ ತಮ್ಮನ್ನು ಆಟಕ್ಕೆ ಕರೆದುಕೊಳ್ಳುವಂತೆ ಮನವಿ ಮಾಡಿದರು. ವರ್ತೂರು ಸಂತು ಹೋಗಿ, ನನಗೆ ಆಡಲು ಅವಕಾಶ ನೀಡಿದರೆ ಚೆಂಡು ನಿಮ್ಮೆಡೆಗೆ ಉರುಳಿಸುವುದಿಲ್ಲ ಹಾಗೂ ನಿಮ್ಮನ್ನು ಆಟದಿಂದ ತೆಗೆಯುವುದಿಲ್ಲ ಎಂಬ ಭರವಸೆ ನೀಡಿದರು.

ಇದನ್ನೂ ಓದಿ:ಊಹಿಸದ ರೀತಿಯಲ್ಲಿ ಮುನ್ನುಗ್ಗುತ್ತಿರುವ ವರ್ತೂರು ಸಂತೋಷ್, ಫಿನಾಲೆಗೆ ಬರ್ತಾರಾ?

ಆದರೆ ಅದಾದ ಬಳಿಕ ಬಂದ ತುಕಾಲಿ ಸಂತು, ಯಾರು ಹೆಚ್ಚು ಅಂಕ ಪಡೆದಿದ್ದಾರೆಯೋ ಅವರನ್ನು ಆಯ್ಕೆ ಮಾಡಬೇಡ ಎಂದು ವರ್ತೂರು ಸಂತೋಷ್ ಅನ್ನು ಕೆಳಗೆ ತಳ್ಳಬೇಕು ಎಂಬರ್ಥ ಬರುವ ಮಾತುಗಳನ್ನು ಆಡಿದರು. ನಲವತ್ತು ಪಾಯಿಂಟ್ ಸಹ ಬರದಂತೆ ತಡೆಯಬೇಕು ಎಂಬ ಐಡಿಯಾವನ್ನು ವಿನಯ್ ತಲೆಗೆ ತುಂಬಿದರು. ಅಂತೆಯೇ ವಿನಯ್, ವರ್ತೂರು ಅನ್ನು ಎದುರಾಳಿಯಾಗಿ ಸೇರಿಸಿಕೊಂಡರು ಆದರೆ ಅವರು ಮೊದಲ ಸುತ್ತಿನಲ್ಲೇ ಔಟ್ ಆದರು. ಹೊರಗೆ ಕುಳಿತು 40 ಅಂಕ ಪಡೆವ ಅವಕಾಶವನ್ನೂ ಕಳೆದುಕೊಂಡರು.

ಟಾಸ್ಕ್​ನಲ್ಲಿ ವಿನಯ್ ಹಾಗೂ ಸಂಗೀತಾಗೆ ಸಖತ್ ಫೈಟ್ ಇತ್ತು. ಒಮ್ಮೆ ಟೈ ಸಹ ಆಯಿತು. ಕೊನೆಗೆ ವಿನಯ್ ಟಾಸ್ಕ್ ಗೆದ್ದರು. ಎಲ್ಲ ಮುಗಿದ ಮೇಲೆ ವಿನಯ್ ಬಳಿ ಬಂದ ವರ್ತೂರು ಸಂತು, ನನ್ನನ್ನು ಆಯ್ಕೆ ಮಾಡದೇ ಇದ್ದಿದ್ದರೆ ಹೊರಗೆ ಕೂತು 40 ಪಾಯಿಂಟ್ ಆದರೂ ಗಳಿಸುತ್ತಿದ್ದೆ ಎಂದರು. ಆಗ ವಿನಯ್, ಮನೆಗೆ ಹೋದಮೇಲೆ ಈ ಎಪಿಸೋಡ್​ ಅನ್ನು ತಪ್ಪದೆ ನೋಡಿ ಏನಾಯ್ತೆಂದು ನಿಮಗೆ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು. ಆದರೆ ನಮ್ರತಾ ಬಳಿ, ವರ್ತೂರು ಅನ್ನು ಹೊರಗಿಡುವ ಐಡಿಯಾ ಕೊಟ್ಟಿದ್ದು ತುಕಾಲಿಯೇ ಎಂಬುದನ್ನು ಹೇಳಿದರು. ಸಂಗೀತಾ ಬಳಿ ಸಹ ತುಕಾಲಿಯನ್ನು ನಂಬಬಾರದೆಂದು ಹೇಳಿದರು. ಈ ಶನಿವಾರ ಪಾಪ ತುಕಾಲಿಗೆ ಏನು ಕಾದಿದೆಯೋ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:46 pm, Thu, 11 January 24

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್