AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ರತಾ ಬಗ್ಗೆ ಟ್ರೋಲ್, ಸ್ನೇಹಿತ್ ಮಾಡಿದರೊಂದು ಮನವಿ

Snehith-Namratha: ನಮ್ರತಾ, ಕಾರ್ತಿಕ್​ ಜೊತೆ ಸಲುಗೆಯಿಂದ ಇರಲು ಆರಂಭಿಸಿದ ಬಳಿಕ ನಮ್ರತಾರ ವ್ಯಕ್ತಿತ್ವವನ್ನು ಹೀಗಳೆಯುವ ಕೆಲವು ಪೋಸ್ಟ್​ಗಳು ಹರಿದಾಡಲು ಆರಂಭವಾಗಿವೆ. ಈ ಬಗ್ಗೆ ಸ್ನೇಹಿತ್ ಮಾತನಾಡಿದ್ದಾರೆ.

ನಮ್ರತಾ ಬಗ್ಗೆ ಟ್ರೋಲ್, ಸ್ನೇಹಿತ್ ಮಾಡಿದರೊಂದು ಮನವಿ
ಮಂಜುನಾಥ ಸಿ.
|

Updated on:Jan 11, 2024 | 8:28 PM

Share

ಬಿಗ್​ಬಾಸ್ 10ರ (BiggBoss) ಸ್ಪರ್ಧಿ ನಮ್ರತಾ ಇತ್ತೀಚೆಗೆ ಸಹ ಸ್ಪರ್ಧಿ ಕಾರ್ತಿಕ್ ಮಹೇಶ್ ಜೊತೆ ಸಲುಗೆಯಿಂದಿದ್ದಾರೆ. ಇಬ್ಬರೂ ಕೈ-ಕೈ ಹಿಡಿದುಕೊಂಡು ಮಾತನಾಡುತ್ತಿರುವುದು ಹಿಂದೆ ಎಂದೂ ಇರದಷ್ಟು ಪರಸ್ಪರ ಆತ್ಮೀಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ರತಾ, ಸ್ನೇಹಿತ್ ಜೊತೆಗೂ ಇಷ್ಟೇ ಆತ್ಮೀಯವಾಗಿದ್ದರು. ಸ್ನೇಹಿತ್, ಬಿಗ್​ಬಾಸ್ ಮನೆಯಲ್ಲಿಯೇ ಹಲವು ಬಾರಿ ನಮ್ರತಾ ಎದುರು ಪ್ರೇಮನಿವೇದನೆ ಮಾಡಿಕೊಂಡಿದ್ದರು. ಆದರೆ ನಮ್ರತಾ ಅದಕ್ಕೆ ಉತ್ತರಿಸಿರಲಿಲ್ಲ, ಆದರೆ ಇಬ್ಬರೂ ಸಾಕಷ್ಟು ಆತ್ಮೀಯವಾಗಿದ್ದರು. ಆದರೆ ಈಗ ನಮ್ರತಾ, ಕಾರ್ತಿಕ್ ಜೊತೆ ಆತ್ಮೀಯವಾಗಿರುವುದನ್ನು ಕೆಲವರು ಟ್ರೋಲ್ ಮಾಡುತ್ತಿದ್ದು, ನಮ್ರತಾರ ವ್ಯಕ್ತಿತ್ವದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ನೇಹಿತ್ ಮಾತನಾಡಿದ್ದು ಮನವಿಯೊಂದನ್ನು ಮಾಡಿದ್ದಾರೆ.

‘ನಮ್ರತಾ ನನಗೆ ಮೋಸ ಮಾಡಿದರು ಎಂಬ ಮಾತುಗಳು ಹೇಳುವುದನ್ನು ದಯವಿಟ್ಟು ನಿಲ್ಲಿಸಿ. ನಮ್ರತಾ ಎಂದಿಗೂ ನಿಮ್ಮ ಮೇಲೆ ನನಗೆ ಪ್ರೀತಿ ಎಂದು ನನಗೆ ಹೇಳಿರಲಿಲ್ಲ. ಅವರ ಬಗೆಗಿನ ನನ್ನ ಪ್ರೀತಿ ಏಕಮುಖಿಯಾಗಿತ್ತು ಅಷ್ಟೆ. ನೀವೇನು ಈಗ ನಮ್ರತಾ ಬಗ್ಗೆ ಟ್ರೋಲ್, ಮೀಮ್ ಮಾಡುತ್ತಿದ್ದೀರೋ ಇದರಿಂದ ಅವರ ಕುಟುಂಬದವರಿಗೆ ಮಾತ್ರವಲ್ಲದೆ ನನಗೂ ಬೇಸರ ತರಿಸಿದೆ. ಈ ಮೀಮ್, ಟ್ರೋಲ್​ಗಳಿಂದ ಒಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತಿದೆ ಅದು ಆಗಬಾರದು’ ಎಂದಿದ್ದಾರೆ.

ಇದನ್ನೂ ಓದಿ:ಮೊದಲು ಸಂಗೀತಾ, ನಂತರ ನಮ್ರತಾ ಜತೆ ಕ್ಲೋಸ್​ ಆದ ಕಾರ್ತಿಕ್​ಗೆ ಸುದೀಪ್​ ಹೇಳಿದ್ದೇನು?

‘ನನ್ನ ಹಾಗೂ ನಮ್ರತಾ ನಡುವೆ ಏನೇ ನಡೆದಿದ್ದರೂ, ಆ ಮನೆಯಲ್ಲಿ ನಮ್ರತಾ ನನ್ನ ಮೊದಲ ಗೆಳತಿ. ನಮ್ರತಾ ನನಗೆ ಸದಾ ಬೆಂಬಲ, ಸಹಾಯ ಮಾಡಿದ್ದಾರೆ. ಹಸಿದಾಗ ಊಟ ಕೊಟ್ಟಿದ್ದಾರೆ, ಪ್ರೊಟೀನ್ ಕೊಟ್ಟಿದ್ದಾರೆ. ಅದೆಲ್ಲ ಏನೂ ಬದಲಾಗುವುದಿಲ್ಲ. ನನ್ನ, ವಿನಯ್ ಹಾಗೂ ನಮ್ರತಾ ಮಧ್ಯೆ ಇದ್ದಿದ್ದ ಗೆಳೆತನ ಅವರು ಮನೆಯಿಂದ ಹೊರಗೆ ಬಂದ ಬಳಿಕವೂ ಮುಂದುವರೆಯಲಿದೆ. ಆದರೆ ಈಗ ನಮ್ರತಾ ವ್ಯಕ್ತಿತ್ವದ ಬಗ್ಗೆ ಮಾಡುತ್ತಿರುವ ಟ್ರೋಲ್, ಮೀಮ್​ಗಳನ್ನು ನಿಲ್ಲಿಸಿ, ಇದು ನನ್ನ ಕಡೆಯಿಂದ ಎಲ್ಲರಿಗೂ ಮನವಿ’ ಎಂದಿದ್ದಾರೆ ಸ್ನೇಹಿತ್.

ಸ್ನೇಹಿತ್ ವಿಡಿಯೋ

View this post on Instagram

A post shared by S Snehith (@snehithgowda)

ಸ್ನೇಹಿತ್, ವಿನಯ್ ಹಾಗೂ ನಮ್ರತಾ ಬಿಗ್​ಬಾಸ್ ಮನೆಯಲ್ಲಿ ಬಹಳ ಆತ್ಮೀಯರಾಗಿದ್ದರು. ಸ್ನೇಹಿತ್ ಹಲವು ಬಾರಿ ನಮ್ರತಾಗೆ ಪ್ರೊಪೋಸ್ ಸಹ ಮಾಡಿದ್ದರು. ಆದರೆ ನಮ್ರತಾ ಒಪ್ಪಿಗೆ ನೀಡಿರಲಿಲ್ಲ. ಆದರೆ ಇಬ್ಬರೂ ಆತ್ಮೀಯವಾಗಿಯೇ ಇದ್ದರು. ಸ್ನೇಹಿತ್, ಮನೆಯಿಂದ ಹೊರಗೆ ಹೋದ ಬಳಿಕ ಈಗ ನಮ್ರತಾ, ಕಾರ್ತಿಕ್ ಜೊತೆಗೆ ಸಲುಗೆಯಿಂದ ಇದ್ದಾರೆ. ಇತ್ತೀಚೆಗಷ್ಟೆ ವಿನಯ್ ಜೊತೆ ಮಾತನಾಡುತ್ತಾ, ‘ಕಾರ್ತಿಕ್ ನನ್ನ ಕೈ ಹಿಡಿದುಕೊಂಡಾಗ ನನಗೆ ಕಂಫರ್ಟ್ ಎನ್ನಿಸುತ್ತದೆ. ಬೇರೆಯವರು ಹಾಗೆ ಮಾಡಿದರೆ ನಾನು ಸಿಟ್ಟಾಗಿ ಬಿಡುತ್ತಿದ್ದೆ ಆದರೆ ಕಾರ್ತಿಕ್​ಗೆ ನೋ ಹೇಳಲು ಆಗುತ್ತಿಲ್ಲ’ ಎಂದಿದ್ದರು. ಈ ಘಟನೆ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಬಗ್ಗೆ ಟ್ರೋಲ್​ಗಳು, ಮೀಮ್​ಗಳು ಹರಿದಾಡಲು ಆರಂಭವಾದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Thu, 11 January 24

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು