‘ಅವನು ಜೋಕರ್’; ಫ್ಲರ್ಟ್ ಮಾಡಿ ವರ್ಚಸ್ಸು ಕಳೆದುಕೊಂಡ್ರಾ ಕಾರ್ತಿಕ್?

ಕಾರ್ತಿಕ್ ಅವರು ಆರಂಭದಲ್ಲಿ ಸಂಗೀತಾ ಜೊತೆ ಕ್ಲೋಸ್ ಆಗಿದ್ದರು. ಆದರೆ ಇಬ್ಬರ ಮಧ್ಯೆ ಹೊಂದಾಣಿಕೆ ಬರಲಿಲ್ಲ. ಆ ಬಳಿಕ ಅವರಿಗೆ ಸಿಕ್ಕಿದ್ದು ನಮ್ರತಾ ಗೌಡ. ನಮ್ರತಾ ಜೊತೆ ಕ್ಲೋಸ್ ಆಗೋಕೆ ಅವರು ಪ್ರಯತ್ನಿಸಿದ್ದಾರೆ.

‘ಅವನು ಜೋಕರ್’; ಫ್ಲರ್ಟ್ ಮಾಡಿ ವರ್ಚಸ್ಸು ಕಳೆದುಕೊಂಡ್ರಾ ಕಾರ್ತಿಕ್?
ನಮ್ರತಾ-ಕಾರ್ತಿಕ್
Follow us
ರಾಜೇಶ್ ದುಗ್ಗುಮನೆ
|

Updated on:Jan 11, 2024 | 8:48 AM

ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಇಬ್ಬರ ಮಧ್ಯೆ ಆಪ್ತತೆ ಹೆಚ್ಚಿದೆ. ನನಗೆ ಕಾರ್ತಿಕ್ ಅವರು ಕಂಫರ್ಟ್ ಜೋನ್ ನೀಡಿದ್ದಾರೆ ಎಂದು ನಮ್ರತಾ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಕಾರ್ತಿಕ್ ಅವರನ್ನು ಜೋಕರ್ ಎಂದು ನಮ್ರತಾ ಕರೆದಿದ್ದಾರೆ. ಇತ್ತೀಚೆಗೆ ನಡೆದ ಬೆಳವಣಿಗೆ ಇದಕ್ಕೆ ಕಾರಣ. ಕಾರ್ತಿಕ್ ಅವರ ವರ್ಚಸ್ಸು ಮೊದಲಿದ್ದ ರೀತಿ ಇಲ್ಲ. ಅಲ್ಲಿ, ಇಲ್ಲಿ ಫ್ಲರ್ಟ್ ಮಾಡಿಕೊಂಡು ತಮ್ಮ ನಿಜವಾದ ಆಟವನ್ನು ಅವರು ತೋರಿಸುತ್ತಿಲ್ಲ. ಈಗ ಅವರಿಗೆ ಜೋಕರ್ ಪಟ್ಟವೂ ಸಿಕ್ಕಿದೆ.

ಕಾರ್ತಿಕ್ ಅವರು ಆರಂಭದಲ್ಲಿ ಸಂಗೀತಾ ಜೊತೆ ಕ್ಲೋಸ್ ಆಗಿದ್ದರು. ಆದರೆ ಇಬ್ಬರ ಮಧ್ಯೆ ಹೊಂದಾಣಿಕೆ ಬರಲಿಲ್ಲ. ಆ ಬಳಿಕ ಅವರಿಗೆ ಸಿಕ್ಕಿದ್ದು ನಮ್ರತಾ ಗೌಡ. ನಮ್ರತಾ ಜೊತೆ ಕ್ಲೋಸ್ ಆಗೋಕೆ ಅವರು ಪ್ರಯತ್ನಿಸಿದ್ದಾರೆ. ಕಾರ್ತಿಕ್ ಅವರು ನಡೆದುಕೊಳ್ಳುತ್ತಿರುವ ಬಗ್ಗೆ ವಿನಯ್ ಬಳಿ ನಮ್ರತಾ ಮಾತನಾಡಿದ್ದಾರೆ.

‘ಕಳೆದ ಒಂದು ವಾರದಿಂದ ಅಷ್ಟು ಸ್ವೀಟ್ ಆಗಿ ಏಕೆ ಮಾತನಾಡುತ್ತಿದ್ದೀರಿ ಎಂದು ಕಾರ್ತಿಕ್ ಬಳಿ ಕೇಳಿದೆ. ಅವರು ನಿನ್ನ ಜೊತೆ ಸಮಯ ಕಳೆಯೋಕೆ ನನಗೆ ಖುಷಿ ಇದೆ ಎಂದು ಹೇಳಿದರು’ ಎಂದು ವಿವರಿಸಿದ್ದಾರೆ ನಮ್ರತಾ. ನಂತರ ಕಾರ್ತಿಕ್ ನಡೆಯನ್ನು ನೋಡಿ ಜೋಕರ್ ಎಂದು ಕರೆದಿದ್ದಾರೆ. ಕಾರ್ತಿಕ್ ಮೊದಲು ಸಂಗೀತಾ ಜೊತೆ ಇದ್ದರು. ನಂತರ ತನಿಷಾ ಜೊತೆ ಒಳ್ಳೆಯ ಗೆಳೆತನ ಬೆಳೆಸಿಕೊಂಡರು. ಈ ವಾರ ಆ ಗೆಳೆತನ ಹಾಳಾಗುತ್ತಿದೆ. ಆ ಬಳಿಕ ನಮ್ರತಾ ಜೊತೆ ಅವರು ಆಪ್ತತೆ ಬೆಳೆಸಿಕೊಂಡಿದ್ದಾರೆ.

ಇದನ್ನೂ ಓದಿ: ತನಿಷಾ ಹಾರ್ಟ್​ಗೆ ಗಟ್ಟಿಯಾಗಿ ಚುಚ್ಚಿದ ಕಾರ್ತಿಕ್; ಈ ತಪ್ಪನ್ನು ಅವರು ಎಂದಿಗೂ ಕ್ಷಮಿಸಲ್ಲ..

‘ಅವನು ಬರೀ ದೇಹ ಬೆಳೆಸಿಕೊಂಡು, ಹೂಸು ಬಿಟ್ಕೊಂಡು ಓಡಾಡ್ತಾ ಇರ್ತಾನೆ’ ಎಂದರು ವಿನಯ್. ಆಗ ನಮ್ರತಾ ಅವರು ‘ಜೋಕರ್ ಅವನು’ ಎಂದಿದ್ದಾರೆ. ಈ ಮೊದಲು ಕಾರ್ತಿಕ್​ನ ಪ್ಲೇಯರ್ ಎಂದು ಕರೆದಿದ್ದರು. ಅವರ ಮೇಲಿದ್ದ ಅಭಿಪ್ರಾಯ ಈಗ ಬದಲಾಗಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ವೀಕ್ಷಣೆಗೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:42 am, Thu, 11 January 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ