AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ತಿಕ್ ಜೊತೆ ಜಗಳ ಮಾಡಿ, ವಿನಯ್​, ನಮ್ರತಾಗೆ ಮೊಟ್ಟೆ ಕೊಟ್ಟ ಸಂಗೀತಾ

Sangeetha-karthik: ಹಲವು ವಾರಗಳು ಸಂಗೀತಾ ಹಾಗೂ ಕಾರ್ತಿಕ್ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಇತ್ತೀಚೆಗೆ ಸ್ನೇಹಿತರಾಗಿ ಉಳಿದಿಲ್ಲ. ಈಗ ವೈರಿಗಳು ಸಹ ಆಗಿಬಿಟ್ಟಿದ್ದಾರೆ.

ಕಾರ್ತಿಕ್ ಜೊತೆ ಜಗಳ ಮಾಡಿ, ವಿನಯ್​, ನಮ್ರತಾಗೆ ಮೊಟ್ಟೆ ಕೊಟ್ಟ ಸಂಗೀತಾ
ಮಂಜುನಾಥ ಸಿ.
|

Updated on: Jan 11, 2024 | 11:29 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಜಗಳ ಸಾಮಾನ್ಯ. ಜಗಳವಾಡಿದವರು ಮತ್ತೆ ಒಳ್ಳೆಯ ಗೆಳೆಯರಾಗಿದ್ದಾರೆ. ಆದರೆ ಸಂಗೀತಾ ಕಾರ್ತಿಕ್ ಅವರದ್ದು ಭಿನ್ನ ಕತೆ. ಇಬ್ಬರು ಆರಂಭದಿಂದ ಬಹಳ ಆತ್ಮೀಯ ಗೆಳೆಯರಾಗಿದ್ದರು. ಆದರೆ ಈಗ ಬದ್ಧ ವೈರಿಗಳಾಗಿಬಿಟ್ಟಿದ್ದಾರೆ. ಸಂಗೀತಾ ಹಾಗೂ ಕಾರ್ತಿಕ್ ಆರಂಭದ ಕೆಲವು ವಾರಗಳಲ್ಲಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತಿದ್ದರು. ಇವರಿಬ್ಬರ ಸ್ನೇಹ, ಪ್ರೀತಿ ಇರಬಹುದೆಂಬ ಶಂಕೆಯನ್ನು ಮನೆಯಲ್ಲಿ ಹುಟ್ಟುಹಾಕಿತ್ತು. ಆದರೆ ಈಗ ಇಬ್ಬರ ನಡುವೆ ತೀರದ ದ್ವೇಷ ಸೃಷ್ಟಿಯಾಗಿದೆ.

ಕಳೆದ ಕೆಲವು ವಾರಗಳಿಂದಲೂ ಸಂಗೀತಾ ಹಾಗೂ ಕಾರ್ತಿಕ್ ಪರಸ್ಪರ ದೂರಾಗಿದ್ದರು. ಸ್ನೇಹಿತರು ಎಂಬ ಟ್ಯಾಗ್ ಅನ್ನು ಕಿತ್ತು ಪಕ್ಕಕ್ಕೆ ಇಟ್ಟಿದ್ದರು. ಕಾರ್ತಿಕ್ ಒಮ್ಮೆ ಎಲ್ಲರೆದುರು ಸಂಗೀತಾ ಬಳಿ ಕ್ಷಮೆ ಕೇಳಿದ್ದರು. ಸಂಗೀತಾ ಸಹ ಅದನ್ನು ಒಪ್ಪಿಕೊಂಡಿದ್ದರು. ಆದರೆ ಅದಾದ ಬಳಿಕವೂ ಅವರ ಸಂಬಂಧ ಸರಿಯಾಗಿರಲಿಲ್ಲ. ಗುರುವಾರದ ಎಪಿಸೋಡ್​ನಲ್ಲಿ ಈ ಇಬ್ಬರ ನಡುವೆ ಜೋರಾಗಿಯೇ ಜಗಳವಾಗಿದೆ.

ದಿನದ ಆರಂಭವೇ ಜಗಳದಿಂದ ಮಾಡಿತು ಈ ಜೋಡಿ. ಕಾರ್ತಿಕ್ ಹಾಗೂ ತುಕಾಲಿ ಜಿಮ್ ಏರಿಯಾದಲ್ಲಿದ್ದ ಡಂಬಲ್​ಗಳನ್ನು ಮನೆಯ ಹಾಲ್​ಗೆ ತಂದು ವರ್ಕೌಟ್ ಮಾಡಿದರು. ಕ್ಯಾಪ್ಟನ್ ಆಗಿದ್ದ ಸಂಗೀತಾ ಆಗಲೇ ಅದನ್ನು ವಿರೋಧಿಸಿದರು. ಆದರೆ ಆ ನಂತರ ಎತ್ತಿಡುತ್ತೀವಿ ಎಂದರು. ಆದರೆ ಎತ್ತಿಟ್ಟಿರಲಿಲ್ಲ, ಡಂಬಲ್ ಎತ್ತಿಡಿ ಎಂದು ಸಂಗೀತಾ ಹೇಳಿದಾಗ ಅದನ್ನು ಕಾರ್ತಿಕ್ ವಿರೋಧಿಸಿದರು. ನನಗೆ ಆದೇಶ ಕೊಡಬೇಡ ಎಂದರು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯ್ತು. ಇಬ್ಬರೂ ಸಹ ತುಸು ಏರಿದ ದನಿಯಲ್ಲಿ ಜಗಳವಾಡಿದರು. ಪರಸ್ಪರು ಯೋಗ್ಯತೆಗಳ ಬಗ್ಗೆಯೂ ಮಾತನಾಡಿಕೊಂಡರು.

ಇದನ್ನೂ ಓದಿ:ಜಗಳಕ್ಕೆ ಬಂದ ಕಾರ್ತಿಕ್​ಗೆ ಸರಿಯಾಗಿ ತಿರುಗೇಟು ಕೊಟ್ಟ ಸಂಗೀತಾ ಶೃಂಗೇರಿ

ಅದಾದ ಬಳಿಕ ಮನೆಯ ಕ್ಯಾಪ್ಟನ್ ಆಗಿ ಎಲ್ಲರನ್ನೂ ಮೀಟಿಂಗ್​ಗೆ ಕರೆದು, ಈ ವಾರ ತಮ್ಮ ಕೆಲಸದ ಜೊತೆಗೆ ಮನೆಯ ಹೆಚ್ಚುವರಿ ಕೆಲಸ ಮಾಡಿದವರಿಗೆ ಧನ್ಯವಾದ ಹೇಳಿ ಅವರಿಗಾಗಿ ತಮ್ಮ ಪಾಲಿಗೆ ಬಂದಿದ್ದ ಮೊಟ್ಟೆಗಳನ್ನು ಸಂಗೀತಾ ನೀಡಿದರು. ವಿನಯ್​, ಡ್ರೋನ್ ಪ್ರತಾಪ್, ನಮ್ರತಾ ಅವರಿಗೆ ಮೊಟ್ಟೆಗಳನ್ನು ನೀಡಿದ ಸಂಗೀತಾ, ಡಬಲ್ ಡ್ಯೂಟಿ ಮಾಡಿದ ತನಿಷಾಗೆ ಆಪಲ್ ನೀಡಿದರು. ಬಳಿಕ, ‘ಕ್ಯಾಪ್ಟನ್ ಆಗಿ ಆದೇಶ ಮಾಡುವುದು, ಮನೆಯನ್ನು ಆರ್ಡರ್​ನಲ್ಲಿ ಇಡುವುದು ನನ್ನ ಕರ್ತವ್ಯ ಹಾಗಾಗಿ ಯಾರೂ ಸಹ ನನಗೆ ಆರ್ಡರ್ ಮಾಡಬೇಡಿ ಎಂದು ಹೇಳಬೇಡಿ’ ಎಂದರು.

ಅದಾದ ಬಳಿಕ ಟಾಸ್ಕ್ ಒಂದು ನಡೆಯಿತು. ಟಾಸ್ಕ್​ನಲ್ಲಿ ಸಂಗೀತಾ ಮುಖಕ್ಕೆ ಸಣ್ಣ ಪೆಟ್ಟಾಯಿತು. ಸಂಗೀತಾ ತಮಗೇನೂ ಆಗಿಲ್ಲ ಎಂದು ಹೇಳಿದರು. ಬಳಿಕ ಸಂಗೀತಾರ ಆರೋಗ್ಯ ತಪಾಸಣೆಗೆ ಕನ್ಫೆಷನ್​ ರೂಂಗೆ ಕರೆಯಲಾಯ್ತು. ಆಗ ಸಂಗೀತಾ ತಮ್ಮ ಬಗ್ಗೆ ತಾವೇ ತಮಾಷೆ ಮಾಡುತ್ತಾ ‘ಪ್ರತಿ ಟಾಸ್ಕ್​ನಲ್ಲೂ ಗಾಯಗೊಳ್ಳುವ ಹುಡುಗಿ’ ಎಂದುಕೊಂಡು ಹೋಗುತ್ತಿದ್ದರು. ಆಗ ಅಲ್ಲಿಯೇ ಇದ್ದ ಕಾರ್ತಿಕ್ ‘ವುಮೆನ್ ಕಾರ್ಡ್’ ಎಂದು ಟಾಂಗ್ ಕೊಟ್ಟರು. ಇದು ಸಂಗೀತಾಗೆ ತೀವ್ರ ಸಿಟ್ಟು ತರಿಸಿತು.

‘ಯಾರು ವುಮೆನ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ನಾನು ಪ್ರತಿ ಟಾಸ್ಕ್​ನಲ್ಲಿ ಗಾಯಗೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡೆ ಇದು ನಿಮಗೆ ವುಮೆನ್ ಕಾರ್ಡ್, ಮಹಿಳೆ ಆಗಿರುವುದರ ಅಡ್ವಾಂಟೇಜ್ ತೆಗೆದುಕೊಳ್ಳುತ್ತಿದ್ದೇನೆ ಎನಿಸಿತಾ?’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಕಾರ್ತಿಕ್ ಹೌದು, ನನಗೆ ಅನ್ನಿಸಿತು, ನಿನಗೆ ಅದೇನು ಹೊಸದಲ್ಲ ಎಂದರು. ಕಾರ್ತಿಕ್ ಜೊತೆ ಈ ವಿಷಯವಾಗಿ ಜೋರು ಜಗಳ ಮಾಡಿದ ಸಂಗೀತಾ, ನಿಮ್ಮ ಮಾತುಗಳು ನಿಮ್ಮ ವ್ಯಕ್ತಿತ್ವ ತೋರಿಸುತ್ತವೆ ಎಂದು ಹೇಳಿ ಅಲ್ಲಿಂದ ಹೊರಟರು. ಬಳಿಕ ಕಾರ್ತಿಕ್ ಜೋರು ದನಿಯಲ್ಲಿ, ನನ್ನ ವ್ಯಕ್ತಿತ್ವದ ಬಗ್ಗೆ ಮಾತನಾಡುವ ಯೋಗ್ಯತೆ ನಿನಗೆ ಇಲ್ಲ ಎಂದರು. ಬಳಿಕ ಥೂ ಎಂದು ಉಗಿದರು. ಇದನ್ನು ಸಹ ಸಂಗೀತಾ ಖಂಡಿಸಿದರು. ಕೊನೆಗೆ ವಿನಯ್ ಮಧ್ಯ ಪ್ರವೇಶಿಸಿ, ಕಾರ್ತಿಕ್​ಗೆ ಬುದ್ಧಿವಾದ ಹೇಳಿದರು. ನಾನು ಏನೇನೋ ಪದಗಳನ್ನು ಬಳಸಿ ವಿಲನ್ ಆಗಿದ್ದೀನಿ, ನನ್ನನ್ನು ನೋಡಿ ಆದರೂ ಕಲಿ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ