AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗಳಕ್ಕೆ ಬಂದ ಕಾರ್ತಿಕ್​ಗೆ ಸರಿಯಾಗಿ ತಿರುಗೇಟು ಕೊಟ್ಟ ಸಂಗೀತಾ ಶೃಂಗೇರಿ

ಜಗಳಕ್ಕೆ ಬಂದ ಕಾರ್ತಿಕ್​ಗೆ ಸರಿಯಾಗಿ ತಿರುಗೇಟು ಕೊಟ್ಟ ಸಂಗೀತಾ ಶೃಂಗೇರಿ

ರಾಜೇಶ್ ದುಗ್ಗುಮನೆ
|

Updated on: Jan 11, 2024 | 9:02 AM

Share

ಕಾರ್ತಿಕ್ ಫ್ರಸ್ಟ್ರೇಟ್ ಆಗಿದ್ದಾರೆ. ಥೂ ಎಂದೆಲ್ಲ ಬೈದಿದ್ದಾರೆ. ಇದಕ್ಕೆ ಸಂಗೀತಾ ಹೆದರಿಕೊಂಡು ಹಿಂದೆ ಸರಿದಿಲ್ಲ. ಬದಲಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

ಕಾರ್ತಿಕ್ ಗೌಡ ಅವರಿಗೆ ಈ ವಾರ ಆಟ ಆಡೋದಕ್ಕೆ ಚಾನ್ಸ್ ಸಿಗುತ್ತಿಲ್ಲ. ಇದರಿಂದ ಅವರು ಸಾಕಷ್ಟು ಫ್ರಸ್ಟ್ರೇಟ್ ಆಗಿದ್ದಾರೆ. ಸಂಗೀತಾ ಶೃಂಗೇರಿ (Sangeetha Sringeri) ಅವರಿಗೆ ಆಟದಿಂದ ಒಬ್ಬರನ್ನು ಹೊರಗೆ ಇಡುವ ಅವಕಾಶ ಸಿಕ್ಕಿತು. ಈ ವೇಳೆ ಅವರು ಕಾರ್ತಿಕ್​ನ ಹೊರಗೆ ಇಟ್ಟರು. ಇದರಿಂದ ಕಾರ್ತಿಕ್ ಫ್ರಸ್ಟ್ರೇಟ್ ಆಗಿದ್ದಾರೆ. ಥೂ ಎಂದೆಲ್ಲ ಬೈದಿದ್ದಾರೆ. ಇದಕ್ಕೆ ಸಂಗೀತಾ ಹೆದರಿಕೊಂಡು ಹಿಂದೆ ಸರಿದಿಲ್ಲ. ಬದಲಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಮೊದಲು ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಈಗ ಅದು ಹಾಳಾಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಇಂದು (ಜನವರಿ 11) ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More