ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..

ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡ ಸ್ಪರ್ಧಿಗಳು ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಎಡವುತ್ತಿದ್ದಾರೆ. ಅವರು ಈಗ ತಿದ್ದುಕೊಳ್ಳದೇ ಇದ್ದರೆ ಫಿನಾಲೆಯಲ್ಲಿ ಕಪ್​ ಎತ್ತಬೇಕು ಎನ್ನುವ ಕನಸು ನಾಶ ಆಗಲಿದೆ. ಅವರು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..
ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 11, 2024 | 1:01 PM

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಜೋರಾಗಿದೆ. ಈಗ ಸದ್ಯ ಉಳಿದಿರೋದು ಎಂಟು ಮಂದಿ ಮಾತ್ರ. ಈ ಪೈಕಿ ಫಿನಾಲೆಗೆ ಉಳಿಯೋದು ಮೂವರು ಮಾತ್ರ. ಅವರು ಯಾರು ಎನ್ನುವ ಲೆಕ್ಕಾಚಾರ ಜೋರಾಗಿದೆ. ಅತ್ತ ಬಿಗ್ ಬಾಸ್ (Bigg Boss) ಮನೆಯಲ್ಲೂ ಸ್ಪರ್ಧೆ ಜೋರಾಗಿದೆ. ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡ ಸ್ಪರ್ಧಿಗಳು ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಎಡವುತ್ತಿದ್ದಾರೆ. ಅವರು ಈಗ ತಿದ್ದುಕೊಳ್ಳದೇ ಇದ್ದರೆ ಫಿನಾಲೆಯಲ್ಲಿ ಕಪ್​ ಎತ್ತಬೇಕು ಎನ್ನುವ ಕನಸು ನಾಶ ಆಗಲಿದೆ. ಅವರು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರು ಸಾಕಷ್ಟು ಎಡವುತ್ತಿದ್ದಾರೆ. ಅವರು ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವರು ಮೊದಲಿನ ರೀತಿ ಇಲ್ಲ. ಆರಂಭದಲ್ಲಿ ಸಂಗೀತಾ ಜೊತೆ ಇದ್ದಾಗ ಎಲ್ಲರಿಗೂ ಇಷ್ಟ ಆಗುತ್ತಿದ್ದರು. ಆದರೆ, ದಿನ ಕಳೆದಂತೆ ಅವರು ಬದಲಾದರು. ಸಂಗೀತಾ ಜೊತೆ ಮನಸ್ತಾಪ ಉಂಟಾಗಿದೆ. ಈಗ ಸಂಗೀತಾ ಅವರಿಂದ ದೂರವೇ ಇದ್ದಾರೆ. ತನಿಷಾಗೆ ಕಾರ್ತಿಕ್​ನಿಂದ ನೋವಾಗಿದೆ. ನಮ್ರತಾ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರಿಗೆ ಆಟದ ಮೇಲೆ ಗಮನ ಕಡಿಮೆ ಆಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅವರು ಆಟ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ತನಿಷಾ ಕುಪ್ಪಂಡ

ತನಿಷಾ ಕುಪ್ಪಂಡ ಅವರು ಆರಂಭದಲ್ಲಿ ಸಾಕಷ್ಟು ಸ್ಟ್ರಾಂಗ್ ಎನಿಸಿಕೊಂಡಿದ್ದರು. ಆದರೆ, ಈಗ ಅವರ ಆಟದ ವರಸೆ ಬದಲಾಗಿದೆ. ಅವರ ಕಾಲಿಗೆ ಏಟಾದ ಬಳಿಕ ಕೊಂಚ ಡಲ್ ಆಗಿದ್ದಾರೆ. ಅವರ ಹೆಸರು ಈ ವಾರದ ನಾಮಿನೇಷನ್ ಲಿಸ್ಟ್​ನಲ್ಲಿ ಇದೆ. ಅವರಿಗೆ ಎಲಿಮಿನೇಷನ್ ಭಯ ಕಾಡಿದೆ. ಅವರು ಮತ್ತೆ ಮೊದಲಿನ ಫಾರ್ಮ್​ಗೆ ಮರಳಬೇಕಿದೆ.

ನಮ್ರತಾ ಗೌಡ

ನಮ್ರತಾ ಗೌಡ ಅವರು ಬಿಗ್ ಬಾಸ್​ಗೆ ಬಂದಾಗ ‘ವಿನಯ್ ಚಮಚಾ’ ಎಂಬ ಕುಖ್ಯಾತಿ ಪಡೆದರು. ಆ ಬಳಿಕ ಅವರು ವಿನಯ್ ಅವರಿಂದ ಅಂತರ ಕಾಯ್ದುಕೊಂಡರು. ಅಲ್ಲಿಂದ ಅವರು ಶೈನ್ ಆಗಲು ಆರಂಭಿಸಿದರು. ಕಳೆದ ಹಲವು ವಾರಗಳಿಂದ ಅವರ ಹೆಸರು ನಾಮಿನೇಷನ್​ನಲ್ಲಿ ಇರಲಿಲ್ಲ. ಆದರೆ, ಈ ವಾರ ಅವರು ನಾಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಅವರು ಕಣ್ಣೀರು ಹಾಕಲು ಆರಂಭಿಸಿದ್ದಾರೆ. ‘ಈ ಮನೆಯಿಂದ ನಾನು ಹೋಗಬೇಕು’ ಎಂದು ಅತ್ತಿದ್ದಾರೆ. ಬಹುಶಃ ಅವರಿಗೆ ಎಲಿಮಿನೇಷನ್ ಭಯ ಕಾಡಿದೆ ಎನ್ನಲಾಗುತ್ತಿದೆ. ಈ ವಾರ ಹಲವು ಅವಕಾಶ ಸಿಕ್ಕರೂ ಟಾಸ್ಕ್ ಆಡಲು ಅವರ ಬಳಿ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಅವರು ಚಾರ್ಮ್ ಹೆಚ್ಚಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಜಗಳಕ್ಕೆ ಬಂದ ಕಾರ್ತಿಕ್​ಗೆ ಸರಿಯಾಗಿ ತಿರುಗೇಟು ಕೊಟ್ಟ ಸಂಗೀತಾ ಶೃಂಗೇರಿ

 ವಿನಯ್ ಗೌಡ

ಡ್ರೋನ್ ಪ್ರತಾಪ್ ಹೇಳಿದಂತೆ ವಿನಯ್ ಅವರ ನಾಲಿಗೆಗೆ ಲಗಾಮು ಬೀಳಬೇಕು. ಅವರು ಮಾತಿನಲ್ಲಿ ಪದೇ ಪದೇ ಎಡವುತ್ತಿದ್ದಾರೆ. ವಿನಯ್ ಗೌಡ ಅವರು ಮಾತನಾಡುವ ಭರದಲ್ಲಿ ಕೆಟ್ಟ ಪದ ಬಳಕೆ ಮಾಡುತ್ತಾರೆ. ಇದನ್ನು ಅವರು ನಿಯಂತ್ರಿಸಿಕೊಳ್ಳಬೇಕಿದೆ. ಉಳಿದ ಎಲ್ಲಾ ವಿಚಾರಗಳಲ್ಲಿ ಮಿಂಚುವ ವಿನಯ್ ಇದೊಂದು ವಿಚಾರದಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:01 pm, Thu, 11 January 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ