ಪ್ರೀತಿ ಇಲ್ಲದೆ ಇರೋದು ಹೇಗೆ ಎಂದು ಚಿಂತಿಸಿದ ನಮ್ರತಾ; ಖಡಕ್ ಉತ್ತರ ಕೊಟ್ಟ ವಿನಯ್

ನಮ್ರತಾ ಹಾಗೂ ಕಾರ್ತಿಕ್​ ಆಪ್ತತೆ ಕಂಡು ಸ್ನೇಹಿತ್ ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಕಾರಣಕ್ಕೆ ನಮ್ರತಾನ ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿ ಮಾಡದಂತೆ ಸ್ನೇಹಿತ್ ಅವರು ಕೋರಿದ್ದಾರೆ.

ಪ್ರೀತಿ ಇಲ್ಲದೆ ಇರೋದು ಹೇಗೆ ಎಂದು ಚಿಂತಿಸಿದ ನಮ್ರತಾ; ಖಡಕ್ ಉತ್ತರ ಕೊಟ್ಟ ವಿನಯ್
ನಮ್ರತಾ
Follow us
ರಾಜೇಶ್ ದುಗ್ಗುಮನೆ
|

Updated on:Jan 12, 2024 | 8:10 AM

ನಮ್ರತಾ ಗೌಡ (Namratha Gowda) ಅವರು ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ಅವರು ಎಲ್ಲರ ಜೊತೆ ಬರೆಯುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗುತ್ತಿದೆ. ಈ ಕಾರಣಕ್ಕೆ ಅವರ ಮೈಲೇಜ್ ಹೆಚ್ಚಿದೆ. ಅನೇಕ ವಾರಗಳಿಂದ ಅವರು ನಾಮಿನೇಟ್ ಆಗಿರಲಿಲ್ಲ. ಈ ವಾರ ಅವರು ಡೇಂಜರ್​ ಜೋನ್​ನಲ್ಲಿ ಇದ್ದಾರೆ. ಅವರಿಗೆ ಹೆಚ್ಚು ವೋಟ್ ಪಡೆಯೋ ಅಗತ್ಯವಿದೆ. ಹೀಗಾಗಿ ಹೆಚ್ಚು ಹೈಲೈಟ್ ಆಗಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ನಮ್ರತಾ ಅವರ ಕಾಲೆಳೆದಿದ್ದಾರೆ ವಿನಯ್. ಈ ಎಪಿಸೋಡ್ ಗಮನ ಸೆಳೆದಿದೆ.

ನಮ್ರತಾ ಗೌಡ ಹಾಗೂ ವಿನಯ್ ಗೌಡ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಒಬ್ಬರ ಮೇಲೊಬ್ಬರು ಹಾಸ್ಯ ಮಾಡುತ್ತಾ ಇರುತ್ತಾರೆ. ಜನವರಿ 11ರ ಎಪಿಸೋಡ್​ನಲ್ಲಿ ನಮ್ರತಾ ಗೌಡ ಅವರು ಅಡುಗೆ ಮನೆಯಲ್ಲಿದ್ದರು. ವಿನಯ್ ಹಾಗೂ ಪ್ರತಾಪ್ ಕೂಡ ಅಲ್ಲಿಯೇ ಇದ್ದರು. ಈ ವೇಳೆ ನಮ್ರತಾ ಬಾಯಿಂದ ಒಂದು ಹಾಡು ಬಂತು. ‘ಪ್ರೀತಿ ನೀನಿನ್ನಲದೆ ನಾನು ಹೇಗಿರಲಿ’ ಎಂದು ಹಾಡಿದರು. ಇದಕ್ಕೆ ವಿನಯ್ ಕೌಂಟರ್ ಕೊಟ್ಟರು. ‘ಇಷ್ಟು ವರ್ಷ ಹೇಗಿದ್ದೆಯೋ ಹಾಗೆಯೇ ಇದ್ದುಬಿಡು’ ಎಂದರು. ವಿನಯ್ ಮಾತಿಗೆ ನಮ್ರತಾ ಸೈಲೆಂಟ್ ಆದರು.

ನಮ್ರತಾ ಗೌಡ ಇತ್ತೀಚೆಗೆ ಸಾಕಷ್ಟು ಹೈಲೈಟ್ ಆಗುತ್ತಿದ್ದಾರೆ. ಮೊದಲು ಸ್ನೇಹಿತ್ ಜೊತೆ ಆಪ್ತತೆ ಬೆಳೆಸಿಕೊಂಡಿದ್ದ ಅವರು ಈಗ ಕಾರ್ತಿಕ್ ಜೊತೆ ಕ್ಲೋಸ್ ಆಗಿದ್ದಾರೆ. ಈ ಕಾರಣದಿಂದಲೂ ಸುದ್ದಿ ಆಗುತ್ತಿದ್ದಾರೆ. ನಮ್ರತಾ ಹಾಗೂ ಕಾರ್ತಿಕ್​ ಆಪ್ತತೆ ಕಂಡು ಸ್ನೇಹಿತ್ ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಕಾರಣಕ್ಕೆ ನಮ್ರತಾನ ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿ ಮಾಡದಂತೆ ಸ್ನೇಹಿತ್ ಅವರು ಕೋರಿದ್ದಾರೆ.

ಇದನ್ನೂ ಓದಿ: ಈಗ ಮನೆಯ ಮೆಚ್ಚಿನ ಸ್ಪರ್ಧಿ: ಬದಲಾದರೇ ನಮ್ರತಾ ಗೌಡ?

ಸದ್ಯ ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ, ವಿನಯ್ ಗೌಡ, ಸಂಗೀತಾ, ತನಿಷಾ, ಕಾರ್ತಿಕ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ಪ್ರತಾಪ್ ಮಧ್ಯೆ ಸ್ಪರ್ಧೆ ಮುಂದುವರಿದಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್​ಗಳು ಪ್ರಸಾರ ಕಾಣುತ್ತಿವೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:35 am, Fri, 12 January 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ