AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಹರಿಗೇ ಸಿಕ್ತು ಫೈನಲ್ ಟಿಕೆಟ್, ಫೈಟರ್ ಸಂಗೀತಾ ಫಿನಾಲೆಗೆ

Bigg Boss Finale: ಬಿಗ್​ಬಾಸ್​ ಮನೆಯ ಈ ವಾರದ ಟಾಸ್ಕ್​ ಅತ್ಯಂತ ಮಹತ್ವದ್ದಾಗಿತ್ತು. ಗೆದ್ದವರು ಫಿನಾಲೆಗೆ ಪ್ರವೇಶ ಪಡೆಯುವವರಿದ್ದರು. ಅದರಂತೆ ಅದ್ಭುತವಾಗಿ ಆಡಿದ ಹಾಗೂ ಅರ್ಹ ಸ್ಪರ್ಧಿಯೂ ಆದ ಸಂಗೀತಾ ನೇರವಾಗಿ ಫಿನಾಲೆಗೆ ಪ್ರವೇಶ ಪಡೆದರು.

ಅರ್ಹರಿಗೇ ಸಿಕ್ತು ಫೈನಲ್ ಟಿಕೆಟ್, ಫೈಟರ್ ಸಂಗೀತಾ ಫಿನಾಲೆಗೆ
ಸಂಗೀತಾ ಶೃಂಗೇರಿ
ಮಂಜುನಾಥ ಸಿ.
|

Updated on: Jan 12, 2024 | 11:24 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಈ ವಾರ ಅತ್ಯಂತ ರೋಚಕವಾಗಿತ್ತು. ಈ ವಾರ ಟಾಸ್ಕ್​ಗಳು ಸದಸ್ಯರ ಪ್ರತಿಭೆ, ತಾಳ್ಮೆ, ದೈಹಿಕ ಕ್ಷಮತೆ, ಮಾನಸಿಕ ಕ್ಷಮತೆಗಳನ್ನು ಪರೀಕ್ಷೆಗೆ ಒಡ್ಡಿದವು. ಅದರ ಜೊತೆಗೆ ತಂತ್ರ-ಪ್ರತಿತಂತ್ರಕ್ಕೆ ಅವಕಾಶವನ್ನು ನೀಡಿದವು. ಮನೆಯ ಕೆಲ ಸದಸ್ಯರ ನಿಜ ಮುಖಗಳ ಅನಾವರಣ ಮಾಡಿದವು. ಯಾರು ನಿಜವಾಗಿಯೂ ಸ್ನೇಹಿತರು, ಯಾರು ಮುಖವಾಡದ ಸ್ನೇಹಿತರು, ಯಾರಿಗೆ ಯಾರ ಮೇಲೆ ನಂಬಿಕೆ ಇದೆ, ಯಾರಿಗೆ ಇಲ್ಲ ಎಲ್ಲವನ್ನು ಪ್ರೇಕ್ಷಕರ ಮುಂದೆ ತಂದಿಟ್ಟವು ಟಾಸ್ಕ್​ಗಳು. ಅಂತಿಮವಾಗಿ ಅರ್ಹ ಸದಸ್ಯರೇ ಫಿನಾಲೆಗೆ ನೇರವಾಗಿ ಆಯ್ಕೆ ಆದರು.

ಈ ವಾರ ಆಡುವ ಟಾಸ್ಕ್​ಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರು ಫಿನಾಲೆಗೆ ಪ್ರವೇಶ ಪಡೆಯುತ್ತಾರೆ ಎಂದು ಮೊದಲೇ ಬಿಗ್​ಬಾಸ್ ಘೋಷಿಸಿದ್ದರು. ಹಾಗಾಗಿ ಮನೆಯ ಎಲ್ಲ ಸದಸ್ಯರು ಹೆಚ್ಚು ಅಂಕ ಗಳಿಸಲು ಪ್ರಯತ್ನ ಮಾಡುವ ಜೊತೆಗೆ ಇತರೆ ಸ್ಪರ್ಧಿಗಳು ಕಡಿಮೆ ಅಂಕ ಪಡೆಯುವಂತೆ ಮಾಡುವ ಸತತ ಪ್ರಯತ್ನ ಮಾಡಿದರು. ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆಯೇ ಟಾಸ್ಕ್​ ಗಳನ್ನು ಡಿಸೈನ್ ಮಾಡಲಾಗಿತ್ತಾದರೂ ಮನೆಯ ಸದಸ್ಯರ ತಂತ್ರ-ಪ್ರತಿತಂತ್ರದಿಂದ ಕೆಲವರಿಗೆ ಅವಕಾಶ ಸಿಗಲಿಲ್ಲ, ಅವಕಾಶ ಸಿಗದವರೂ ಸಹ ಪಾಯಿಂಟ್ಸ್ ಗಳಿಸುವ ಅವಕಾಶವನ್ನು ಬಿಗ್​ಬಾಸ್ ನೀಡಿದ್ದರು. ಕೆಲವರು ಇದನ್ನು ಅದ್ಭುತವಾಗಿ ಬಳಸಿಕೊಂಡರು.

ಇದನ್ನೂ ಓದಿ:ಮುರಿದು ಬಿತ್ತು ಬಿಗ್​ಬಾಸ್ ಮನೆಯ ಗಾಢ ಸ್ನೇಹ: ದೂರಾದ ಸಂತು-ಪಂತು

ಶುಕ್ರವಾರದ ಎಪಿಸೋಡ್​ನಲ್ಲಿ ವಾರದ ಕಡೆಯ ಹಾಗೂ ಡಿಸೈಡಿಂಗ್ ಟಾಸ್ಕ್ ಆಡಿಸಲಾಯ್ತು. ಕೊನೆಯ ಟಾಸ್ಕ್​ಗೆ ಮುನ್ನ ಪ್ರತಾಪ್ ಮುನ್ನಡೆಯಲ್ಲಿದ್ದರು, ಅವರಿಗೂ ಸಂಗೀತಾಗೂ ಅತ್ಯಂತ ಕಡಿಮೆ ಅಂತರ ಇತ್ತು. ಟಾಸ್ಕ್​ನ ನಾಯಕ ತುಕಾಲಿ ಸಂಗೀತಾ ಹಾಗೂ ವರ್ತೂರು ಸಂತುವನ್ನು ಆಯ್ಕೆ ಮಾಡಿಕೊಂಡರು. ವಿನಯ್​ಗೆ ಅಡ್ವಾಂಟೇಜ್ ಇದ್ದು ಆಡುವ ಅವಕಾಶ ಸಿಕ್ಕಿತು. ಆದರೆ ಡ್ರೋನ್ ಪ್ರತಾಪ್, ತಮಗೆ ಆಪ್ತರಾಗಿದ್ದ ಸಂಗೀತಾ ಅನ್ನು ಹೊರಗೆ ಇಟ್ಟು ತಾವೇ ಆಡಿದರು. ಆಡಿ ಗೆದ್ದು ಮನೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸ್ಪರ್ಧಿಯಾಗಿ ಹೊರಹೊಮ್ಮಿದರು.

ಆದರೆ ಹೊರಗೆ ಕೂತಿದ್ದ ಸಂಗೀತಾ, ಬುದ್ಧಿವಂತಿಕೆ ಹಾಗೂ ತಮ್ಮನ್ನು ಆಟದಿಂದ ತೆಗೆದರೂ ಪ್ರತಾಪ್​ ಮೇಲೆ ನಂಬಿಕೆ ಕಳೆದುಕೊಳ್ಳದೆ ಅವರೇ ಗೆಲ್ಲುತ್ತಾರೆಂದು ಮೊದಲೇ ಊಹಿಸಿದ್ದರಿಂದ 80 ಅಂಕಗಳನ್ನು ಪಡೆದು ತಾವೂ ಸಹ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ ಪ್ರತಾಪ್ ಹಾಗೂ ಸಂಗೀತಾ ಮೊದಲು ಹಾಗೂ ಎರಡನೇ ಸ್ಥಾನ ಗಳಿಸಿದರೆ, ನಮ್ರತಾ ಮೂರನೇ ಸ್ಥಾನ ಗಳಿಸಿದರು. ಆದರೆ ಬಿಗ್​ಬಾಸ್ ಟ್ವಿಸ್ಟ್ ಒಂದನ್ನು ನೀಡಿ, ಮೊದಲ ಮೂವರಲ್ಲಿ ಯಾರು ಉತ್ತಮವೆಂದು ನಿರ್ಣಯಿಸಿ, ಉತ್ತಮರಾದವರನ್ನು ಫೈನಲ್​ಗೆ ಕಳಿಸುವಂತೆ ಸೂಚಿಸಿದರು.

ಆಗ ವಿನಯ್ ನಮ್ರತಾಗೆ ಮತ ಚಲಾಯಿಸಿದರು. ವರ್ತೂರು ಸಂತೋಷ್ ಡ್ರೋನ್ ಪ್ರತಾಪ್​ಗೆ ಮತ ಚಲಾಯಿಸಿದರು. ಸಂಗೀತಾ ಜೊತೆ ಜಗಳ ಮಾಡಿಕೊಂಡು ದೂರಾಗಿರುವ ತನಿಷಾ ಹಾಗೂ ಕಾರ್ತಿಕ್ ಅವರು ಸಂಗೀತಾರಿಗೆ ಮತ ಹಾಕಿದರು. ತುಕಾಲಿ ಸಂತು ಸಹ ಸಂಗೀತಾಗೆ ಮತ ಹಾಕುವ ಮೂಲಕ ಸಂಗೀತಾ ನೇರವಾಗಿ ಫಿನಾಲೆಗೆ ಹೋದರು. ಮಾತ್ರವಲ್ಲದೆ ಬಿಗ್​ಬಾಸ್ ಕನ್ನಡ ಸೀಸನ್ 10 ರ ಕಟ್ಟ ಕಡೆಯ ಕ್ಯಾಪ್ಟನ್ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ