ಸಂಗೀತಾಗೆ ಫಿನಾಲೆ ಟಿಕೆಟ್ ಜೊತೆ ಮತ್ತೊಂದು ದೊಡ್ಡ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್

ಈ ವಾರ ಎಲ್ಲವೂ ವೈಯಕ್ತಿಕ ಟಾಸ್ಕ್​ಗಳು ಆಗಿದ್ದವು. ಸಂಗೀತಾಗೆ ಹೆಚ್ಚು ಅಂಕ ಸಿಕ್ಕಿದೆ. ಮನೆಯವರ ವೋಟ್ ಪ್ರಕಾರ ಸಂಗೀತಾ ಶೃಂಗೇರಿ ಅವರು ಫಿನಾಲೆ ಟಿಕೆಟ್ ಪಡೆದರು. ಇದರ ಜೊತೆ ಮತ್ತೊಂದು ಅಡ್ವಾಂಟೇಜ್ ಸಿಕ್ಕಿದೆ.

ಸಂಗೀತಾಗೆ ಫಿನಾಲೆ ಟಿಕೆಟ್ ಜೊತೆ ಮತ್ತೊಂದು ದೊಡ್ಡ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್
ಸಂಗೀತಾ
Follow us
ರಾಜೇಶ್ ದುಗ್ಗುಮನೆ
|

Updated on: Jan 13, 2024 | 7:42 AM

ಈ ವಾರ ಸಂಗೀತಾ ಶೃಂಗೇರಿ (Sangeetha Sringeri) ಅವರಿಗೆ ಸಾಕಷ್ಟು ಪ್ರಮುಖವಾಗಿತ್ತು. ಅವರು ಎಲ್ಲಾ ಟಾಸ್ಕ್​ನಲ್ಲಿ ಉತ್ತಮವಾಗಿ ಆಡಿದರು. ಇದರ ಜೊತೆ ಮನೆಯವರು ನೀಡಿದ ಬೆಂಬಲದಿಂದ ಅವರು ಫಿನಾಲೆ ಟಿಕೆಟ್ ಪಡೆದರು. ಇದರ ಜೊತೆಗೆ ಬಿಗ್ ಬಾಸ್ ಮತ್ತೊಂದು ಅಡ್ವಾಂಟೇಜ್ ನೀಡಿದ್ದಾರೆ. ಈ ಅಡ್ವಾಂಟೇಜ್ ಸ್ವೀಕರಿಸಿದ ಬಳಿಕ ಸಂಗೀತಾ ಅವರು ಸಖತ್ ಖುಷಿಪಟ್ಟಿದ್ದಾರೆ. ಮನೆಯವರು ಕೂಡ ಸಂಗೀತಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ.

ಈ ವಾರ ಎಲ್ಲವೂ ವೈಯಕ್ತಿಕ ಟಾಸ್ಕ್​ಗಳು ಆಗಿದ್ದವು. ಸಂಗೀತಾ ಶೃಂಗೇರಿ, ನಮ್ರತಾ ಹಾಗೂ ಪ್ರತಾಪ್ ಅತಿ ಹೆಚ್ಚು ಅಂಕ ಗಳಿಸಿ ಫಿನಾಲೆ ಟಿಕೆಟ್ ಪಡೆಯುವ ರೇಸ್ ತಲುಪಿದರು. ಈ ಪೈಕಿ ಒಬ್ಬರಿಗೆ ಟಿಕೆಟ್​ ಸಿಗಲಿದೆ ಎಂದು ಬಿಗ್ ಬಾಸ್ ತಿಳಿಸಿದರು. ಮನೆಯವರ ವೋಟ್ ಪ್ರಕಾರ ಸಂಗೀತಾ ಶೃಂಗೇರಿ ಅವರು ಫಿನಾಲೆ ಟಿಕೆಟ್ ಪಡೆದರು. ಇದರ ಜೊತೆ ಮತ್ತೊಂದು ಅಡ್ವಾಂಟೇಜ್ ಸಿಕ್ಕಿದೆ.

ಈ ವಾರ ನಡೆದಿದ್ದು ಕ್ಯಾಪ್ಟನ್ಸಿ ಟಾಸ್ಕ್​ ಕೂಡ ಹೌದಾಗಿತ್ತು. ಈ ಬಗ್ಗೆ ಸ್ಪರ್ಧಿಗಳು ಗಮನ ಹರಿಸಿರಲಿಲ್ಲ. ಫಿನಾಲೆ ಟಿಕೆಟ್ ಜೊತೆ ಕ್ಯಾಪ್ಟನ್ ಪಟ್ಟವೂ ಸಂಗೀತಾಗೆ ಸಿಕ್ಕಿದೆ. ಈ ಮೂಲಕ ಸಂಗೀತಾ ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಇದನ್ನು ಕೇಳಿ ಅವರಿಗೆ ಖುಷಿ ಆಗಿದೆ. ಮತ್ತೊಮ್ಮೆ ಕ್ಯಾಪ್ಟನ್ ಆದ ಖುಷಿಯಲ್ಲಿ ಅವರು ಸಂತೋಷ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಜಗಳಕ್ಕೆ ಬಂದ ಕಾರ್ತಿಕ್​ಗೆ ಸರಿಯಾಗಿ ತಿರುಗೇಟು ಕೊಟ್ಟ ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಅವರು ಕ್ಯಾಪ್ಟನ್ ಆಗಬೇಕು ಎಂದು ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಪ್ರಮುಖ ಘಟ್ಟದಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿ ಗಮನ ಸೆಳೆದಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್