ಹೆಣ್ಮಕ್ಕಳ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ ಗಾದೆ ಮಾತು ಕೇಳಿ ಕಾರ್ತಿಕ್​ ಮಹೇಶ್​ ಕಕ್ಕಾಬಿಕ್ಕಿ

Updated on: Nov 08, 2023 | 6:37 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ರ ಮೊದಲ ವಾರದಲ್ಲಿ ಅಳುಮುಂಜಿ ಆಗಿದ್ದ ಡ್ರೋನ್​ ಪ್ರತಾಪ್​ ಅವರು ನಂತರದ ದಿನಗಳಲ್ಲಿ ಸಖತ್​ ಆ್ಯಕ್ಟೀವ್​ ಆದರು. ಮಾತಿನ ನಡುನಡುವೆ ಅವರು ಗಾದೆ ಮಾತುಗಳನ್ನು ಬಳಸುತ್ತಾರೆ. ಬಿಗ್​ ಬಾಸ್​ ನೀಡುವ ಟಾಸ್ಕ್​ ಅನ್ನು ನಿಭಾಯಿಸುವಾಗಲೂ ಅವರು ತಮ್ಮ ಚಾಲಾಕಿತನವನ್ನು ತೋರಿಸುತ್ತಿದ್ದಾರೆ.

ಬಿಗ್​ ಬಾಸ್​ ಮನೆಯೊಳಗೆ ಕಾಲಿಡುವುದಕ್ಕೂ ಮುನ್ನ ಡ್ರೋನ್​ ಪ್ರತಾಪ್​ (Drone Prathap) ಅವರ ಬಗ್ಗೆ ಜನರಿಗೆ ಬೇರೆಯದೇ ಭಾವನೆ ಇತ್ತು. ಆದರೆ ದೊಡ್ಮನೆಯಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದ ಬಳಿಕ ಎಲ್ಲರಿಗೂ ಅಭಿಪ್ರಾಯ ಬದಲಾಗುತ್ತಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ರ (Bigg Boss Kannada Season 10) ಮೊದಲ ವಾರದಲ್ಲಿ ಅಳುಮುಂಜಿ ಆಗಿದ್ದ ಪ್ರತಾಪ್​ ಅವರು ನಂತರದ ದಿನಗಳಲ್ಲಿ ಸಖತ್​ ಆ್ಯಕ್ಟೀವ್​ ಆದರು. ಮಾತಿನ ನಡುನಡುವೆ ಅವರು ಗಾದೆ ಮಾತುಗಳನ್ನು ಬಳಸುತ್ತಾರೆ. ‘ಮೂರು ಹೆತ್ತವಳು ಆರು ಹೆತ್ತವಳಿಗೆ ಹೇಳೋಕೆ ಬಂದಳಂತೆ’ ಎಂದು ಡ್ರೋನ್​ ಪ್ರತಾಪ್​ ಹೇಳಿದಾಗ ಕಾರ್ತಿಕ್​ ಮಹೇಶ್​ಗೆ ಅರ್ಥ ಆಗಲಿಲ್ಲ. ಆ ಗಾದೆಯನ್ನು ಸಂದರ್ಭ ಸಹಿತವಾಗಿ ವಿವರಿಸಲು ಡ್ರೋನ್​ ಪ್ರತಾಪ್​ ಮುಂದಾದಾಗ ಕಾರ್ತಿಕ್​ ಕಕ್ಕಾಬಿಕ್ಕಿ ಆದರು. ಆ ಕ್ಷಣದ ವಿಡಿಯೋ ಇಲ್ಲಿದೆ. ಪ್ರತಿ ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡದಲ್ಲಿ ಬಿಗ್​ ಬಾಸ್​ (BBK 10) ಎಪಿಸೋಡ್​ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಲೈವ್​ ವೀಕ್ಷಣೆಗೆ ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 08, 2023 06:27 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More