Kalaburagi: ಬರಿದಾಗಿರುವ ಭೀಮೆಯ ಒಡಲು, ಇನ್ನೊಂದು ವಾರ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಎದುರಾಗಲಿದೆ ಹಾಹಾಕಾರ

Updated on: Jun 30, 2023 | 10:18 AM

ಉತ್ತರ ಭಾಗದ ಜೀವನಾಡಿಯಾಗಿರುವ ಭೀಮೆಯ ಒಡಲು ಬರಿದಾಗಿದೆ. ಬ್ರಿಜ್ ಕಮ್ ಬ್ಯಾರೇಜ್ ಇರುವ ಕಡೆಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರಿದೆ

ಕಲಬುರಗಿ: ರಾಜ್ಯದಲ್ಲಿ ನಾನಾಭಾಗಗಳಲ್ಲಿ ಮಳೆಯಾಗುತ್ತಿರುವುದು ನಿಜವಾದರೂ ಉತ್ತರ ಭಾಗದಲ್ಲಿ ಹರಿಯುವ ನದಿಗಳನ್ನು (rivers) ನೋಡಿದರೆ ವಾಸ್ತವಾಂಶ ಭಿನ್ನವಾಗಿರುವುದು ನಿಚ್ಚಳವಾಗುತ್ತದೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಮೂಲಕ ಹರಿಯುವ ಭೀಮಾ ನದಿಯ (Bhima River) ಸ್ಥಿತಿ ನೋಡಿ ಹೇಗಿದೆ. ಮಾನ್ಸೂನ್ ಋತು (monsoon season) ಶುರುವಾಗಿ ಒಂದು ತಿಂಗಳು ಕಳೆದರೂ ಕಲ್ಯಾಣ ಕರ್ನಾಟಕದಲ್ಲಿ ಮಳೆಯಾಗುತ್ತಿಲ್ಲ. ಈ ಭಾಗದ ಜೀವನಾಡಿಯಾಗಿರುವ ಭೀಮೆಯ ಒಡಲು ಬರಿದಾಗಿದೆ. ಬ್ರಿಜ್ ಕಮ್ ಬ್ಯಾರೇಜ್ ಇರುವ ಕಡೆಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರಿದೆ. ಇನ್ನೊಂದು ವಾರದಲ್ಲಿ ಉತ್ತಮ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಟಿವಿ ಕನ್ನಡ ವಾಹಿನಿ ಕಲಬುರಗಿ ವರದಿಗಾರ ಸ್ಥಿತಿಯ ಕುರಿತು ಒಂದು ಪ್ರತ್ಯಕ್ಷ ವರದಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More