AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yadagiri News: ಕೈಕೊಟ್ಟ ಮುಂಗಾರು ಮಳೆ, ಬತ್ತಿದ ಭೀಮಾ ನದಿ; ಸಂಕಷ್ಟಕ್ಕಿಡಾದ ಅನ್ನದಾತ

ಮುಂಗಾರು ಆರಂಭವಾಗಿ 15 ದಿನಗಳ ಕಳೆದಿದೆ. ಮಳೆ ಬಂದ್ರೆ, ಬಿತ್ತನೆ ಆರಂಭಿಸಬೇಕೆಂದು ರೈತರು ಅಂದುಕೊಂಡಿದ್ದರು. ಆದ್ರೆ, ಮಳೆ ಕೈಕೊಟ್ಟ ಕಾರಣಕ್ಕೆ ಅನ್ನದಾತರು ಅಕ್ಷರಶ ಕಂಗಲಾಗಿ ಹೋಗಿದ್ದಾರೆ. ಮಳೆಗಾಗಿ ರೈತರು ಆಕಾಶದತ್ತ ಮುಖ ಮಾಡಿ ಕುಳಿತ್ತಿದ್ದಾರೆ. ಇನ್ನೊಂದು ಕಡೆ ನದಿ ಕೂಡ ಬತ್ತಿ ಹೋಗಿದ್ದರಿಂದ ಆ ಜಿಲ್ಲೆಯ ರೈತರಿಗೆ ಬರಿ ಸಿಡಿಲು ಬಡಿದಂತಾಗಿದೆ.

Yadagiri News: ಕೈಕೊಟ್ಟ ಮುಂಗಾರು ಮಳೆ, ಬತ್ತಿದ ಭೀಮಾ ನದಿ; ಸಂಕಷ್ಟಕ್ಕಿಡಾದ ಅನ್ನದಾತ
ಯಾದಗಿರಿ
ಕಿರಣ್ ಹನುಮಂತ್​ ಮಾದಾರ್
|

Updated on: Jun 21, 2023 | 8:07 AM

Share

ಯಾದಗಿರಿ: ಕೈಕೊಟ್ಟ ಮುಂಗಾರು ಮಳೆಯಿಂದ ಅನ್ನದಾತರು ಸಂಕಷ್ಟಕ್ಕಿಡಾಗಿದ್ದಾರೆ. ಮಳೆ ಬರಲಿಲ್ಲವೆಂದು ಬಿತ್ತನೆ ಮಾಡದೆ ರೈತರು ಖಾಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನೊಂದು ಕಡೆ ಭತ್ತ ಬೆಳೆಯಬೇಕು ಅಂದ್ರೆ, ಭೀಮಾ ನದಿ(Bhima River) ಕೂಡ ಖಾಲಿಯಾಗಿದೆ. ಹೌದು ಯಾದಗಿರಿ(Yadagiri)ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿ 15 ದಿನಗಳ ಕಳೆದಿವೆ. ಮೃಗಶಿರ ಮಳೆ ಬರುತ್ತೆ, ಮುಂಗಾರು ಬಿತ್ತನೆ ಆರಂಭ ಮಾಡಬೇಕೆಂದು ರೈತರು ಅಂದುಕೊಂಡಿದ್ರು. ಆದ್ರೆ, ಕಳೆದ 15 ದಿನಗಳು ಕಳೆದರೂ ಮಳೆ ಬರದ ಹಿನ್ನಲೆ ರೈತರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಮುಂಗಾರು ಬೆಳೆಗೆ ಸಿದ್ದತೆ ಮಾಡಿಕೊಂಡಿದ್ದ ರೈತರು

ಇನ್ನು ಕಳೆದ ಒಂದು ತಿಂಗಳಿನಿಂದ ರೈತರು ಮುಂಗಾರು ಬಿತ್ತನೆ ಸಿದ್ದತೆ ಮಾಡಿಕೊಂಡಿದ್ದಾರೆ. ಮುಂಗಾರು ಬೆಳೆಯಾಗಿ ಯಾದಗಿರಿ ಜಿಲ್ಲೆಯ ರೈತರು ಹೆಸರು, ಉದ್ದು, ಹತ್ತಿ ಹಾಗೂ ತೊಗರಿಯನ್ನ ಬೆಳೆಯುತ್ತಾರೆ. ಹೀಗಾಗಿ ಫೈಪೋಟಿ ಮೂಲಕ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನ ಖರೀದಿ ಮಾಡಿಕೊಂಡು ರೈತರು ಬಂದಿದ್ದಾರೆ. ಇನ್ನು ಕಳೆದ ಒಂದು ತಿಂಗಳಿನಿಂದ ಬಿತ್ತನೆಗಾಗಿ ಜಮೀನು ಕೂಡ ಹದ ಮಾಡಿಕೊಂಡಿದ್ದಾರೆ. ಆದ್ರೆ, ವರುಣ ದೇವನ ಮುನಿಸು ಮಾತ್ರ ಇನ್ನುವರೆಗೆ ಮುಗಿದಿಲ್ಲ. ಈಗಾಗಲೇ ಬಿತ್ತನೆ ಆರಂಭವಾಗಿ 15 ದಿನಗಳ ಕಳೆಯಬೇಕಿತ್ತು. ರೈತರ ಜಮೀನುಗಳು ಹಸಿರಿನಿಂದ ಕಂಗೊಳಿಸಬೇಕಿತ್ತು. ಆದ್ರೆ, ಬೇಸಿಗೆ ಸಂದರ್ಭದಲ್ಲಿ ಯಾವ ರೀತಿಯ ಭೂಮಿ ಕಾಣುತ್ತಿತ್ತೊ ಅದೇ ರೀತಿಯಾಗಿದೆ.

ಇದನ್ನೂ ಓದಿ:ಮುಂಗಾರು ಪೂರ್ವ ಮಳೆಗೆ ಕೊಚ್ಚಿ ಹೋಯ್ತು ರೈತನ ಕನಸು: ಸಾವಿರಾರು ಹೆಕ್ಟೇರ್​ ಬೆಳೆ ನಾಶ

ಇನ್ನು ಹೆಸರು ಬಿತ್ತನೆ ಮುಂಗಾರು ಆರಂಭದಲ್ಲೇ ಮಾಡಬೇಕು. ಆದ್ರೆ, ಮಳೆ ಬಾರದ ಕಾರಣಕ್ಕೆ ಹೆಸರು ಬಿತ್ತನೆ ದಿನಗಳ ಮುಗಿದು ಹೋಗಿವೆ. ಇವತ್ತು ನಾಳೆ ಮಳೆ ಬಂದ್ರೆ, ಹೆಸರು ಬಿತ್ತನೆ ಮಾಡಲು ಆಗಲ್ಲ. ಬಿತ್ತನೆ ಮಾಡಿದರೂ ಬೆಳೆ ಬರುವುದಿಲ್ಲ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಮಳೆ ಬಂದ್ರೆ, ರೈತರು ತೊಗರಿ ಹಾಗೂ ಹತ್ತಿ ಬಿತ್ತನೆ ಮಾಡಬಹುದಾಗಿದೆ. ಆದರೀಗ ಮಳೆ ಮಾತ್ರ ಬರುವ ಲಕ್ಷಣಗಳು ಕಾಣುತ್ತಿಲ್ಲ.

ಬತ್ತಿದ ಭೀಮಾ ನದಿ

ಇನ್ನು ಮಳೆ ಬಾರದೆ ಇದ್ದರೂ ಸಹ ನದಿ ನೀರನ್ನ ಬಳಸಿಕೊಂಡು ಭತ್ತ ಬೆಳೆಯುತ್ತಿದ್ದರು. ಹೌದು ಯಾದಗಿರಿ ಜಿಲ್ಲೆಯ ಜನರ ಜೀವನಾಡಿಯಾಗಿರುವ ಭೀಮಾ ನದಿ ನೀರನ್ನ ಬಳಸಿಕೊಂಡು ಸಾವಿರಾರು ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನ ಬೆಳೆಯುತ್ತಾರೆ. ಪ್ರತಿ ವರ್ಷ ಭೀಮಾ ನದಿ ನೀರು ಬಳಸಿಕೊಂಡು ಎರಡೇರಡು ಬೆಳೆಗಳನ್ನ ರೈತರು ಬೆಳೆಯುತ್ತಿದ್ರು. ಆದ್ರೆ, ಮಳೆ ಇಲ್ಲದ ಕಾರಣಕ್ಕೆ ಭೀಮಾ ನದಿ ಕೂಡ ಸಂಪೂರ್ಣವಾಗಿ ಬತ್ತಿ ಹೋಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದ್ರೆ ಮಾತ್ರ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ನದಿ ಭರ್ತಿಯಾಗುತ್ತಿತ್ತು. ಇದೀಗ ಮಹಾರಾಷ್ಟ್ರ ಅಲ್ಲ ಕರ್ನಾಟಕದಲ್ಲೂ ಮಳೆಯಾಗದ ಕಾರಣಕ್ಕೆ ನದಿ ಸಂಪೂರ್ಣವಾಗಿ ಖಾಲಿಯಾಗಿದೆ.

ಇದನ್ನೂ ಓದಿ:ಬೆಳಗಾವಿಯಂತೆ ಉಡುಪಿಯಲ್ಲೂ ನೀರಿನ ತೀವ್ರ ಅಭಾವ ಎದುರಾಗಿದೆ, ಮಳೆ ಸುರಿಯದಿದ್ದರೆ ಬಹಳ ಕಷ್ಟ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ನದಿ ಖಾಲಿಯಾಗಿರುವ ಕಾರಣಕ್ಕೆ ನದಿಯಲ್ಲಿ ಕಲ್ಲು ಬಂಡೆಗಳು ತೆಲಿ ಬಂದಿದೆ. ಸದಾ ಕಾಲ ನೀರಿನಿಂದ ತುಂಬಿರುತ್ತಿದ್ದ ನದಿ ಈಗ ಬರುಡು ಭೂಮಿಯಂತಾಗಿದೆ. ಇದೆ ನದಿ ನೀರು ಯಾದಗಿರಿ, ಶಹಾಪುರ ನಗರ, ಗುರುಮಠಕಲ್ ಪಟ್ಟಣಕ್ಕೆ ಹಾಗೂ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಕುಡಿಯಲು ಸರಬರಾಜು ಮಾಡಲಾಗುತ್ತೆ. ಆದ್ರೆ, ನದಿ ನೀರು ಖಾಲಿಯಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಕುಡಿಯೋದ್ದಕ್ಕೆ ನೀರು ಇಲ್ಲದ ಮೇಲೆ ಇನ್ನು ಭತ್ತ ಬೆಳೆಯೋಕೆ ನೀರು ಎಲ್ಲಿಂದ ಸಿಗುತ್ತದೆ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.

ಇನ್ನು ಮಳೆ ಬರುತ್ತೆ ನದಿ ತುಂಬುತ್ತೆ ಹೀಗಾಗಿ ಭತ್ತ ಬೆಳೆಯೋಣವೆಂದು ರೈತರು ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಸಾಲದ್ದಕ್ಕೆ ಕಳೆದ 20 ದಿನಗಳ ಹಿಂದೆ ಬೀಜವನ್ನ ಚೆಲ್ಲಿ ಭತ್ತದ ಸಸಿಗಳನ್ನೂ ಸಹ ರೆಡಿ ಮಾಡಿಕೊಂಡು ಕುಳಿತ್ತಿದ್ದಾರೆ. ಆದ್ರೆ, ಮಳೆನು ಇಲ್ಲ ನದಿಯಲ್ಲಿ ನೀರು ಇಲ್ಲದ ಕಾರಣಕ್ಕೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಒಟ್ಟಿನಲ್ಲಿ ಮುಂಗಾರು ಕೈ ಕೊಟ್ಟಿದ್ದಕ್ಕೆ ಅನ್ನದಾತರು ಅಕ್ಷರಶಃ ಕಂಗಲಾಗಿ ಹೋಗಿದ್ದಾರೆ. ಮಳೆ ಬಂದರೆ ಬಿತ್ತನೆ ಆರಂಭವಾಗಿ ಬೆಳೆ ಮೊಳಕೆ ಕೂಡ ಒಡೆಯುತ್ತಿತ್ತು. ಈಗ ರೈತರು ಮಳೆ ಬಾರದ್ದಕ್ಕೆ ಆಕಾಶದತ್ತ ಮುಖ ಮಾಡಿ ಕುಳಿತುಕೊಳ್ಳುವಂತಾಗಿದೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ