ಬೀದರ್: ಬೆಲೆ ಕುಸಿತದಿಂದ ಕಂಗಾಲು; ತಮ್ಮ ಕೈಯಾರೆ ಬೆಳೆ ನಾಶ ಮಾಡಿದ ಟೊಮೆಟೋ ಬೆಳೆಗಾರರು

ಪ್ರತಿಯೊಬ್ಬ ರೈತರು ಒಂದು ಎಕರೆಗೆ ಸಸಿ ಖರೀದಿ, ಕೃಷಿ ಚಟುವಟಿಕೆ, ರಸಗೊಬ್ಬರ ಸೇರಿ ನಿರ್ವಹಣೆಗಾಗಿ ಸುಮಾರು 50 ಸಾವಿರದಷ್ಟು ದಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ 25 ಕೆಜಿಯ ಒಂದು ಬಾಕ್ಸ್‌ ಟೊಮೆಟೋಗೆ 50 ರೂಪಾಯಿ ಬೆಲೆ ಕೇಳುತ್ತಿದ್ದಾರೆ. ಇನ್ನು ಸಲ ರೈತರು ಈ ಭಾಗಗಳಲ್ಲಿಯೂ ಟೊಮ್ಯಾಟೋ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿದ್ದಾರೆ.

ಬೀದರ್: ಬೆಲೆ ಕುಸಿತದಿಂದ ಕಂಗಾಲು; ತಮ್ಮ ಕೈಯಾರೆ ಬೆಳೆ ನಾಶ ಮಾಡಿದ ಟೊಮೆಟೋ ಬೆಳೆಗಾರರು
ಟೊಮೆಟೋ
Follow us
| Updated By: preethi shettigar

Updated on: Mar 27, 2022 | 8:57 PM

ಬೀದರ್​: ರೈತರ ಪಾಲಿಗೆ ಅಲ್ಪಾವಧಿಗೆ ಹಣ ತಂದು ಕೊಡುವ ಬೆಳೆ ಎಂದರೆ ಅದು ಟೊಮ್ಯಾಟೊ. ಕೆಲವೊಮ್ಮೆ ಟೊಮ್ಯಾಟೊ ಬೆಳೆ ರೈತನ (Farmer) ಕೈ ಹಿಡಿದರೆ ಇನ್ನು ಕೆಲವೊಮ್ಮೆ ರೈತನನ್ನ ನಷ್ಟಕ್ಕೆ ತಳ್ಳಿ ಬಿಡುತ್ತದೆ. ಆದರೆ ಈ ವರ್ಷ ಟೊಮ್ಯಾಟೋ (Tomato) ಬೆಳೆದ ರೈತ ಕಂಗಾಲಾಗಿದ್ದು, ಬೆಲೆಯಿಲ್ಲದ್ದಕ್ಕಾಗಿ ಟೊಮ್ಯಾಟೋವನ್ನು ನಾಶಪಡಿಸುತ್ತಿದ್ದಾರೆ. ಟೊಮೆಟೋ ಬೆಲೆ ಕುಸಿತದಿಂದ ಕಂಗಾಲಾಗಿರುವ ಬೀದರ್ ಜಿಲ್ಲೆಯ ರೈತರು ತಾವು ಬೆಳೆದಿರುವ ಟೊಮೆಟೋ ಬೆಳೆಯನ್ನು(Crop) ತೋಟದಲ್ಲಿಯೇ ನಾಶ ಪಡಿಸುತ್ತಿದ್ದಾರೆ. ಪ್ರತಿ ಕಿಲೋಗೆ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೋ ಈಗ ಕೇವಲ 2 ರೂಪಾಯಿಗೆ ಕುಸಿದಿದೆ.

ಲಕ್ಷದವರೆಗೆ ಬಂಡವಾಳ ಹಾಕಿ ಲಾಭದ ನಿರೀಕ್ಷೆಯಲ್ಲಿ ಬೆಳೆ ಬೆಳೆದ ರೈತ ಕೊನೆಗೆ ದಿಕ್ಕು ತೋಚದೆ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಇದ್ದರೂ 800 ರಿಂದ 1 ಸಾವಿರ ಅಡಿಗಳಿಂದ ನೀರೆತ್ತಿ ಸಮೃದ್ಧ ಬೆಳೆ ತೆಗೆಯುವ ರೈತರಿಗೆ ಕೊನೆಗೆ ಅಸಲೂ ಸಿಗದೆ ಒದ್ದಾಡುವಂತಾಗಿದೆ.

ಸುಮಾರು 3 ಎಕರೆಯಷ್ಟೂ ಜಮೀನಿನಲ್ಲಿ ಟೋಮ್ಯಾಟೋ ಸಸಿಗಳನ್ನು ನಾಟಿಮಾಡಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಬಂಡವಾಳ ತೊಡಗಿಸಿದ್ದೆ ಆದರೆ ಇದರಿಂದ ನಮಗೆ ಬಿಡಿಗಾಸು ಸಿಗಲಿಲ್ಲ. ಟೊಮೆಟೋ ಹಣ್ಣನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ತೋಟದಲ್ಲಿಯೇ ಗಿಡಗಳನ್ನು ನಾಶಮಾಡಿದರೆ ಗೊಬ್ಬರವಾದರು ಆಗುತ್ತದೆಂದು ಹೀಗೆ ಮಾಡುತ್ತಿದ್ದೇನೆಂದು ಎಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತ ದೇವಿದಾಸ್ ಅಸಹಾಯಕತೆ ವ್ಯಕ್ತಪಡಿಸಿದರು.

ಕೆಲವು ಸಲ ರೈತರಿಗೆ ಟೊಮ್ಯಾಟೋ ಬೆಳೆ ಕೆಂಪು ಚಿನ್ನವಾಗಿ ಬದಲಾಗುತ್ತದೆ. ಆವಾಗ ರೈತರಿಗೆ ಜಾಕ್ ಪಾಟ್ ಹೊಡೆದಂತೆಯೇ. ಆದರೆ ಒಮ್ಮೊಮ್ಮೆ ದರದಲ್ಲಿ ಕುಸಿತವಾದರೆ ರೈತ ಪ್ರಪಾತಕ್ಕೆ ಕುಸಿಯೋದು ಗ್ಯಾರಂಟಿ ಎಂದೇ ಹೇಳಬಹುದು. ಇನ್ನೂ ಈ ಬಾರಿ ಕೆಂಪು ಚಿನ್ನಕ್ಕೆ ಬೆಲೆಯಿಲ್ಲದಂತಾಗಿದ್ದು, ಇದರಿಂದ ರೈತರು ಕಂಗಾಲಾಗುವಂತೆ ಮಾಡಿದೆ. ಬೆಲೆ ಕುಸಿತದಿಂದ ರೋಸಿ ಹೋಗಿರುವ ರೈತ ಬೆಳೆಯನ್ನು ಕಿತ್ತುಹಾಕುತ್ತಿದ್ದಾರೆ. ಇನ್ನೂ ಈ ವರ್ಷ ಟೊಮ್ಯಾಟೋ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ್ದರಿಂದ ರೈತರಿಗೆ ಇದರಿಂದಾಗಿ ಭಾರೀ ಪ್ರಮಾಣದಲ್ಲಿ ನಷ್ಟ ಸಂಬವಿಸಿದೆ.

ಇನ್ನೂ ಪ್ರತಿಯೊಬ್ಬ ರೈತರು ಒಂದು ಎಕರೆಗೆ ಸಸಿ ಖರೀದಿ, ಕೃಷಿ ಚಟುವಟಿಕೆ, ರಸಗೊಬ್ಬರ ಸೇರಿ ನಿರ್ವಹಣೆಗಾಗಿ ಸುಮಾರು 50 ಸಾವಿರದಷ್ಟು ದಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ 25 ಕೆಜಿಯ ಒಂದು ಬಾಕ್ಸ್‌ ಟೊಮೆಟೋಗೆ 50 ರೂಪಾಯಿ ಬೆಲೆ ಕೇಳುತ್ತಿದ್ದಾರೆ. ಇನ್ನು ಸಲ ರೈತರು ಈ ಭಾಗಗಳಲ್ಲಿಯೂ ಟೊಮ್ಯಾಟೋ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿದ್ದಾರೆ.

ಒಂದೇ ಸಲ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಮಾರುಕಟ್ಟೆಗೆ ಬಂದಿದ್ದರಿಂದ ಬೆಲೆ ಕಡಿಮೆಯಾಗಲು ಕಾರಣ ಅಥವಾ ಏನು ಎಂಬುದು ಗೊತ್ತಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕಡಿಮೆಯಿದೆ. ಈ ಸಮಯದಲ್ಲಿ ಈ ಬೆಳೆ ಕಿತ್ತು, ಬೇರೆ ಬೆಳೆ ಬೆಳೆಸಲು ಮತ್ತಷ್ಟು ಹಣ ಖರ್ಚು ಮಾಡಿ ಬೆಳೆಯ ಬೇಕಾಗುತ್ತದೆ. ಇದರಿಂದ ರೈತರಿಗೆ ಬಾರಿ ಹೊರೆಯಾಗುತ್ತದೆ. ಇನ್ನೂ ಈ ಬಗ್ಗೆ ತೋಟಗಾರಿಕೆ ಅಧಿಕಾರಿ ವಿಶ್ವನಾಂಥ್ ಮಾತನಾಡಿದ್ದು, ಬೀದರ್ ಜಿಲ್ಲೆಯಲ್ಲಿ 672ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆಯನ್ನು ಬೆಳೆದಿದ್ದಾರೆ. ಕಳೆದ ವರ್ಷಕಿಂತ ಈ ವರ್ಷ ಶೇಕಡಾ 10 ಹೆಚ್ಚಾಗಿ ಟೊಮ್ಯಾಟೊ ಬೆಳೆಯನ್ನು ಬೆಳೆದಿದ್ದಾರೆ. ಕಳೆದ ವಾರದಲ್ಲಿ ಟೊಮ್ಯಾಟೋ ಬೆಲೆ ಕುಸಿತ ಕಂಡಿದೆ ಮತ್ತು ಹೈದರಾಬಾದ್​ ಭಾಗದಲ್ಲಿ ಈಗ ಕಳೆದ ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ಬೆಲೆಯು ಏರುತ್ತಿದೆ. ಹೀಗಾಗಿ ರೈತರು ಬೆಳೆಯನ್ನು ನಾಶ ಪಡಿಸದೇ ಇಟ್ಟು ಕೊಂಡು ಕಾಪಾಡಿಕೊಳ್ಳಬೇಕೆಂದು ಹೇಳಿದ್ದಾರೆ.

ರೈತರು ಕೊರೊನಾ ಸಂಕಷ್ಟದಿಂದ ಹೊರ ಬರುವ ಮೊದಲೇ ಈಗ ಟೊಮ್ಯಾಟೋ ಬೆಲೆ ಕುಸಿತವಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ರೈತರ ಸಂಕಷ್ಟಗಳನ್ನು ಪದೇ ಪದೇ ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು ಪ್ರಯೋಜನವಾಗುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿದ್ದಾಗ ಬೆಳೆಗಳನ್ನೇ ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದರೂ ನಮ್ಮ ಕಷ್ಟಗಳಿಗೆ ಯಾರು ಸ್ಪಂದಿಸುವುದಿಲ್ಲ ಎಂದು ತಿಳಿದ ಮೇಲೆ ರೈತರು ನಮ್ಮ ಬೆಳೆಗಳನ್ನು ತಾವೇ ನಾಶ ಮಾಡಿ ಜಮೀನಿಗೆ ಗೊಬ್ಬರ ಮಾಡುತ್ತಿದ್ದಾರೆ. ಆದರೆ ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ, ಜೀವನ ನಡೆಸಲೂ ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: ರೈತ ಮಹಿಳೆಯ ನೋವು, ಅನುಭವಿಸುತ್ತಿರುವ ಯಾತನೆ ಕೇಳಿಸಿಕೊಂಡಾಗ ಯಡಿಯೂರಪ್ಪ ಸದನದಲ್ಲಿ ಆಡಿದ ಮಾತು ನೆನಪಾಗುತ್ತದೆ

ರಾಮನಗರ: ಒಕ್ಕಣೆ ಮಾಡಲೆಂದು ಹಾಕಲಾಗಿದ್ದ ರಾಗಿ ಮೆದೆಗೆ ಕಿಡಿಗೇಡಿಗಳಿಂದ ಬೆಂಕಿ; ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ

ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ