ಕೈ ಕೊಟ್ಟ ಮುಂಗಾರು; ಆಕಾಶದತ್ತ ರೈತರ ಚಿತ್ತ, ಉತ್ತಮ ಮಳೆಯಾಗದಿದ್ದರೆ ಕೃಷಿ ಚಟುವಟಿಕೆ ಕಷ್ಟ
ಧಾರವಾಡ ಕೃಷಿ ವಿಶ್ವವಿದ್ಯಾಲಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಕೇರಳದಲ್ಲಿ ಜೂನ್ 9 ರಂದು ಮುಂಗಾರು ಎಂಟ್ರಿ ಕೊಡಲಿದೆ. ಕೇರಳಕ್ಕೆ ಬಂದು ಹದಿನೈದು ದಿನಕ್ಕೆ ನಮ್ಮ ಕಡೆ ಮುಂಗಾರು ಆರಂಭ ಆಗುವುದು ಪ್ರತಿತಿ ಇದೆ. ಸದ್ಯ ಬಿತ್ತನೆ ಮಾಡುವುದಕ್ಕೆ ರೈತರು ಭೂಮಿ ರೆಡಿ ಮಾಡಿಕೊಂಡಿದ್ದಾರೆ.
ಹಾವೇರಿ: ರಾಜ್ಯದಲ್ಲಿ ಮುಂಗಾರು(Monsoon) ಮಳೆ ವಿಳಂಬವಾಗಿದ್ದು ಹಲವು ಜಿಲ್ಲೆಗಳಲ್ಲಿ ರೈತರು ತಲೆ ಮೇಲೆ ಕೈ ಹೊತ್ತು ಮಳೆರಾಯನಿಗಾಗಿ ಕಾಯುತ್ತಿದ್ದಾರೆ. ಬಿತ್ತನೆ ಮಾಡುವುದಕ್ಕೆ ರೈತರು(Farmers) ಭೂಮಿ ರೆಡಿ ಮಾಡಿಕೊಂಡು ಆಕಾಶ ನೋಡುತ್ತಿದ್ದಾರೆ. ಮಂಗಳೂರು, ಬೆಳಗಾವಿ ಸೇರಿದಂತೆ ಮತ್ತೊಂದಷ್ಟು ಕಡೆ ಮಳೆ ಇಲ್ಲದೆ ನೀರಿನ ಸಮಸ್ಯೆಗಳು ಎದುರಾಗಿವೆ. ತೊಟ್ಟು ಹನಿಗೂ ಪರಿತಪಿಸುತ್ತಿದ್ದಾರೆ. ಸದ್ಯ ಹಾವೇರಿ ಜಿಲ್ಲೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ Tv9 ಜೊತೆ ಮಾತನಾಡಿದ್ದು ಉತ್ತಮ ಮಳೆ ಆದ ಬಳಿಕ ಅಗತ್ಯ ಕೃಷಿ ಚಟುವಟಿಕೆಗೆ ನಮ್ಮ ಇಲಾಖೆ ತಯಾರಿ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಕೇರಳದಲ್ಲಿ ಜೂನ್ 9 ರಂದು ಮುಂಗಾರು ಎಂಟ್ರಿ ಕೊಡಲಿದೆ. ಕೇರಳಕ್ಕೆ ಬಂದು ಹದಿನೈದು ದಿನಕ್ಕೆ ನಮ್ಮ ಕಡೆ ಮುಂಗಾರು ಆರಂಭ ಆಗುವುದು ಪ್ರತಿತಿ ಇದೆ. ಸದ್ಯ ಬಿತ್ತನೆ ಮಾಡುವುದಕ್ಕೆ ರೈತರು ಭೂಮಿ ರೆಡಿ ಮಾಡಿಕೊಂಡಿದ್ದಾರೆ. ಪೂರ್ಣ ಮುಂಗಾರಿಗೆ 119 MM ಮಳೆ ಆಗಬೇಕಿತ್ತು. ಆದ್ರೆ ಇದುವರೆಗೂ ಕೇವಲ 83 ಮಳೆ ಆಗಿದೆ. ರೈತರಿಗೆ ನಮ್ಮ ಇಲಾಖೆಯಿಂದ ಸಮರ್ಪಕವಾಗಿ ಬೀಜ ಮತ್ತು ರಸಗೊಬ್ಬರ ವಿತರಣೆ ಮಾಡಲಾಗುತ್ತೆ. ವಿತರಣೆ ಸಂದರ್ಭದಲ್ಲಿ ತಕ್ಷಣ ಬಿತ್ತನೆಗೆ ಹೊಗಬೇಡಿ ಅಂತಾ ಸಲಹೆ ಕೊಡ್ತಾ ಇದ್ದೆವೆ. ಜಿಲ್ಲೆಯಲ್ಲಿ ಮಳೆ ಆಗದೆ ಇರುವ ಹಿನ್ನೆಲೆ ಬಿತ್ತನೆ ಎಷ್ಟರ ಮಟ್ಟಿಗೆ ಆಗಿದೆ ಎಂಬ ಕ್ಲೀಯರ ಮಾಹಿತಿ ಇಲ್ಲ. ಆದ್ರೆ ನಮಗೆ ಬಂದ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಆಗಲಿದೆ. ಉತ್ತಮ ಮಳೆ ಆದ ಬಳಿಕ ಅಗತ್ಯ ಕೃಷಿ ಚಟುವಟಿಕೆಗೆ ನಮ್ಮ ಇಲಾಖೆ ತಯಾರಿ ಮಾಡಿಕೊಂಡಿದೆ ಎಂದು ಹಾವೇರಿ ಜಿಲ್ಲೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ವಿವರಿಸಿದರು.
ಮುಂಗಾರು ರೈತರಿಗೆ ಕೈ ಕೊಟ್ಟಿದೆ
ಇನ್ನು ಬಾಗಲಕೋಟೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಇದುವರೆಗೂ ಮುಂಗಾರು 102 mm ಮಳೆಯಾಗಬೇಕಿತ್ತು. ಆದರೆ 71.8 mm ಮಾತ್ರ ಮಳೆ ಆಗಿದೆ. 30% ಮಳೆಕೊರತೆಯಾಗಿದೆ. ಮಳೆ ಕೊರತೆ ಹಿನ್ನೆಲೆ ರೈತರಿಗೆ ಮುಂಗಾರು ಬಿತ್ತನೆ ಕೊರತೆಯಾಗಿದೆ. ಹೆಸರು ಬೇಳೆ 20 ಸಾವಿರ ಹೆಕ್ಟೇರ್, ತೊಗರಿ 30, ಜೋಳ 40 ಸಾವಿರ ಹೆಕ್ಟೇರ್ ಇತರೆ ಸೇರಿ 2 ಲಕ್ಷ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಾರೆ. ಆದರೆ ಎಲ್ಲೊ ಕೆಲ ಕಡೆ ಕೆಲವೇ ಎಕರೆಗಳಲ್ಲಿ ಬಿತ್ತನೆ ಆಗಿದೆ. ಉಳಿದಂತೆ ಮುಂಗಾರು ಬಿತ್ತನೆ ಆಗಿಲ್ಲ. ಹದ ಮಳೆ ಆಗುವವರೆಗೂ ರೈತರು ಬಿತ್ತನೆ ಮಾಡದೆ ಇರೋದು ಒಳ್ಳೆಯದು. ರೈತಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಶುರು ಮಾಡಿದ್ದೇವೆ. 8.500 ಕ್ವಿಂಟಲ್‌ಬೀಜ ಸಂಗ್ರಹವಿದೆ. ಮಳೆ ಇರದ ಕಾರಣ ಹೆಚ್ಚು ರೈತರು ಬೀಜ ಪಡೆಯಲು ಮುಂದೆ ಬರುತ್ತಿಲ್ಲ. ಇದುವರೆಗೂ ಕೇವಲ 450 ಕ್ವಿಂಟಲ್ ಬೀಜ ಮಾತ್ರ ವಿತರಣೆಯಾಗಿದೆ. ಬಿತ್ತನೆ ಬೀಜದ ಕೊರತೆಯಿಲ್ಲ. ರಸಗೊಬ್ಬರದ ಕೊರತೆ ಕೂಡ ಇಲ್ಲ. ಮುಂಗಾರಿನಲ್ಲಿ 99 ಸಾವಿರ ಮೆ ಟನ್ ಗೊಬ್ಬರ ಅವಶ್ಯಕತೆಯಿದೆ. ಈಗಾಗಲೇ ನಮ್ಮ ಬಳಿ 65 ಸಾವಿರ ಮೆ ಟನ್ ಗೊಬ್ಬರ ಸಂಗ್ರಹವಿದೆ. ಡಿಎಪಿ, ಯೂರಿಯಾ, ಕಾಂಪ್ಲೆಕ್ಸ್ ಎಲ್ಲವೂ ಸ್ಟಾಕ್ ಇದೆ. ಸಂಪೂರ್ಣ ಹದ ಮಳೆಯಾದ ಮೇಲೆ ಬಿತ್ತನೆ ಮಾಡಿ ಎಂದು ರೈತರಿಗೆ ಸಲಹೆ ಕೊಟ್ಟಿದ್ದೇವೆ. ಕಳೆದ ಬಾರಿ ಇಷ್ಟೊತ್ತಿಗಾಗಲೇ ಬಿತ್ತನೆಯಾಗಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕೈಕೊಟ್ಟ ಮುಂಗಾರು ಮಳೆ
ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷ 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದ್ದ ಮೆಕ್ಕೆ ಜೋಳ, ಈ ವರ್ಷ ಮಳೆ ಕೊರತೆಯಿಂದ ಶೇಕಡಾ 50 ರಷ್ಟೂ ಬಿತ್ತನೆ ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲ ಮಳೆ ನಂಬಿ ಬಿತ್ತಿದ ಬೆಳೆ ಕೂಡ ಮಳೆಯಿಲ್ಲದೆ ನಾಶವಾಗೋ ಆತಂಕ ಎದುರಾಗಿದೆ. ಕೆಲವೆಡೆ ಮಳೆಯಿಲ್ಲದೆ ಭೂಮಿಯೊಳಗೇ ಮೆಕ್ಕೆಜೋಳ ಒಣಗಿ ಹೋಗ್ತಿವೆ. ಮಳೆಯ ಮೇಲಾಟದಿಂದ ವರ್ಷದಿಂದ ವರ್ಷಕ್ಕೆ ಆಲೂಗಡ್ಡೆ ಬೆಳೆ ಕುಂಠಿತವಾಗ್ತಿದೆ. 2021-22 ರ ಅವಧಿಯಲ್ಲಿ 12,500 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತಿತ್ತು. ಕಳೆದ ವರ್ಷ 6500 ಹೆಕ್ಟೇರ್ಗೆ ಆಲೂಗಡ್ಡೆ ಬಿತ್ತನೆ ಕುಸಿದಿದೆ. ಈ ವರ್ಷ ಈ ಪ್ರಮಾಣ ಮತ್ತಷ್ಟು ಕುಸಿಯೋ ಆತಂಕ ಇದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಆಲೂಗಡ್ಡೆ ಬೆಳೆಯನ್ನೇ ರೈತರು ಕೈ ಬಿಡುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:02 pm, Thu, 8 June 23