ಬೆಳಗಾವಿಯಂತೆ ಉಡುಪಿಯಲ್ಲೂ ನೀರಿನ ತೀವ್ರ ಅಭಾವ ಎದುರಾಗಿದೆ, ಮಳೆ ಸುರಿಯದಿದ್ದರೆ ಬಹಳ ಕಷ್ಟ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಬೆಳಗಾವಿಯಂತೆ ಉಡುಪಿಯಲ್ಲೂ ನೀರಿನ ತೀವ್ರ ಅಭಾವ ಎದುರಾಗಿದೆ, ಮಳೆ ಸುರಿಯದಿದ್ದರೆ ಬಹಳ ಕಷ್ಟ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 19, 2023 | 2:59 PM

ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವುದನ್ನು ಬಹಳ ದಿನ ಮಾಡಕ್ಕಾಗಲ್ಲ, ಮಳೆರಾಯನ ಕೃಪೆಗೆ ಎದುರು ನೋಡದೆ ಬೇರೆ ದಾರಿಯಿಲ್ಲ ಎಂದು ಸಚಿವೆ ಹೇಳಿದರು.

ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar), ಮಾನ್ಸೂನ್ ವಿಳಂಬಗೊಂಡಿರುವುದರಿಂದ ಕುಡಿಯುವ ನೀರಿನ ಅಭಾವ (water scarcity) ಎದುರಾಗಿದೆ ಎಂದರು. ಹವಾಮಾನ ಇಲಾಖೆ ಒದಗಿಸಿರುವ ಮಾಹಿತಿ ಪ್ರಕಾರ ಮುಂದಿನ 7 ದಿನಗಳಲ್ಲಿ ಮುಂಗಾರು ಚುರುಕುಗೊಳ್ಳಲಿದೆ, ಹಾಗೇ ಆಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ ಎಂದು ಸಚಿವೆ ಹೇಳಿದರು. ಬೆಳಗಾವಿಯ ಜಲಾಶಯಗಳಲ್ಲಿ ನೀರಿನಮಟ್ಟ ಪಾತಾಳ ಕಂಡಿದೆ, ನೀರಿನ ತೊಂದರೆ ಇರುವ ಕಡೆಗಳಲ್ಲೆಲ್ಲ ಟ್ಯಾಂಕರ್ ಗಳ ಮೂಲಕ ನೀರಿ ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದರು. ಉಡುಪಿ ಜಿಲ್ಲೆಯಲ್ಲೂ (Udupi district) ನೀರಿನ ಸಮಸ್ಯೆ ಉಂಟಾಗಿದೆ ಎಂದು ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವುದನ್ನು ಬಹಳ ದಿನ ಮಾಡಕ್ಕಾಗಲ್ಲ, ಮಳೆರಾಯನ ಕೃಪೆಗೆ ಎದುರು ನೋಡದೆ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ