ಯೋಗಿ ಬಗ್ಗೆ ಇರೋ ಬೇಸರ ಹೇಳಿಕೊಂಡ ದುನಿಯಾ ವಿಜಯ್

Updated on: Feb 10, 2025 | 8:23 AM

ದುನಿಯಾ ವಿಜಯ್ ಹಾಗೂ ಯೋಗಿ ಮಧ್ಯೆ ಮನಸ್ತಾಪ ಇದೆ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಆದರೆ, ಈಗ ಇವರು ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಅದಕ್ಕೆ ಕಾರಣ ಆಗಿದ್ದು, ‘ಸಿದ್ಲಿಂಗು 2’ ಚಿತ್ರದ ಪ್ರೀ ರಿಲೀಸ್ ಈವೆಂಟ್. ಆ ಬಗ್ಗೆ ಇಲ್ಲಿದೆ ವಿವರ.

ದುನಿಯಾ ವಿಜಯ್ ಹಾಗೂ ಯೋಗಿ ಒಂದೇ ವೇದಿಕೆ ಹಂಚಿಕೊಂಡರು. ಇದಕ್ಕೆ ಕಾರಣ ಆಗಿದ್ದು, ‘ಸಿದ್ಲಿಂಗು 2’ ಚಿತ್ರದ ಪ್ರೀ ರಿಲೀಸ್ ಈವೆಂಟ್. ‘ಯೋಗಿ ಅವರ ಫ್ಯಾನ್ ನಾನು. ಭಯ ಇಲ್ಲದೆ ನಿಲ್ಲುತ್ತಾನೆ. ಎಲ್ಲರಿಗೂ ಅದು ಬರುವುದಿಲ್ಲ. ಅದನ್ನು ಮೀರಿ ಯೋಗಿ ನಿಲ್ಲುತ್ತಾನೆ. ಯೋಗಿ ಅವರಿಗೆ ಒಳ್ಳೆಯ ಸ್ಕ್ರಿಪ್ಟ್ ಬೇಕು. ಅವರ ಕ್ಯಾಪಾಸಿಟಿ ಬೇರೆಯದೇ ಇದೆ. ಅದಕ್ಕೆ ಟೈಮ್ ಬರುತ್ತದೆ. ಅವನ ಜೊತೆ ನಾನಿರ್ತೀನಿ’ ಎಂದಿದ್ದಾರೆ ವಿಜಯ್. ಯೋಗಿ ಹಾಗೂ ವಿಜಯ್​ಗೆ ಹಿಟ್ ತಂದುಕೊಟ್ಟಿದ್ದು ‘ದುನಿಯಾ’ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More