‘ಇದು ಕೊರೊನಾಗಿಂತ ದೊಡ್ಡ ಕಾಯಿಲೆ, ಅದಕ್ಕೆ ಮದ್ದು ಇಲ್ಲ’: ದುನಿಯಾ ವಿಜಯ್​ ಹೇಳಿದ್ದು ಯಾವುದರ ಬಗ್ಗೆ?

Updated on: Sep 19, 2023 | 7:07 PM

‘ಯುಐ ಸಿನಿಮಾದ ಟೀಸರ್​ ವಿಶೇಷವಾಗಿದೆ. ಮೊಬೈಲ್​ ಬಿಟ್ಟು ಕಲ್ಪನೆಗೆ ಜಾಗ ನೀಡಲು ಈ ಟೀಸರ್ ಸಹಾಯಕ ಆಗುತ್ತದೆ. ಮನೆಗೆ ಹೋಗಿ ನಾನು ಮತ್ತೊಮ್ಮೆ ಟೀಸರ್​ ನೋಡುತ್ತೇನೆ. ಸಿನಿಮಾ ಹೇಗಿರಬಹುದು ಅಂತ ನಾನೊಂದು ಕಲ್ಪನೆ ಮಾಡಿಕೊಳ್ಳುತ್ತೇನೆ’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

‘ರಿಯಲ್​ ಸ್ಟಾರ್​’ ಉಪೇಂದ್ರ (Upendra) ನಿರ್ದೇಶನ ಮಾಡುತ್ತಿರುವ ‘ಯುಐ’ ಚಿತ್ರದ ಟೀಸರ್​ (UI Movie Teaser) ಬಿಡುಗಡೆ ಮಾಡಲಾಗಿದೆ. ಸೋಮವಾರ (ಸೆಪ್ಟೆಂಬರ್​ 18) ನಡೆದ ಟೀಸರ್​ ಲಾಂಚ್​ ಕಾರ್ಯಕ್ರಮಕ್ಕೆ ದುನಿಯಾ ವಿಜಯ್​ ಅವರು ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮೊಬೈಲ್​ ವ್ಯಸನದ ಬಗ್ಗೆ ಅವರು ಮಾತನಾಡಿದರು. ಅದನ್ನು ಒಂದು ಕಾಯಿಲೆಗೆ ಅವರು ಹೋಲಿಸಿದ್ದಾರೆ. ‘ನಿಜವಾಗಿಯೂ ಯುಐ ಟೀಸರ್​ ವಿಶೇಷವಾಗಿದೆ. ತಲೆ ಬಗ್ಗಿಸಿಕೊಂಡು ಮೊಬೈಲ್​ ನೋಡುವುದು ಕೊರೊನಾಗಿಂತ ದೊಡ್ಡ ಕಾಯಿಲೆ. ಆ ವೈರಸ್​ಗೆ ಯಾವುದೇ ಮದ್ದು ಬರುವುದಿಲ್ಲವೇನೋ. ಮೊಬೈಲ್​ ಬಿಟ್ಟು ಕಲ್ಪನೆಗೆ ಜಾಗ ನೀಡಲು ಈ ಟೀಸರ್ ಸಹಾಯಕ ಆಗುತ್ತದೆ. ಮನೆಗೆ ಹೋಗಿ ನಾನು ಟೀಸರ್​ ನೋಡುತ್ತೇನೆ. ಸಿನಿಮಾ ಹೇಗಿರಬಹುದು ಅಂತ ನಾನೊಂದು ಕಲ್ಪನೆ ಮಾಡಿಕೊಳ್ಳುತ್ತೇನೆ’ ಎಂದು ದುನಿಯಾ ವಿಜಯ್​ (Duniya Vijay) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More