ದುರ್ಗಾಷ್ಟಮಿಯಂದು ಮಹಾಗೌರಿ ಪೂಜೆ ನೀಡುವ ವಿಶೇಷ ಫಲಗಳಿವು

Updated on: Sep 30, 2025 | 7:16 AM

ಆಶ್ವೀಜ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಈ ಆರಾಧನೆಯು ಮುಂದಿನ ಆಶ್ವೀಜ ಮಾಸದವರೆಗೆ ಸವಾಲುಗಳನ್ನು ಎದುರಿಸಲು ಶಕ್ತಿ, ಧೈರ್ಯ, ಸ್ಥೈರ್ಯ, ಮತ್ತು ನಂಬಿಕೆಯನ್ನು ನೀಡುತ್ತದೆ. ದುರ್ಗಾದೇವಿಯ ಎಂಟನೇ ಶಕ್ತಿ ಸ್ವರೂಪವೇ ಮಹಾಗೌರಿ. ಈ ತಾಯಿಯು ಋಷಭ ವಾಹಿನಿಯಾಗಿದ್ದು, ಚತುರ್ಭುಜೆ ಮತ್ತು ಶ್ವೇತ ವರ್ಣವನ್ನು ಹೊಂದಿರುತ್ತಾಳೆ.

ನವರಾತ್ರಿಯ ಅಷ್ಟಮಿ ತಿಥಿಯಂದು ದುರ್ಗಾದೇವಿಯ ಎಂಟನೇ ರೂಪವಾದ ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಶುಕ್ಲ ಪಕ್ಷದ ಅಷ್ಟಮಿಯಂದು ಈ ತಾಯಿಯ ಪೂಜೆಯು ಜೀವನದ ಸವಾಲುಗಳನ್ನು ಎದುರಿಸಲು ಶಕ್ತಿ, ಧೈರ್ಯ ಮತ್ತು ನಂಬಿಕೆಯನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಕೋಸಂಬರಿ, ಬೆಲ್ಲದ ಪಾಯಸ, ಮತ್ತು ಹೋಳಿಗೆಯನ್ನು ಮಹಾಗೌರಿಗೆ ನೈವೇದ್ಯವಾಗಿ ಅರ್ಪಿಸಿ, ಮಂತ್ರ ಜಪಿಸುವುದರಿಂದ ಅವಿವಾಹಿತರಿಗೆ ಉತ್ತಮ ಸಂಗಾತಿ ಲಭಿಸಿ, ವಿವಾಹಿತರಲ್ಲಿ ಸಾಮರಸ್ಯ ಹೆಚ್ಚುತ್ತದೆ ಎಂದು ಭಾವಿಸಲಾಗಿದೆ. ದುರ್ಗಾಷ್ಟಮಿಯಂದು ಮಹಾಗೌರಿ ಪೂಜೆ ನೀಡುವ ವಿಶೇಷ ಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.