AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DKS meets BSY: ಬಿಎಸ್ ಯಡಿಯೂರಪ್ಪ ಮನೆಗೆ ಸೌಜನ್ಯತೆಯ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಡಿಕೆ ಶಿವಕುಮಾರ್

DKS meets BSY: ಬಿಎಸ್ ಯಡಿಯೂರಪ್ಪ ಮನೆಗೆ ಸೌಜನ್ಯತೆಯ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 01, 2023 | 5:05 PM

Share

ಉಪ ಮುಖ್ಯಮಂತ್ರಿಯನ್ನು ಮಾಜಿ ಮುಖ್ಯಮಂತ್ರಿ ತಮ್ಮ ಮನೆಯ ಮೇನ್ ಗೇಟ್ ವರೆಗೆ ಬಂದು ಸ್ವಾಗತಿಸಿದರು.

ಬೆಂಗಳೂರು: ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳಲ್ಲ ಅಂತ ಹೇಳುತ್ತಾರೆ. ಚುನಾವಣೆಗೆ ಮೊದಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಪರಸ್ಪರ ಟೀಕಿಸುತ್ತಿದ್ದರು. ಚುನಾವಣೆಯ ನಂತರ ಇಬ್ಬರು ನಾಯಕರು ಅದನ್ನೆಲ್ಲ ಮರೆತಿದ್ದಾರೆ. ಅದಕ್ಕೆ ಪುರಾವೆ ಇಲ್ಲಿದೆ. ಶಿವಕುಮಾರ್ ತಮ್ಮ ಬಿಡುವಿಲ್ಲದ ಸಭೆ-ಕೆಲಸಗಳ ನಡುವೆ ಪುರಸೊತ್ತು ಮಾಡಿಕೊಂಡು ಯಡಿಯೂರಪ್ಪರನ್ನು ಅವರ ಡಾಲರ್ಸ್ ಕಾಲೋನಿ (Dollars Colony) ಮನೆಯಲ್ಲಿ ಬೇಟಿಯಾದರು. ಉಪ ಮುಖ್ಯಮಂತ್ರಿಯನ್ನು ಮಾಜಿ ಮುಖ್ಯಮಂತ್ರಿ ತಮ್ಮ ಮನೆಯ ಮೇನ್ ಗೇಟ್ ವರೆಗೆ ಬಂದು ಸ್ವಾಗತಿಸಿದರು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ