Video: ಪ್ರಬಲ ಭೂಕಂಪ: ಅಸ್ಸಾಂ ಆಸ್ಪತ್ರೆಯಲ್ಲಿ ಕಂಪನದ ವೇಳೆ ದೇವರಂತೆ ಬಂದು ಶಿಶುಗಳನ್ನು ಕಾಪಾಡಿದ ನರ್ಸ್​ಗಳು

Updated on: Sep 15, 2025 | 9:25 AM

ಅಸ್ಸಾಂನಲ್ಲಿ ಭಾನುವಾರ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ವೇಳೆ ಆಸ್ಪತ್ರೆಯೊಂದರಲ್ಲಿ ನರ್ಸ್​​ಗಗಳು ದೇವರಂತೆ ಬಂದು ಶಿಶುಗಳನ್ನು ಕಾಪಾಡಿರುವ ವಿಡಿಯೋ ಎಲ್ಲೆಡೆ ವೈರ್ಲ ಆಗುತ್ತಿದೆ. ನಾಗಾಂವ್ ನಗರದ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಈ ಘಟನೆ ನಡೆದಿದೆ. ನರ್ಸ್​ಗಳ ಧೈರ್ಯದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆದಿತ್ಯ ನರ್ಸಿಂಗ್ ಹೋಂನಲ್ಲಿ ಸಂಜೆ 4.40 ರ ಸುಮಾರಿಗೆ ಸೆರೆಹಿಡಿಯಲಾದ ಈ ವೀಡಿಯೊದಲ್ಲಿ, ಭೂಕಂಪ ಸಂಭವಿಸಿದಾಗ ಇಬ್ಬರು ನರ್ಸ್‌ಗಳು NICU ನಲ್ಲಿರುವ ಶಿಶುಗಳ ಸಹಾಯಕ್ಕೆ ತಕ್ಷಣವೇ ಓಡಿ ಹೋಗಿರುವುದನ್ನು ಕಾಣಬಹುದು.

ಗುವಾಹಟಿ, ಸೆಪ್ಟೆಂಬರ್ 15: ಅಸ್ಸಾಂನಲ್ಲಿ ಭಾನುವಾರ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ವೇಳೆ ಆಸ್ಪತ್ರೆಯೊಂದರಲ್ಲಿ ನರ್ಸ್​​ಗಗಳು ದೇವರಂತೆ ಬಂದು ಶಿಶುಗಳನ್ನು ಕಾಪಾಡಿರುವ ವಿಡಿಯೋ ಎಲ್ಲೆಡೆ ವೈರ್ಲ ಆಗುತ್ತಿದೆ. ನಾಗಾಂವ್ ನಗರದ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಈ ಘಟನೆ ನಡೆದಿದೆ. ನರ್ಸ್​ಗಳ ಧೈರ್ಯದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆದಿತ್ಯ ನರ್ಸಿಂಗ್ ಹೋಂನಲ್ಲಿ ಸಂಜೆ 4.40 ರ ಸುಮಾರಿಗೆ ಸೆರೆಹಿಡಿಯಲಾದ ಈ ವೀಡಿಯೊದಲ್ಲಿ, ಭೂಕಂಪ ಸಂಭವಿಸಿದಾಗ ಇಬ್ಬರು ನರ್ಸ್‌ಗಳು NICU ನಲ್ಲಿರುವ ಶಿಶುಗಳ ಸಹಾಯಕ್ಕೆ ತಕ್ಷಣವೇ ಓಡಿ ಹೋಗಿರುವುದನ್ನು ಕಾಣಬಹುದು.

ಒಬ್ಬ ನರ್ಸ್ ಎರಡು ಶಿಶುಗಳನ್ನು ಹಿಡಿದುಕೊಂಡಿದ್ದರೆ, ಇನ್ನೊಬ್ಬ ನರ್ಸ್ ಒಂದು ಶಿಶುವನ್ನು ರಕ್ಷಿಸುತ್ತಾರೆ. ಬಲವಾದ ಕಂಪನದ ಪರಿಣಾಮವಾಗಿ ಕೊಠಡಿಯಲ್ಲಿರುವ ಕನ್ನಡಿ, ಆಮ್ಲಜನಕ ಸಿಲಿಂಡರ್ ಮತ್ತು ಇತರ ವೈದ್ಯಕೀಯ ಉಪಕರಣಗಳು ಸೇರಿದಂತೆ ವಸ್ತುಗಳು ಅಲುಗಾಡುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ