ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಸಿಕ್ಕಿತು ಕ್ಲೀನ್ ಚಿಟ್

Updated on: Oct 02, 2026 | 12:22 PM

ಐಫೆಲ್ ಟವರ್‌ನಲ್ಲಿ BAPS ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿ ನಿರ್ಬಂಧ ವಿವಾದಕ್ಕೆ ತನಿಖೆಯಿಂದ ಸ್ಪಷ್ಟತೆ ಸಿಕ್ಕಿದೆ. ಪ್ಯಾರಿಸ್ ತನಿಖೆಯಲ್ಲಿ BAPS ನಿಯೋಗದಿಂದ ಯಾವುದೇ ನಿರ್ಬಂಧದ ಸೂಚನೆ ಇರಲಿಲ್ಲ. ಆಂತರಿಕ ಮಾಹಿತಿ ಗೊಂದಲವೇ ಘಟನೆಗೆ ಕಾರಣ ಎಂದು ವರದಿ ಹೇಳಿದೆ. BAPS ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಸಾಧುಗಳ ಬ್ರಹ್ಮಚರ್ಯದ ಬಗ್ಗೆ ಇದ್ದ ತಪ್ಪು ತಿಳುವಳಿಕೆ ದೂರವಾಗಿದೆ ಎಂದಿದೆ.

ಪ್ಯಾರಿಸ್‌ನ ವಿಶ್ವವಿಖ್ಯಾತ ಐಫೆಲ್ ಟವರ್‌ನಲ್ಲಿ ಸೆಪ್ಟೆಂಬರ್ 5ರಂದು BAPS ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿರಿಸಿದ ಕುರಿತು ಉಂಟಾಗಿದ್ದ ವಿವಾದಕ್ಕೆ ಇದೀಗ ತನಿಖೆಯಿಂದ ಸ್ಪಷ್ಟತೆ ದೊರೆತಿದೆ. ಪ್ಯಾರಿಸ್ ನಗರದ ಜನರಲ್ ಇನ್‌ಸ್ಪೆಕ್ಟರೇಟ್ ನಡೆಸಿದ ತನಿಖೆಯಲ್ಲಿ, ಮಹಿಳಾ ಸಿಬ್ಬಂದಿಯನ್ನು ಸಂಪೂರ್ಣವಾಗಿ ಹೊರಗಿಡುವಂತೆ BAPS ನಿಯೋಗದಿಂದ ಯಾವುದೇ ಸ್ಪಷ್ಟ ಅಥವಾ ಲಿಖಿತ ಸೂಚನೆ ನೀಡಲಾಗಿರಲಿಲ್ಲ ಎಂದು ತಿಳಿದುಬಂದಿದ್ದು, ಘಟನೆಗೆ ಮುಖ್ಯ ಕಾರಣ ಸಂಸ್ಥೆಯೊಳಗಿನ ಮಾಹಿತಿ ರವಾನೆ ಮತ್ತು ಕಾರ್ಯನಿರ್ವಹಣೆಯಲ್ಲಿನ ಗೊಂದಲ ಎಂದು ವರದಿ ಹೇಳಿದೆ. ಈ ಬೆಳವಣಿಗೆಯನ್ನು BAPS ಸ್ವಾಗತಿಸಿದ್ದು, ಸಾಧುಗಳ ಆಧ್ಯಾತ್ಮಿಕ ನಿಯಮಗಳು ಮತ್ತು ಬ್ರಹ್ಮಚರ್ಯದ ಬದ್ಧತೆಯ ಕುರಿತು ಉಂಟಾಗಿದ್ದ ತಪ್ಪು ತಿಳುವಳಿಕೆ ನಿವಾರಣೆಯಾಗಿರುವುದು ಸಂತಸದ ಸಂಗತಿ ಎಂದು ತಿಳಿಸಿದೆ. ಇದಲ್ಲದೇ ನಮ್ಮ ಸಂಸ್ಥೆಯಲ್ಲಿ ಶೇಕಡಾ 50 ಕ್ಕೂ ಹೆಚ್ಚು ಮಹಿಳಾ ಭಕ್ತರಿದ್ದು, ಸಾಧುಗಳು ತಮ್ಮ ಕುಟುಂಬದ ಆಶೀರ್ವಾದದೊಂದಿಗೆ ಬ್ರಹ್ಮಚರ್ಯ ಪಾಲಿಸುತ್ತಿದ್ದಾರೆ. ಮಹಂತ್ ಸ್ವಾಮಿ ಮಹಾರಾಜರ ಮಾರ್ಗದರ್ಶನದಲ್ಲಿ ಪರಸ್ಪರ ಗೌರವ, ಸೇವೆ ಹಾಗೂ ಸನಾತನ ಧರ್ಮದ “ಸತ್ಯಮೇವ ಜಯತೇ” ತತ್ವವನ್ನು ನಾವು ಪ್ರತಿಪಾದಿಸುತ್ತಿದ್ದೇವೆ ಎಂದು BAPS ಹೇಳಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published on: Oct 02, 2026 12:21 PM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More