ಚುನಾವಣೆಯ ಕಾವು: ಕೋಲಾರದಲ್ಲಿ ಭರ್ಜರಿ‌ ಬಾಡೂಟಕ್ಕೆ ಮುಗಿಬಿದ್ದ ಜನರು

Updated on: Feb 26, 2023 | 6:49 PM

ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಎಲ್ಲೆಡೆ ಭರ್ಜರಿ ಬಾಡೂಟ ಸಮಾವೇಶಗಳು ನಡೆಯುತ್ತಿದ್ದು, ಜೆಡಿಎಸ್ ಸಮಾವೇಶದಲ್ಲಿ ಭರ್ಜರಿ ಬಾಡೂಟಕ್ಕೆ ಜನರು ಮುಗಿಬಿದ್ದಿರುವಂತಹ ಘಟನೆ ನಡೆದಿದೆ.

ಕೋಲಾರ: ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಎಲ್ಲೆಡೆ ಭರ್ಜರಿ ಬಾಡೂಟ ಸಮಾವೇಶಗಳು ನಡೆಯುತ್ತಿದ್ದು, ಜೆಡಿಎಸ್ (jds) ಸಮಾವೇಶದಲ್ಲಿ ಭರ್ಜರಿ ಬಾಡೂಟಕ್ಕೆ ಜನರು ಮುಗಿಬಿದ್ದಿರುವಂತಹ ಘಟನೆ ನಡೆದಿದೆ. ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ 2 ಸಾವಿರ ಕಾರ್ಯಕರ್ತರು ಸುಮಾರು 500 ಕೆಜಿ ಚಿಕನ್‌ ಬಿರಿಯಾನಿ ಜೊತೆಗೆ ಮೊಸರು ಬಜ್ಜಿ ಸೇವಿಸಿದ್ದಾರೆ. ಜೆಡಿಎಸ್ ಸಿಎಂಆರ್ ಶ್ರೀನಾಥ್ ಸೇರಿದಂತೆ ಜೆಡಿಎಸ್ ಮುಖಂಡರು ಭಾಗಿ ಆಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Feb 26, 2023 06:49 PM
Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More