ಬಾಗಲಕೋಟೆ: ಬೀಳಗಿ ವಿಧಾನಸಭೆ ಕ್ಷೇತ್ರದ ಕಲಾದಗಿಯಲ್ಲಿ ಆರ್ ಅಶೋಕ ಗ್ರಾಮ ವಾಸ್ತವ್ಯ; ದಲಿತರ ಮನೆಯಲ್ಲಿ ಊಟ
ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭೆ ಕ್ಷೇತ್ರದ ಕಲಾದಗಿ ಗ್ರಾಮದ ಕಲ್ಲೊಳ್ಳೆಪ್ಪ ಮಾದರ ಮನೆಯಲ್ಲಿ ವಾಸ್ತವ್ಯ ಹೂಡಿ ಊಟ, ಉಪಹಾರ ಸೇವಿಸಿದ್ದಾರೆ.
ಬಾಗಲಕೋಟೆ: ಗ್ರಾಮ ವಾಸ್ತವ್ಯ (Grama vastavya) ಅಡಿಯಲ್ಲಿ ಕಂದಾಯ ಸಚಿವ ಆರ್ ಅಶೋಕ (R Ashok) ರಾಜ್ಯದ ನಾನಾ ಜಿಲ್ಲೆಗಳ ಗ್ರಮಗಳಲ್ಲಿ ಈಗಾಗಲೆ ವಾಸ್ತವ್ಯ ಹೂಡಿ ಬಂದಿದ್ದಾರೆ. ಈಗ ಬಾಗಲಕೋಟೆ (Bagalakote) ಜಿಲ್ಲೆಯ ಬೀಳಗಿ (Bilagi) ವಿಧಾನಸಭೆ ಕ್ಷೇತ್ರದ ಕಲಾದಗಿ ಗ್ರಾಮದ ಕಲ್ಲೊಳ್ಳೆಪ್ಪ ಮಾದರ ಮನೆಯಲ್ಲಿ ವಾಸ್ತವ್ಯ ಹೂಡಿ ಊಟ, ಉಪಹಾರ ಸೇವಿಸಿದ್ದಾರೆ. ಆರ್.ಅಶೋಕ ಬಿಸಿ ಬಿಸಿ ರೊಟ್ಟಿ, ಪಲ್ಲೆ, ಮೊಸರು ಚಟ್ನಿ, ಉಪ್ಪಿಟ್ಟು ಚುರುಮುರಿ, ಮೊಸರ ಅವಲಕ್ಕಿ ಸವಿದಿದ್ದಾರೆ. ಸಚಿವರಿಗೆ ಕ್ಷೇತ್ರದ ಶಾಸಕ, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಪರಿಷತ್ ಸದಸ್ಯ ಹನಮಂತ ನಿರಾಣಿ, ಉಪ ವಿಭಾಧಿಕಾರಿ ಶ್ವೇತಾ ಬೀಡಿಕರ ಸಾಥ್ ನೀಡಿದರು. ಊಟದ ಬಳಿಕ ಮಾತನಾಡಿದ ಸಚಿವ ಅಶೋಕ ಬಡವರ ಮನೆ ಊಟದ ಸವಿ ಹೆಚ್ಚು. ಇಲ್ಲಿ ಪ್ರೀತಿಯಿಂದ ನಮಗೆ ಊಟ-ಉಪಹಾರ ಕೊಟ್ಟಿದ್ದಾರೆ. ಇದೆಲ್ಲ ಗ್ರಾಮವಾಸ್ತವ್ಯದದ ಸಾಧ್ಯವಾಗಿದೆ. ಪ್ರತಿಯೊಬ್ಬ ರಾಜಕಾರಣಿಯೂ ಈ ರೀತಿ ಕಾರ್ಯಕ್ರಮ ಮಾಡಬೇಕು. ಜನರ ಬಳಿ ಹೋದಾಗಲೇ ಅವರ ಸಮಸ್ಯೆಗಳು ತಿಳಿಯಲು ಸಾಧ್ಯ. ಇನ್ನು ಕಲ್ಲೊಳ್ಳೆಪ್ಪ ಮಾದರ ಕುಟುಂಬಕ್ಕೆ ವೈಯಕ್ತಿವಾಗಿ ಎರಡು ಲಕ್ಷ ರೂ ಕೊಡೋದಾಗಿ ಅಶೋಕ್ ಹೇಳಿದ್ದಾರೆ.
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ

