ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 1 ಕೋಟಿಗೂ ಹೆಚ್ಚು ಹಣ ಜಪ್ತು ಮಾಡಿದ ಕಾರ್ಯಾಚರಣೆಯನ್ನು ಟಿವಿ9ಗೆ ವಿವರಿಸಿದ ಚುನಾವಣಾಧಿಕಾರಿ

ಅರುಣ್​ ಕುಮಾರ್​ ಬೆಳ್ಳಿ

Updated on: Apr 13, 2024 | 6:37 PM

ಕಾರಲ್ಲಿದ್ದವರು ಚೀಲಗಳಲ್ಲಿ ಮಾವಿನ ಹಣ್ಣುಗಳಿವೆ ಅಂತ ಹೇಳುತ್ತಾ ಅಧಿಕಾರಿಯ ಕೈಗೆ ಅದನ್ನು ನೀಡಲು ಪ್ರತಿರೋಧಿಸಿದರಂತೆ. ಆದರೆ ನಿಖಿತಾ ಚೀಲವನ್ನು ಅಕ್ಷರಶಃ ಕಸಿದುಕೊಂಡಿದ್ದಾರೆ. ಅಷ್ಟರಲ್ಲಿ ಮತ್ತೊಂದು ಕಾರು ಅಲ್ಲಿಗೆ ಬಂದಿದ್ದು ದುರುಳರು ಕಾರು, ಬೈಕ್ ಮತ್ತು ಹಣದ ಚೀಲಗಳನ್ನು ಅಲ್ಲೇ ಬಿಟ್ಟು ಆ ಮತ್ತೊಂದು ಕಾರಲ್ಲಿ ಪರಾರಿಯಾಗಿದ್ದಾರೆ.

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇಂದು ಮಧ್ಯಾಹ್ನ ಅಕ್ರಮವಾಗಿ ಸಾಗಿಸುತ್ತಿದ್ದ ಹಣದ ಚೀಲಗಳನ್ನು ಚುನಾವಣಾಧಿಕಾರಿ (election officer) ಮತ್ತು ಪೊಲೀಸರು ಒಂದು ಕಾರ್ಯಚರಣೆಯ ನಂತರ ವಶಪಡಿಸಿಕೊಂಡಿರುವುದನ್ನು ವರದಿ ಮಾಡಿದ್ದೇವೆ. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಚುನಾವಣಾಧಿಕಾರಿ ನಿಖಿತಾ (Nikhita) ಅವರು ಟಿವಿ9 ವರದಿಗಾರನೊಂದಿಗೆ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಹಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಕೇವಲ 4-5 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾಗಿ ಹೇಳಿದ ನಿಖಿತಾ ಹಣ ಸಾಗಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ತಮ್ಮ ಎಫ್ ಎಸ್ ಟಿ (FST) ತಂಡಕ್ಕಾಗಿ ಕಾಯುತ್ತಿದ್ದಾಗ; ಕಾರಲ್ಲಿದ್ದವರು ಚೀಲಗಳಲ್ಲಿ ಮಾವಿನ ಹಣ್ಣುಗಳಿವೆ ಅಂತ ಹೇಳುತ್ತಾ ಅಧಿಕಾರಿಯ ಕೈಗೆ ಅದನ್ನು ನೀಡಲು ಪ್ರತಿರೋಧಿಸಿದರಂತೆ. ಆದರೆ ನಿಖಿತಾ ಚೀಲವನ್ನು ಅಕ್ಷರಶಃ ಕಸಿದುಕೊಂಡಿದ್ದಾರೆ. ಅಷ್ಟರಲ್ಲಿ ಮತ್ತೊಂದು ಕಾರು ಅಲ್ಲಿಗೆ ಬಂದಿದ್ದು ದುರುಳರು ಕಾರು, ಬೈಕ್ ಮತ್ತು ಹಣದ ಚೀಲಗಳನ್ನು ಅಲ್ಲೇ ಬಿಟ್ಟು ಆ ಮತ್ತೊಂದು ಕಾರಲ್ಲಿ ಪರಾರಿಯಾಗಿದ್ದಾರೆ. ಹಣ ಯಾರಿಗೆ ಸೇರಿದ್ದು ಅಂತ ಇನ್ನೂ ಗೊತ್ತಾಗಿಲ್ಲ, ಪೊಲೀಸ್ ಠಾಣೆಯಲ್ಲಿ ಹಣ ಎಣಿಸುವ ಕಾರ್ಯ ನಡೆದಿದ್ದು ಅದು ₹ 1 ಕೋಟಿಗೂ ಜಾಸ್ತಿ ಇರಬಹುದು ಎಂದು ನಿಖಿತಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು ದಕ್ಷಿಣ ಅಭ್ಯರ್ಥಿ ಸೌಮ್ಯ ರೆಡ್ಡಿಗಾಗಿ ಸಿಎಂ ಸಿದ್ದರಾಮಯ್ಯ ರವಿವಾರ ತಡರಾತ್ರಿ ರೋಡ್ ಶೋ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.