Video: ಎತ್ತರದ ಅಪಾರ್ಟ್ಮೆಂಟ್ ಮೇಲೆ ಸಿಲುಕಿಕೊಂಡ ಬೆಕ್ಕು, ಅಗ್ನಿಶಾಮಕ ದಳದ ಕಾರ್ಯಚರಣೆ ಹೇಗಿತ್ತು?
ಚಂದಾಪುರದ ಮಹೇಂದ್ರ ಆರ್ಯ ಅಪಾರ್ಟ್ಮೆಂಟ್‌ನ ಕಿಟಕಿಯ ಸಜ್ಜದ ಮೇಲೆ ಸಿಲುಕಿದ್ದ ಬೆಕ್ಕನ್ನು ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳ ಯಶಸ್ವಿಯಾಗಿ ರಕ್ಷಿಸಿದೆ. ಬೆಕ್ಕು ಹೊರಬರಲಾಗದೆ ಪರದಾಡುತ್ತಿದ್ದು, ಅದರ ಕಿರುಚಾಟ ಕೇಳಿ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೆಕ್ಕನ್ನು ಸುರಕ್ಷಿತವಾಗಿ ರಕ್ಷಿಸಿ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಈ ಮಾನವೀಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು, ಡಿ.29: ಅಪಾರ್ಟ್ಮೆಂಟ್‌ನ ಕಿಟಕಿ ಮೇಲೆ ಸಿಲುಕಿದ್ದ ಬೆಕ್ಕನ್ನು ಅಗ್ನಿಶಾಮಕ ತಂಡ ಕಾಪಾಡಿರುವ ಘಟನೆ ಚಂದಾಪುರದ ಹೀಲಲಿಗೆ ಸಮೀಪದ ಮಹೇಂದ್ರ ಆರ್ಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ತಂಡ ಬೆಕ್ಕಿನ ರಕ್ಷಣೆ ಮಾಡಲಾಗಿದೆ. ಪ್ಲಾಟ್ ಹೊರೆಗೆ ಇರುವ ಕಿಟಕಿಯ ಸಜ್ಜದ ಮೇಲೆ ಹೋಗಿ ಕೂತಿದೆ. ಅಲ್ಲಿಂದ ಹೊರಬರಲಾಗದೆ ಬೆಕ್ಕು ಪರದಾಟ ಮಾಡಿದೆ. ಬೆಕ್ಕಿನ ಕಿರುಚಾಟ ಕೇಳಿ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಬೆಕ್ಕನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ನಂತರ ಮಗುವಿನಂತೆ ಅಪ್ಪಿಕೊಂಡು ಬೆಕ್ಕನ್ನು ಎತ್ತಿಕೊಂಡು ಮಾಲೀಕರು ಮುದ್ದಾಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ